IPL 2026: ಈ ಸಲವೂ ಆರ್‌ಸಿಬಿಗೆ ಕಪ್ ಗೆದ್ದುಕೊಡಬಲ್ಲ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಸಲಿರುವ ಬೆಸ್ಟ್ ಪ್ಲೇಯಿಂಗ್ 11 ಹೇಗಿರಬಹುದು ಎಂಬುದರ ವಿಶ್ಲೇಷಣೆ ಈ ಲೇಖನದಲ್ಲಿದೆ. ಕಳೆದ ಬಾರಿಯಂತೆ ಈ ಸಲವೂ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮತೋಲನದ ಬಲಿಷ್ಠ ತಂಡ ರೂಪುಗೊಳ್ಳುವ ಸಾಧ್ಯತೆ ಇದೆ.
ಈ ಸಲ ಕಪ್ ಗೆಲ್ಲಬಲ್ಲ ಆರ್‌ಸಿಬಿ ಪ್ಲೇಯಿಂಗ್ XI ವಿವರ. -
ಬೆಂಗಳೂರು: ಐಪಿಎಲ್ 2026 ಟೂರ್ನಿಗೆ (IPL 2026) ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಸಿದ್ಧತೆಯೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ. ಹಲವು ವರ್ಷಗಳ ಭಗೀರತ ಪ್ರಯತ್ನದ ಬಳಿಕ ಕಳೆದ ಸೀಸನ್‌ನಲ್ಲಿ ಪ್ರಶಸ್ತಿ ಗೆದ್ದ ಆರ್‌ಸಿಬಿ ಈಗ ಆತ್ಮವಿಶ್ವಾಸದೊಂದಿಗೆ, ಸತತ ಟ್ರೋಫಿ ಗೆಲುವನ್ನು ಎದುರು ನೋಡುತ್ತಿದೆ. ಈ ಸಲುವಾಗಿ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದು ಬಲಿಷ್ಠ ಪ್ಲೇಯಿಂಗ್ 11 (RCB playing XI) ಕಟ್ಟಲು ಲೆಕ್ಕಾಚಾರ ಹಾಕುತ್ತಿದೆ.
ತಂಡದ ಪ್ರಮುಖ ಆಟಗಾರನಾಗಿ ದಿಗ್ಗಜ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ, ಈಗ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಸಜ್ಜಾಗಿದ್ದು, ಓಪನರ್ ಆಗಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಅವರ ಜೊತೆಗೆ ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಆಕ್ರಮಣಕಾರಿ ಆರಂಭ ನೀಡಬಹುದು.
ಮಧ್ಯ ಕ್ರಮದಲ್ಲಿ ನಾಯಕ ರಜತ್ ಪಾಟಿ,ದಾರ್, ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಮತ್ತು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಈ ಮೂವರು ಬ್ಯಾಟಿಂಗ್ ಸ್ಟೆಬಿಲಿಟಿ ನೀಡುವುದರ ಜೊತೆಗೆ ರನ್ ಗಳಿಕೆಯ ವೇಗವನ್ನೂ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದಾರೆ.
IPL 2026: ಆರ್‌ಸಿಬಿ ವೇಗಿ ಜಾಶ್ ಹೇಝಲ್‌ವುಡ್ ಎಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ?
ಫಿನಿಷರ್ ಪಾತ್ರದಲ್ಲಿ ಆಸ್ಟ್ರೇಲಿಯಾದ ತಾರೆ ಟಿಮ್ ಡೇವಿಡ್ ಇದ್ದು, ಕೊನೆಯ ಓವರ್‌ಗಳಲ್ಲಿ ದೈತ್ಯ ಹೊಡೆತಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡರ್ಸ್ ವಿಭಾಗದಲ್ಲಿ ಕೃಣಾಲ್ ಪಾಂಡ್ಯ ಮತ್ತು ವೆಸ್ಟ್ ಇಂಡೀಸ್‌ನ ರೊಮಾರಿಯೊ ಶೆಫರ್ಡ್ ತಂಡದ ಆಡುವ 11ರ ಬಳಗಕ್ಕೆ ಸಮತೋಲನ ತಂದುಕೊಡಲಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮ್ಯಾಚ್ ಗೆದ್ದುಕೊಡಬಲ್ಲ ಸಾಮರ್ಥ್ಯ ಇವರದ್ದು.
ಬೌಲಿಂಗ್ ವಿಭಾಗದಲ್ಲಿ ಅನುಭವ ಮತ್ತು ವೇಗದ ಸಂಯೋಜನೆ ಇದೆ. ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್ ಮತ್ತು ಯಶ್ ದಯಾಳ್ ಪ್ರಮುಖ ವೇಗದ ಬೌಲರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
IPL 2026: ಇಶಾನ್ ಕಿಶನ್‌ಗೆ ಎಸ್‌ಆರ್‌ಎಚ್ ನಾಯಕತ್ವ ನೀಡಿದ ಬಗ್ಗೆ ಆಕಾಶ್ ಚೋಪ್ರಾ ಪ್ರತಿಕ್ರಿಯೆ!
ಐಪಿಎಲ್ 2026: RCB Probable Playing XI
01.ವಿರಾಟ್ ಕೊಹ್ಲಿ (ಓಪನರ್)
02.ಫಿಲ್ ಸಾಲ್ಟ್ (ಓಪನರ್)
03.ದೇವದತ್ ಪಡಿಕ್ಕಲ್ (ಬ್ಯಾಟರ್)
04.ರಜತ್ ಪಾಟಿದಾರ್ (ಬ್ಯಾಟರ್/ ಕ್ಯಾಪ್ಟನ್)
05.ಜಿತೇಶ್ ಶರ್ಮಾ (ಕೀಪರ್/ಬ್ಯಾಟರ್)
06.ಕೃಣಾಲ್ ಪಾಂಡ್ಯ (ಆಲ್‌ರೌಂಡರ್)
07.ಟಿಮ್ ಡೇವಿಡ್ (ಆಲ್‌ರೌಂಡರ್)
08.ರೊಮಾರಿಯೊ ಶೆಫರ್ಡ್ (ಆಲ್‌ರೌಂಡರ್)
09.ಭುವನೇಶ್ವರ್ ಕುಮಾರ್ (ವೇಗದ ಬೌಲರ್)
10.ಯಶ್ ದಯಾಳ್ (ಎಡಗೈ ವೇಗಿ)
11.ಜಾಶ್ ಹೇಝಲ್‌ವುಡ್ (ವೇಗದ ಬೌಲರ್)
IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಕ್ಷರ್ ಪಟೇಲ್‌ಗೆ ಎಚ್ಚರಿಕೆ ನೀಡಿದ ಚೇತೇಶ್ವರ್ ಪೂಜಾರ!
ಒಟ್ಟಾರೆ, ಹಾಲಿ ಚಾಂಪಿಯನ್ಸ್ ಆರ್‌ಸಿಬಿ ತಂಡವು ಅನುಭವ ಮತ್ತು ಯುವ ಆಟಗಾರರ ಸಮತೋಲನ ಹೊಂದಿದ್ದು, ಈ ಬಾರಿಯೂ ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ದಾಳಿಯ ಸಮನ್ವಯದಿಂದ ಚಾಲೆಂಜರ್ಸ್ ಮತ್ತೊಮ್ಮೆ ಟ್ರೋಫಿ ಗೆದ್ದರೆ ಅಚ್ಚರಿಯೇನಿಲ್ಲ. ಮಾರ್ಚ್ 28ರಂದು 2026ರ ಸಾಲಿನ ಐಪಿಎಲ್ ಟೂರ್ನಿ ಶುರುವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ಅಪಾಯಕಾರಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.