ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻತಾವು ನಿವೃತ್ತಿ ಘೋಷಿಸಲು ಗಂಭೀರ್‌, ರೋಹಿತ್‌ ಕಾರಣʼ: ವದಂತಿಗಳ ಬಗ್ಗೆ ಅಶ್ವಿನ್‌ ಸ್ಪಷ್ಟನೆ!

ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಲು ರೋಹಿತ್‌ ಶರ್ಮಾ ಹಾಗೂ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಕಾರಣ ಎಂಬ ವದಂತಿಗಳು ಸೋಶಿಯಲ್‌ ಮೀಡಿಯಾದಲ್ಲಿ ರೌಂಡ್‌ ಹೊಡಯುತ್ತಿವೆ. ಈ ಬಗ್ಗೆ ಸ್ವತಃ ಅಶ್ವಿನ್‌ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ನಿವೃತ್ತಿ ಬಗೆಗಿನ ವದಂತಿಗಳ ಬಗ್ಗೆ ಆರ್‌ ಅಶ್ವಿನ್‌ ಸ್ಪಷ್ಟನೆ!

ತಮ್ಮ ನಿವೃತ್ತಿ ಬಗೆಗಿನ ವದಂತಿಗಳ ಬಗ್ಗೆ ಆರ್‌ ಅಶ್ವಿನ್‌ ಸ್ಪಷ್ಟನೆ ನೀಡಿದ್ದಾರೆ. -

Profile Ramesh Kote Oct 9, 2025 8:22 PM

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪಡೆಯುವಂತೆ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಒತ್ತಾಯಿಸಿದ್ದರೆಂಬ ಸೋಶಿಯಲ್‌ ಮೀಡಿಯಾ ವದಂತಿಗಳಿಗೆ ಸ್ವತಃ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರೇ ಸ್ಪಷ್ಟನೆ ನೀಡಿದ್ದಾರೆ. 2024-25ರ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ವೇಳೆ ಆರ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಹೇಳಿದ್ದರು. ಆ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದರು.

ಆರ್‌ ಅಶ್ವಿನ್‌ ಅವರು ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಆಡಲು ಎಲ್ಲಾ ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅವರು ಆಡಿದ್ದು ಎರಡೇ ಪಂದ್ಯಗಳಲ್ಲಿ ಮಾತ್ರ. ಇದರಿಂದಾಗಿ ಅವರು ಹತಾಶರಾಗಿ ನಿವೃತ್ತಿಯನ್ನು ಘೋಷಿಸಿದ್ದಾರೆಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು, ಆರ್‌ ಅಶ್ವಿನ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವಂತೆ ಹೆಡ್‌ ಕೋಚ್‌ ಗಂಭೀರ್‌ ಹಾಗೂ ಮಾಜಿ ನಾಯಕ ರೋಹಿತ್‌ ಶರ್ಮಾ ಒತ್ತಾಯಿಸಿದ್ದರು ಎಂದು ಚರ್ಚೆಯನ್ನು ನಡೆಸುತ್ತಿದ್ದಾರೆ. ಈ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಆರ್‌ ಅಶ್ವಿನ್‌ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಎಲ್ಲಾ ವದಂತಿಗಳನ್ನು ಕಡ್ಡಿ ಮುರಿದಂತೆ ತಳ್ಳಿ ಹಾಕಿದ್ದಾರೆ.

Women's World Cup: ಬೆಲಿಂಡಾ ಕ್ಲಾರ್ಕ್‌ರ ವಿಶ್ವ ದಾಖಲೆ ಮುರಿದ ಸ್ಮೃತಿ ಮಂಧಾನಾ!

"ನಿವೃತ್ತಿ ಪಡೆಯುವಂತೆ ಯಾರೊಬ್ಬರೂ ಕೂಡ ನನಗೆ ಹೇಳಿರಲಿಲ್ಲ, ನಿಮಗೆ ತಂಡದಲ್ಲಿ ಸ್ಥಾನವಿಲ್ಲ ಎಂದು ಯಾರೂ ಕೂಡ ತಿಳಿಸಿರಲಿಲ್ಲ. ವಿದಾಯ ಹೇಳುವುದಕ್ಕೂ ಮುನ್ನ ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು 2-3 ಮಂದಿ ಸಲಹೆ ನೀಡಿದ್ದರು. ಆದರೂ ನಾನು ಈ ನಿರ್ಧಾರವನ್ನು ತೆಗೆದುಕೊಂಡೆ. ಅವರಿಗೆ ನಾನು ಇನ್ನಷ್ಟು ಪಂದ್ಯಗಳನ್ನು ಆಡಬೇಕೆಂದು ಬಯಸಿದ್ದರು," ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

ನಿವೃತ್ತಿ ಪಡೆಯುವುದಕ್ಕೂ ಮುನ್ನ ಎರಡು ಬಾರಿ ಆಲೋಚಿಸಿ ಎಂದು ಕೋಚ್‌ ಗೌತಮ್‌ ಗಂಭೀರ್‌ ಹಾಗೂ ರೋಹಿತ್‌ ಶರ್ಮಾ ಸಲಹೆ ನೀಡಿದ್ದರು ಎಂಬ ಅಂಶವನ್ನು ಆರ್‌ ಅಶ್ವಿನ್‌ ಬಹಿರಂಗಪಡಿಸಿದ್ದಾರೆ. "ಇದರ ಬಗ್ಗೆ ಯೋಚಿಸಿ ಎಂದು ರೋಹಿತ್‌ ಶರ್ಮಾ ಕೂಡ ನನಗೆ ಹೇಳಿದ್ದರು. ಮತ್ತೊಮ್ಮೆ ಯೋಚಿಸಿ ಎಂದು ಗೌತಿ ಭಾಯ್‌ (ಗಂಭೀರ್‌) ಕೂಡ ಹೇಳಿದ್ದರು. ಆದರೆ, ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಅವರ ಬಳಿ ಈ ಬಗ್ಗೆ ನಾನು ಜಾಸ್ತಿ ಮಾತನಾಡಿರಲಿಲ್ಲ. ನಿವೃತ್ತಿ ತೆಗೆದುಕೊಂಡಿರುವುದು ನನ್ನ ವೈಯಕ್ತಿಕ ನಿರ್ಧಾರವಾಗಿದೆ. ಈ ರೀತಿಯ ಸಂಗತಿಗಳ ವೈಯಕ್ತಿಕ ನಿರ್ಧಾರಗಳಾಗಿವೆ," ಎಂದು ಸ್ಪಿನ್‌ ದಿಗ್ಗಜ ಹೇಳಿದ್ದಾರೆ.

IND vs WI 2nd Test: 2ನೇ ಟೆಸ್ಟ್‌ಗೆ ಬುಮ್ರಾ, ಸಿರಾಜ್​ಗೆ ರೆಸ್ಟ್​

ಆರ್‌ ಅಶ್ವಿನ್‌ ನಿವೃತ್ತಿ ಘೋಷಿಸಿದ ಬಳಿಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಕೂಡ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಮೊದಲು ರೋಹಿತ್‌ ಶರ್ಮಾ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರು. ತದ ನಂತರ ವಿರಾಟ್‌ ಕೊಹ್ಲಿ ಕೂಡ ತಮ್ಮ ಸಹ ಆಟಗಾರರ ಹಾದಿಯನ್ನು ತುಳಿದಿದ್ದರು. ನಂತರ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ನೂತನ ನಾಯಕನ್ನಾಗಿ ಶುಭಮನ್‌ ಗಿಲ್‌ ಅವರನ್ನು ನೇಮಿಸಲಾಗಿತ್ತು. ಗಿಲ್‌ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್‌ ಎದುರು ಟೆಸ್ಟ್‌ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಸಾಧಿಸಿತ್ತು.