NZ vs SL: ಶ್ರೀಲಂಕಾ ಟಿ20 ವಿಶ್ವಕಪ್‌ನಿಂದ ಔಟ್, ನ್ಯೂಜಿಲೆಂಡ್‌ಗೆ ಸಂಘಟಿತ ಹೋರಾಟದ ಜಯ!
NZ vs SL Match Highlights: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಹೋರಾಟ ನಡೆಸಿದ ನ್ಯೂಜಿಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಶ್ರೀಲಂಕಾ ಎದುರು 61 ರನ್‌ಗಳ ಜಯ ಸಾಧಿಸಿತು. ಆ ಮೂಲಕ ಸೆಮಿಫೈನಲ್‌ಗೆ ಇನ್ನಷ್ಟು ಸನಿಹವಾಗಿದೆ.
ಶ್ರೀಲಂಕಾ ಎದುರು ನ್ಯೂಜಿಲೆಂಡ್ ತಂಡಕ್ಕೆ 61 ರನ್ ಜಯ. -
ಕೊಲಂಬೊ: ಮಿಚೆಲ್ ಸ್ಯಾಂಟ್ನರ್ (Mitchell Santner) ಹಾಗೂ ಕೋಲ್ ಮೆಕಾಂಚಿ ಅವರ ನಿರ್ಣಾಯಕ ಜೊತೆಯಾಟ ಹಾಗೂ ರಚಿನ್ ರವೀಂದ್ರ ಅವರ ಸ್ಪಿನ್ ಮೋಡಿಯಿಂದ ನ್ಯೂಜಿಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ (NZ vs SL) ಶ್ರೀಲಂಕಾ ಎದುರು 61 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಸೆಮಿಫೈನಲ್‌ಗೆ ಕಿವೀಸ್ ತಂಡ ಇನ್ನಷ್ಟು ಸನಿಹವಾಗಿದೆ. ಆದರೆ, ಈ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಶ್ರೀಲಂಕಾ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರ ನಡೆಯಿತು.
ಬುಧವಾರ ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ದುಷ್ಮಾಂತ ಚಮೀರಾ (38ಕ್ಕೆ 3) ಹಾಗೂ ಮಹೇಶ್ ತೀಕ್ಷಣ (30ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಶ್ರೀಲಂಕಾ, ಎದುರಾಳಿ ನ್ಯೂಜಿಲೆಂಡ್ ತಂಡವನ್ನು 84 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಿತ್ತು ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಕೋಲ್ ಮೆಕಾಂಚಿ ಅವರ 84 ರನ್‌ಗಳ ನಿರ್ಣಾಯಕ ಜೊತೆಯಾಟ ಪಂದ್ಯದ ದಿಕ್ಕನ್ನು ಬದಲಿತು. ಒಂದು ಹಂತದಲ್ಲಿ ಕಿವೀಸ್ 20 ಓವರ್‌ಗಳನ್ನು ಮುಗಿಸುವುದು ಅನುಮಾನ ಎಂಬಂತೆ ಅನಿಸಿತ್ತು.
ಸೂರ್ಯಕುಮಾರ್ ಯಾದವ್‌ರನ್ನು ಕೈಬಿಟ್ಟರೆ ನಿಮ್ಮಂಥ ದಡ್ಡರು ಯಾರೂ ಇಲ್ಲ: ಮೈಕಲ್ ವಾನ್!
ಪಂದ್ಯದ ದಿಕ್ಕನ್ನು ಬದಲಿಸಿದ ಸ್ಯಾಂಟ್ನರ್-ಮೆಕಾಂಚಿ
ಆದರೆ, 26 ಎಸೆತಗಳಲ್ಲಿ 47 ರನ್ ಗಳಿಸಿದ ಮಿಚೆಲ್ ಸ್ಯಾಂಟ್ನರ್ ಹಾಗೂ 23 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದ ಕೋಲ್ ಮೆಕಾಂಚಿ, ಶ್ರೀಲಂಕಾ ತಂಡದಲ್ಲಿದ್ದ ಪಂದ್ಯವನ್ನು ಕಸಿದುಕೊಂಡರು. ಅಂತಿಮವಾಗಿ ಕಿವೀಸ್ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 168 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 169 ರನ್ ಸವಾಲಿನ ಗುರಿಯನ್ನು ನೀಡಿತು.
New Zealand rise to the occasion in Colombo to keep their #T20WorldCup 2026 semi-final hopes alive 💪
— ICC (@ICC) February 25, 2026
📝: https://t.co/hMg2rAXfsc pic.twitter.com/cUmI1Uca22
ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯ
169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ ಮೊದಲನೇ ಎಸತೆದಲ್ಲಿ ಇನ್‌ಫಾರ್ಮ್ ಬ್ಯಾಟರ್ ಪಥುಮ್ ನಿಸಾಂಕ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಮೂರನೇ ಓವರ್‌ನಲ್ಲಿ ಚರಿತಾ ಅಸಲಂಕಾ ಅವರನ್ನು ಕೂಡ ಮ್ಯಾಟ್ ಹೆನ್ರಿ ಔಟ್ ಮಾಡುವ ಮೂಲಕ ಆತಿಥೇಯ ತಂಡಕ್ಕೆ ಮರ್ಮಾಘಾತ ನೀಡಿದರು. ಈ ಎರಡೂ ವಿಕೆಟ್‌ಗಳು ಉರುಳಿದ ಬಳಿಕ ಶ್ರೀಲಂಕಾ ತಂಡ ಕಮ್‌ಬ್ಯಾಕ್ ಮಾಡಲು ಫಾರ್ಟ್ ಟೈಮ್ ಸ್ಪಿನ್ನರ್ ರಚಿನ್ ರವೀಂದ್ರ ಅವಕಾಶ ನೀಡಲಿಲ್ಲ.
A superb spell of 4/27 with the ball and useful runs with the bat propelled Rachin Ravindra to the @aramco POTM🥇
— ICC (@ICC) February 25, 2026
📝: https://t.co/hMg2rAXfsc pic.twitter.com/IE29DuUAqM
ರಚಿನ್ ರವೀಂದ್ರ ಸ್ಪಿನ್ ಮೋಡಿ
ಕುಸಾಲ್ ಮೆಂಡಿಸ್, ಪವನ್ ರತ್ನನಾಯಕೆ, ದಸೂನ್ ಶಾನಕ ಹಾಗೂ ದುಷಣ್ ಹೇಮಂತಾ ಅವರನ್ನು ತಮ್ಮ ಸ್ಪಿನ್ ಮೋಡಿಯಿಂದ ರಚಿನ್ ರವೀಂದ್ರ ಔಟ್ ಮಾಡಿದರು. ಆ ಮೂಲಕ ಶ್ರೀಲಂಕಾ ತಂಡದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಕೆಡವಿದರು. ಆದರೆ, ಕಮಿಂದು ಮೆಂಡಿಸ್ ಹಾಗೂ ದುನಿತ್ ವೆಲ್ಲಾಳಗೆ ಅವರು ಅಲ್ಪ ಹೋರಾಟ ನಡೆಸಿ ಕ್ರಮವಾಗಿ 31 ಮತ್ತು 29 ರನ್ ಗಳಿಸಿದರು. ಆದರೂ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಶ್ರೀಲಂಕಾ 20 ಓವರ್‌ಗಳನ್ನು ಮುಗಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 107 ರನ್‌ಗಳಿಗೆ ಸೀಮಿತವಾಯಿತು ಹಾಗೂ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಸಿಂಹಳೀಯರು ಹೊರಬಿದ್ದರು. ನಾಲ್ಕು ಓವರ್‌ಗಳಿಗೆ 27 ರನ್ ನೀಡಿ 4 ವಿಕೆಟ್ ಕಿತ್ತ ರಚಿನ್ ರವೀಂದ್ರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.