IPL 2026: ಗುಜರಾತ್ ಟೈಟನ್ಸ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಬಾರಿ ಫೈನಲ್‌ಗೇರಿದ ಆರ್‌ಸಿಬಿ!
RCB vs GT Match Highlights: ರಜತ್ ಪಾಟಿದಾರ್ ಭರ್ಜರಿ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 92 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು.
ಗುಜರಾತ್ ಎದುರು ಗೆದ್ದು ಸತತ ಎರಡನೇ ಬಾರಿ ಫೈನಲ್‌ಗೆ ಆರ್‌ಸಿಬಿ. -
ಧರ್ಮಶಾಲಾ: ರಜತ್ ಪಾಟಿದಾರ್ (Rajat Patidar) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 92 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ರಜತ್ ಪಾಟಿದಾರ್ ಅವರ ನಾಯಕತ್ವದ ಆರ್‌ಸಿಬಿ, ಸತತ ಎರಡನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತು ಹಾಗೂ ಎರಡನೇ ಟ್ರೋಫಿ ಇನ್ನಷ್ಟು ಸನಿಹವಾಯಿತು. ಇನ್ನು ಸೋಲು ಅನುಭವಿಸಿದ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ತಂಡ, ಮೇ 27 ರಂದು ಎಸ್‌ಆರ್‌ಎಚ್ ಮತ್ತು ಆರ್‌ಆರ್ ಪೈಕಿ ಎಲಿಮಿನೇಟರ್ ಪಂದ್ಯವನ್ನು ಗೆಲ್ಲುವ ತಂಡದ ವಿರುದ್ಧ ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಕಾದಾಟ ನಡೆಸಲಿದೆ.
ಮಂಗಳವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ ಗುಜರಾತ್ ಟೈಟನ್ಸ್ ತಂಡ ಸ್ಕೋರ್ ಬೋರ್ಡ್ ಒತ್ತಡಕ್ಕೆ ಒಳಗಾಯಿತು. ಪವರ್‌ಪ್ಲೇನಲ್ಲಿಯೇ ಆರ್‌ಸಿಬಿ ಬೌಲರ್‌ಗಳು ಮಾರಕ ದಾಳಿ ನಡೆಸಿದರು. ಸಾಯಿ ಸುದರ್ಶನ್, ಶುಭಮನ್ ಗಿಲ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್ ಬಹುಬೇಗ ವಿಕೆಟ್ ಒಪ್ಪಿಸಿದರು. 11 ಎಸೆತಗಳಲ್ಲಿ29 ರನ್ ಸಿಡಿಸಿದ್ದ ಜೋಸ್ ಬಟ್ಲರ್ ಅವರನ್ನು ಜಾಶ ಹೇಝಲ್‌ವುಡ್ ಔಟ್ ಮಾಡಿದರು.ಆ ಮೂಲಕ ಪವರ್‌ಪ್ಲೇ ಅಂತ್ಯಕ್ಕೆ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು.
IPL 2026: 600 ರನ್ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ!
ರಾಹುಲ್ ತೆವಾಟಿಯಾ ಹೋರಾಟ ವ್ಯರ್ಥ
ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ 19ನೇ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ತೆವಾಟಿಯಾ, 43 ಎಸೆತಗಳಲ್ಲಿ 68 ರನ್ ಗಳಿಸಿದ ಬಳಿಕ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಗುಜರಾತ್ ಟೈಟನ್ಸ್ ತಂಡ 19.3 ಓವರ್‌ಗಳಿಗೆ 162 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
ಆರ್‌ಸಿಬಿ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಜೇಕಬ್ ಡಫಿ ಮೂರು ವಿಕೆಟ್ ಕಿತ್ತರೆ, ರಸಿಕ್ ದಾರ್ ಸಲಾಮ್ ಹಾಗೂ ಭುವನೇಶ್ವರ್ ಕುಮಾರ್ ಅವರು ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
A picture-perfect finish 👏
— IndianPremierLeague (@IPL) May 26, 2026
🎥 Catching brilliance from Tim David seals a famous victory for the final-bound @RCBTweets 🫴❤️
Scorecard ▶️ https://t.co/9rs6u5obOw#TATAIPL | #Qualifier1 | #TheFinalLeap | #RCBvGT pic.twitter.com/oI8DRxx27l
254 ರನ್‌ಗಳನ್ನು ಕಲೆ ಹಾಕಿದ ಆರ್‌ಸಿಬಿ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಾಯ ರಜತ್ ಪಾಟಿದಾರ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್ ಟೈಟನ್ಸ್‌ಗೆ 255 ರನ್‌ಗಳ ಗುರಿಯನ್ನು ನೀಡಿತು.
That's how you 𝗣𝗟𝗔𝗬 𝗕𝗢𝗟𝗗! ❤️
— IndianPremierLeague (@IPL) May 26, 2026
Defending champions @RCBTweets are on their way to a second consecutive #TATAIPL final 👏😌
Scorecard ▶️ https://t.co/9rs6u5obOw#Qualifier1 | #TheFinalLeap | #RCBvGT pic.twitter.com/1bhTGqwTok
ಆರ್‌ಸಿಬಿಗೆ ಭರ್ಜರಿ ಆರಂಭ
ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ ಆರಂಭದಲ್ಲಿ ಅಬ್ಬರಿಸಿ 19 ರನ್ ಗಳಿಸಿದ ಬಳಿಕ ಔಟ್ ಆದರು. ಆದರೆ, ವಿರಾಟ್ ಕೊಹ್ಲಿ25 ಎಸೆತಗಳಲ್ಲಿ 43 ರನ್ ಗಳಿಸಿ ಆರ್‌ಸಿಬಿ ತಂಡದ ಮೊತ್ತವನ್ನು 9ನೇ ಓವರ್‌ನಲ್ಲಿ 93ಕ್ಕೆ ತಲುಪಿಸಿದ ಬಳಿಕ ಜೇಸನ್ ಹೋಲ್ಡರ್‌ಗೆ ಬೌಲ್ಡ್ ಆದರು. ಕೇವಲ 7 ರನ್ ಅಂತರದಲ್ಲಿ ಅರ್ಧಶತಕವನ್ನು ಕಳೆದುಕೊಂಡರೂ ಕೊಹ್ಲಿ ಈ ಸೀಸನ್‌ನಲ್ಲಿ 600 ರನ್‌ಗಳ ಗಡಿಯನ್ನು ದಾಟಿದರು. ಕೊಹ್ಲಿ ಔಟ್ ಆದ ಬೆನ್ನಲ್ಲೆ 19 ಎಸೆತಗಳಲ್ಲಿ 30 ರನ್ ಗಳಿಸಿ ಆಡುತ್ತಿದ್ದ ದೇವದತ್ ಪಡಿಕ್ಕಲ್ ವಿಕೆಟ್ ಒಪ್ಪಿಸಿದರು.
𝗥𝗔-M-𝗣𝗔-GE in Dharamshala 🏔️
— IndianPremierLeague (@IPL) May 26, 2026
Relive his knock: https://t.co/3oqMcyMYLk#TATAIPL | #Qualifier1 | #TheFinalLeap | #RCBvGT pic.twitter.com/lo5AEwV4Il
ರಜತ್-ಕೃಣಾಲ್ ಜುಗಲ್‌ಬಂದಿ
ಆರ್‌ಸಿಬಿ 94 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ರಜತ್ ಪಾಟಿದಾರ್ ಹಾಗೂ ಕೃಣಾಲ್ ಪಾಂಡ್ಯ ದೀರ್ಘಾವಧಿ ಬ್ಯಾಟ್ ಮಾಡಿದರು ಹಾಗೂ ಇವರಿಬ್ಬರೂ 45 ಎಸೆತಗಳಲ್ಲಿ 95 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು190ರ ಸನಿಹ ತಂದರು. ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಕೃಣಾಲ್, 28 ಎಸೆತಗಳಲ್ಲಿ 43 ರನ್ ಗಳಿಸಿ ಔಟ್ ಆದರು.
ಜಿಟಿ ಬೌಲರ್‌ಗಳಿಗೆ ಬೆವರಿಳಿಸಿದ ಪಾಟಿದಾರ್
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಲೀಲಾ ಜಾಲವಾಗಿ ಬ್ಯಾಟ್ ಬೀಸಿದ ಆರ್‌ಸಿಬಿ ಕಪ್ತಾನ ರಜತ್ ಪಾಟಿದಾರ್ ಜಿಟಿ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 33 ಎಸೆತಗಳಲ್ಲಿ ಅಜೇಯ 93 ರನ್‌ಗಳನ್ನು ಸಿಡಿಸಿದರು. ಅಲ್ಲದೆ ವಿಶೇಷವಾಗಿ 281.82ರ ಸ್ಟ್ರೈಕ್ ರೇಟ್‌ನಲ್ಲಿ ಅವರು ಬರೋಬ್ಬರಿ 9 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ಜಿತೇಶ ಶರ್ಮಾ ಜೊತೆ ಕೇವಲ 12 ಎಸೆತಗಳಲ್ಲಿ 40 ರನ್ ಸಿಡಿಸಿದ್ದರು. ಆರ್‌ಸಿಬಿ ಕೊನೆಯ 5 ಓವರ್‌ಗಳಿಗೆ 86 ರನ್‌ಗಳು ಮೂಡಿ ಬಂದಿದ್ದವು. ಗುಜರಾತ್ ಟೈಟನ್ಸ್ ಪರ ಕಗಿಸೊ ರಬಾಡ ಹಾಗೂ ಜೇಸನ್ ಹೋಲ್ಡರ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
Innings Break!
— IndianPremierLeague (@IPL) May 26, 2026
Rajat Patidar and Co. hammer 254/5 in #Qualifier1 😳
Will #GT chase this down? 🤔
Scorecard ▶️ https://t.co/9rs6u5obOw#TATAIPL | #TheFinalLeap | #RCBvGT pic.twitter.com/v8QP1K1akD
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಿಗೆ 254-5 (ರಜತ್ ಪಾಟಿದಾರ್ 93*, ಕೃಣಾಲ್ ಪಾಂಡ್ಯ 43, ವಿರಾಟ್ ಕೊಹ್ಲಿ 43; ಜೇಸನ್ ಹೋಲ್ಡರ್ 39ಕ್ಕೆ 2)
ಗುಜರಾತ್ ಟೈಟನ್ಸ್: 19.3 ಓವರ್‌ಗಳಿಗೆ 162-10 (ರಾಹುಲ್ ತೆವಾಟಿಯಾ 68* ರನ್, ಜೋಸ್ ಬಟ್ಲರ್ 29; ಜೇಕಬ್ ಡಫಿ 39ಕ್ಕೆ 3, ರಸಿಕ್ ಸಲಾಂ 24ಕ್ಕೆ 2, ಭುವನೇಶ್ವರ್ ಕುಮಾರ್ 28 ಕ್ಕೆ 2, ಕೃಣಾಲ್ ಪಾಂಡ್ಯ 16 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ರಜತ್ ಪಾಟಿದಾರ್