Ranji Trophy 2025-26: ಮೊಹ್ಸಿನ್ ಖಾನ್ ಸ್ಪಿನ್ ಮೋಡಿಗೆ ಕೇರಳ ತತ್ತರ, ಕರ್ನಾಟಕ ತಂಡಕ್ಕೆ ಇನಿಂಗ್ಸ್ ಜಯ!
KAR vs KER Match Highlights: ಕರುಣ್ ನಾಯರ್ ದ್ವಿಶತಕ ಹಾಗೂ ಮೊಹ್ಸಿನ್ ಖಾನ್ ಅವರ ಸ್ಪಿನ್ ಮೋಡಿಯ ನೆರವಿನಿಂದ ಕರ್ನಾಟಕ ತಂಡ, 2025-26ರ ರಣಜಿ ಟ್ರೋಫಿಯ ಎಲೈಟ್ ಬಿ ಪಂದ್ಯದಲ್ಲಿ ಕೇರಳ ವಿರುದ್ಧ ಇನಿಂಗ್ಸ್ ಹಾಗೂ 164 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 11 ಅಂಕಗಳ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಕೇರಳ ವಿರುದ್ಧ ರಣಜಿ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 164 ರನ್ ಜಯ ಸಾಧಿಸಿದ ಕರ್ನಾಟಕ. -
ತಿರುವನಂತಪುರಂ: ಕರುಣ್ ನಾಯರ್ (233 ರನ್) ಮತ್ತು ಮೊಹ್ಸಿನ್ ಖಾನ್ (220 ರನ್) ಅವರ ದ್ವಿಶತಕಗಳು ಹಾಗೂ ಮೊಹ್ಸಿನ್ ಖಾನ್ (29ಕ್ಕೆ 6 ) ಅವರ ಸ್ಪಿನ್ ಮೋಡಿಯ ನೆರವಿನಿಂದ ಕರ್ನಾಟಕ ತಂಡ, ಕೇರಳ ವಿರುದ್ಧ 2025-26ರ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಎಲೈಟ್ ಬಿ ಪಂದ್ಯದಲ್ಲಿ(KAR vs KER) ಇನಿಂಗ್ಸ್ ಹಾಗೂ 164 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಈ ಭರ್ಜರಿ ಗೆಲುವಿನ ಮೂಲಕ ಮಯಾಂಕ್ ಅಗರ್ವಾಲ್ ಅವರ ನಾಯಕತ್ವದ ಕರ್ನಾಟಕ ತಂಡ ಟೂರ್ನಿಯ ಎಲೈಟ್ ಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 11 ಅಂಕಗಳ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ಆಡಿದ ಮೂರು ಪಂದ್ಯಗಳಿಂದ ಎರಡು ಅಂಕ ಕಲೆ ಹಾಕಿರುವ ಆತಿಥೇಯ ಕೇರಳ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.
ಮಂಗಳವಾರ ಇಲ್ಲಿನ ಕೇರಳ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ವಿಕೆಟ್ ನಷ್ಟವಿಲ್ಲದೆ 10 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಕೇರಳ ತಂಡಕ್ಕೆ ಆರಂಭದಲ್ಲಿ ವಿದ್ವತ್ ಕಾವೇರಪ್ಪ, ಎಂಡಿ ನಿಧೀಶ್ ಹಾಗೂ ಅಕ್ಷಯ್ ಚಂದ್ರನ್ ಅವರನ್ನು ಬಹುಬೇಗ ಔಟ್ ಮಾಡಿದರು. ಆ ಮೂಲಕ ಕೇರಳ ತಂಡಕ್ಕೆ ಆರಂಭಿಕ ಆಘಾತವನ್ನು ನೀಡಿದ್ದರು. ನಂತರ ನಾಯಕ ಮೊಹಮ್ಮದ್ ಅಝರುದ್ದೀನ್ ಅವರನ್ನು ಶಿಖರ್ ಶೆಟ್ಟಿ ಅವರನ್ನು ಔಟ್ ಮಾಡಿದರು. ಆ ಮೂಲಕ ಕೇರಳ ತಂಡ 40 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಸಂಕಷ್ಟಕ್ಕೆ ಸಿಲುಕಿತ್ತು.
KAR vs KER: ಮೂರನೇ ದಿನವೂ ಕರ್ನಾಟಕ ಮೇಲುಗೈ, ವೈಶಾಖ್, ವಿದ್ವತ್ ಮಾರಕ ದಾಳಿಯಿಂದ ಫಾಲೋ ಆನ್‌ಗೆ ಸಿಲುಕಿದ ಕೇರಳ!
ನಂತರ ಕೃಷ್ಣ ಪ್ರಸಾದ್ ಹಾಗೂ ಅಹ್ಮದ್ ಇಮ್ರಾನ್ ಅವರು ಕೆಲಕಾಲ ಕರ್ನಾಟಕ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು ಹಾಗೂ ನಾಲ್ಕನೇ ವಿಕೆಟ್‌ಗೆ 57 ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಭರವಸೆ ಮೂಡಿಸಿದ್ದರು. ಆದರೆ, ಇದಾದ ಬಳಿಕ ಬೌಲಿಂಗ್‌ಗೆ ಬಂದ ಮೊಹ್ಸಿನ್ ಖಾನ್ ಸ್ಪಿನ್ ಮೋಡಿ ಮಾಡಿ ಕೇರಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.
ಮೊಹ್ಸಿನ್ ಖಾನ್ ಸ್ಪಿನ್ ಮೋಡಿಗೆ ಕೇರಳ ತತ್ತರ
33 ರನ್ ಗಳಿಸಿದ ಕೃಷ್ಣ ಪ್ರಸಾದ್ ಹಾಗೂ 23 ರನ್ ಗಳಿಸಿ ಆಡುತ್ತಿದ್ದ ಅಹ್ಮದ್ ಇಮ್ರಾನ್ ಮೊಹ್ಸಿನ್ ಖಾನ್ ಸ್ಪಿನ್ ಮೋಡಿಯಿಂದ ಔಟ್ ಮಾಡಿದರು. ಸಚಿನ್ ಬೇಬಿ, ಶಾನ್ ರೋಜರ್, ಬಾಬಾ ಅಪರಿಜಿತ್ ಹಾಗೂ ಹರಿಕೃಷ್ಣ ಅವರನ್ನು ಔಟ್ ಮಾಡಿದರು. ಆದರೆ, ಈಡನ್ ಆಪಲ್ ಟಾಮ್ ಅವರು 68 ಎಸೆತಗಳಲ್ಲಿ 39 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಅಂತಿಮವಾಗಿ ಕೇರಳ ತಂಡ 79.3 ಓವರ್‌ಗಳಿಗೆ 184 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆತಿಥೇಯರು ಎರಡೂ ಇನಿಂಗ್ಸ್‌ಗಳನ್ನು ಆಡಿದರೂ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕಲೆ ಹಾಕಿದ್ದ ಮೊತ್ತವನ್ನು ಸರಿದೂಗಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಇನಿಂಗ್ಸ್ ಹಾಗೂ 164 ರನ್‌ಗಳ ಸೋಲು ಅನುಭವಿಸಿತು.
Ranji Trophy 2025-26: ಬಲಿಷ್ಠ ಮುಂಬೈ ವಿರುದ್ಧ ದ್ವಿಶತಕ ಬಾರಿಸಿದ ದೀಪಕ್ ಹೂಡಾ!
ಕರ್ನಾಟಕ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಸ್ಪಿನ್ ಮೋಡಿ ಮಾಡಿದ್ದ ಮೊಹ್ಸಿನ್ ಖಾನ್, 23.3 ಓವರ್‌ಗಳಿಗೆ 29 ರನ್‌ಗಳನ್ನು ನೀಡಿ 6 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಕೇರಳ ತಂಡವನ್ನು ಬಹುಬೇಗ ಆಲ್‌ಔಟ್ ಮಾಡಲು ಕಾರಣರಾದರು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ವಿದ್ವತ್ ಕಾವೇರಪ್ಪ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರು ಕ್ರಮವಾಗಿ 4 ಮತ್ತು 3 ವಿಕೆಟ್‌ಗಳನ್ನು ಕಬಳಿಸಿದ್ದರು.
ಕರುಣ್ ನಾಯರ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕರ್ನಾಟಕ ತಂಡ, 167 ಓವರ್‌ಗಳಿಗೆ 5 ವಿಕೆಟ್ 586 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಡಿಕ್ಲೆರ್ ಮಾಡಿಕೊಂಡಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ್ದ ಕರುಣ್ ನಾಯರ್ 233 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಫಲವಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.ಇವರ ಜೊತೆಗೆ ಆರ್ ಸ್ಮರಣ್ ಅವರು ಕೂಡ 220 ರನ್‌ಗಳನ್ನು ಗಳಿಸಿ ಅಜೇಯರಾಗಿದ್ದರು. ಬಳಿಕ ಕೇರಳ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 238 ರನ್‌ಗಳಿಗೆ ಆಲ್‌ಔಟ್ ಆಗಿತ್ತು.