ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SRH vs RR: ʻವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿʼ-ಅಭಿಷೇಕ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಕಿಡಿ!

Abhishek Sharma: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೋಲ್ಡನ್‌ ಡಕೌಟ್‌ ಆದ ಅಭಿಷೇಕ್‌ ಶರ್ಮಾ ಅವರನ್ನು ಕ್ರಿಕೆಟ್‌ ಅಭಿಮಾನಿಗಳು ಟೀಕಿಸಿದ್ದಾರೆ. ಭಾರತ ತಂಡದಲ್ಲಿ ಅಭಿಷೇಕ್‌ ಶರ್ಮಾ ಸ್ಥಾನದಲ್ಲಿ ವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಗೋಲ್ಡನ್‌ ಡಕ್‌ಔಟಾದ ಅಭಿಷೇಕ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಕಿಡಿ!

ಅಭಿಷೇಕ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಕಿಡಿ. -

Profile
Ramesh Kote Apr 13, 2026 10:20 PM

ನವದೆಹಲಿ: ರಾಜಸ್ತಾನ್‌ ರಾಯಲ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಗೋಲ್ಡನ್‌ ಡಕ್‌ಔಟ್‌ ಆದರು. ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿ ಜೋಫ್ರಾ ಆರ್ಚರ್‌ಗೆ ಅಭಿಷೇಕ್‌ ಶರ್ಮಾ ವಿಕೆಟ್‌ ಕೈ ಚೆಲ್ಲಿದರು. ಇದರೊಂದಿಗೆ ಎಡಗೈ ಬ್ಯಾಟ್ಸ್‌ಮನ್‌ ಪ್ರಸಕ್ತ ವರ್ಷದಲ್ಲಿ ಚುಟುಕು ಕ್ರಿಕೆಟ್‌ನಲ್ಲಿ 7ನೇ ಬಾರಿ ಡಕ್‌ಔಟ್‌ ಆದರು. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಅಭಿಷೇಕ್‌ ಶರ್ಮಾ ವಿರುದ್ಧ ಕಿಡಿಕಾರಿದ್ದಾರೆ.

ಅಭಿಷೇಕ್‌ ಶರ್ಮಾ ತಾವು ಆಡುವ ಮೊದಲನೇ ಎಸೆತದಿಂದಲೇ ಆಕ್ರಮಣಕಾರಿಯಾಗಿ ಆಡುವ ಸ್ವಭಾವವನ್ನು ಹೊಂದಿದ್ದಾರೆ. ಇತ್ತೀಚಿನ ಇವರ ವೈಫಲ್ಯಗಳ ಹಿಂದೆ ಇದು ಒಂದು ಪ್ರಮುಖ ಕಾರಣ ಎಂದು ಹೇಳಬಹುದು. ರಾಜಸ್ಥಾನ್‌ ರಾಯಲ್ಸ್‌ ಎದುರಿನ ಈ ಪಂದ್ಯದಲ್ಲಿ ಅಪಾಯಕಾರಿ ಜೋಫ್ರಾ ಆರ್ಚರ್‌ಗೆ ಮೊದಲ ಎಸೆತದಲ್ಲಿಯೇ ಆಕ್ರಮಣಕಾರಿಯಾಗಿ ಆಡಲು ಅಭಿಷೇಕ್‌ ಮುಂದಾದರು. ಆದರೆ, ಅವರು ಆರ್‌ಆರ್‌ ತಂಡದ ರಣತಂತ್ರಕ್ಕೆ ಎಡಗೈ ಬ್ಯಾಟ್ಸ್‌ಮನ್‌ ಬಲಿ ಪಶುವಾದರು.

IPL 2026: ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದ ಸಿಬ್ಬಂದಿಗೆ 25 ಲಕ್ಷ ರು ನಗದು ಬಹುಮಾನ ನೀಡಿದ ಎಸಿಎ!

ಜೋಫ್ರಾ ಆರ್ಚರ್‌ ಅವರ ಶಾರ್ಟ್‌ ಎಸೆತವನ್ನು ಹಾಕಿದರು ಹಾಗೂ ಅಭಿಷೇಕ್‌ ಶರ್ಮಾ ದೊಡ್ಡ ಹೊಡೆತಕ್ಕೆ ಕೈ ಹಾಕಿದರು ಆದರೆ, ಚೆಂಡು ಬ್ಯಾಟ್‌ನ ಔಟ್‌ ಸೈಡ್‌ ಎಡ್ಜ್‌ ಆಗಿ ಢರ್ಡ್‌ ಮ್ಯಾನ್‌ನಲ್ಲಿ ರವಿ ಬಿಷ್ಣೋಯ್‌ ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದರು.



ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅಭಿಷೇಕ್‌ ಶರ್ಮಾ

ಈ ಪಂದ್ಯದಲ್ಲಿ ಗೋಲ್ಡನ್‌ ಡಕ್‌ಔಟ್‌ ಆಗುವ ಮೂಲಕ ಅಭಿಷೇಕ್‌ ಶರ್ಮಾ, ಏಕೈಕ ಕ್ಯಾಲೆಂಡರ್ಸ್‌ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.



ಟಿ20 ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಭಾರತೀಯರು

7 - 2026 ರಲ್ಲಿ ಅಭಿಷೇಕ್ ಶರ್ಮಾ (18 ಇನಿಂಗ್ಸ್)

6 - 2018 ರಲ್ಲಿ ರೋಹಿತ್ ಶರ್ಮಾ (32 ಇನಿಂಗ್ಸ್)

6 - 2024 ರಲ್ಲಿ ಸಂಜು ಸ್ಯಾಮ್ಸನ್ (32 ಇನಿಂಗ್ಸ್)

5 - 2013 ರಲ್ಲಿ ಗುರುಕೀರತ್ ಸಿಂಗ್ ಮಾನ್ (19 ಇನಿಂಗ್ಸ್)



2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಅವರು ಮೂರು ಬಾರಿ ಡಕ್‌ಔಟ್‌ ಆಗಿದ್ದರು. ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಡಕ್‌ಔಟ್‌ ಆಗಿದ್ದು ಇದು ಎರಡನೇ ಬಾರಿಯಾಗಿದೆ.

ಭಾರತ ತಂಡದಲ್ಲಿ ವೈಭವ್‌ಗೆ ಅವಕಾಶ ನೀಡಿ ಎಂದ ಫ್ಯಾನ್ಸ್‌

ಅಭಿಷೇಕ್‌ ಶರ್ಮಾ ಅವರ ಇತ್ತೀಚಿನ ವೈಫಲ್ಯದಿಂದಾಗಿ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಭಾರತ ತಂಡದಲ್ಲಿ ಅಭಿಷೇಕ್‌ ಶರ್ಮಾ ಅವರ ಸ್ಥಾನಕ್ಕೆ ವೈಭವ್‌ ಸೂರ್ಯವಂಶಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಭಿಷೇಕ್‌ ಶರ್ಮಾ ಅವರು ಒಳ್ಳೆಯ ಎಸೆತಗಳಿಗೆ ಗೌರವ ನೀಡದೆ ಎಲ್ಲಾ ಎಸೆತಗಳಿಗೂ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಾರೆ. ಆದರೆ, ವೈಭವ್‌ ಆ ರೀತಿ ಆಡುವುದಿಲ್ಲ ಎಂದು ಇನ್ನು ಕೆಲ ಅಭಿಮಾನಿಗಳು ಹೇಳಿದ್ದಾರೆ.



ಈ ಋತುವಿನಲ್ಲಿ ಅಭಿಷೇಕ್ ಇದುವರೆಗೆ ಐದು ಪಂದ್ಯಗಳಲ್ಲಿ 129 ರನ್ ಗಳಿಸಿದ್ದಾರೆ, ಅವರ ಹೆಸರಿನಲ್ಲಿ ಒಂದು ಅರ್ಧಶತಕವೂ ಸೇರಿದೆ. ಮತ್ತೊಂದೆಡೆ, ಸೂರ್ಯವಂಶಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. 15 ವರ್ಷದ ಈ ಆಟಗಾರ ನಾಲ್ಕು ಪಂದ್ಯಗಳಲ್ಲಿ 266.66 ಸ್ಟ್ರೈಕ್ ರೇಟ್ ಮತ್ತು 50 ಸರಾಸರಿಯೊಂದಿಗೆ 200 ರನ್ ಗಳಿಸಿದ್ದಾರೆ.