ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೋಹಿತ್‌, ಕೊಹ್ಲಿಯ ವಿಶ್ವಕಪ್‌ ಭವಿಷ್ಯದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಶುಭಮನ್‌ ಗಿಲ್‌!

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯದ ನಿಮಿತ್ತ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಭಾರತ ತಂಡದ ಬೆನ್ನೆಲುಬು ಹಾಗೂ ಅವರು ತಂಡಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತಾರೆಂದು ತಿಳಿಸಿದ್ದಾರೆ.

ರೋಹಿತ್‌, ಕೊಹ್ಲಿಯ ವಿಶ್ವಕಪ್‌ ಭವಿಷ್ಯದ ಬಗ್ಗೆ ಗಿಲ್‌ ಬಿಗ್‌ ಅಪ್‌ಡೇಟ್‌!

ಕೊಹ್ಲಿ, ರೋಹಿತ್‌ ಬಗ್ಗೆ ಶುಭಮನ್‌ ಗಿಲ್‌ ಹೇಳಿಕೆ. -

Profile
Ramesh Kote Jul 13, 2026 8:01 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ (IND vs ENG) ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ (Virat Kohli) ಅವರೊಂದಿಗೆ ನಡೆಸಿದ ದೀರ್ಘ ಮಾತುಕತೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಮಂಗಳವಾರ (ಜುಲೈ 14) ನಡೆಯಲಿರುವ ಮೊದಲ ಏಕದಿನ ಪಂದ್ಯದ ಮೂಲಕ ಭಾರತ ತಂಡ, 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಸಿದ್ಧತೆಗಳನ್ನು ಆರಂಭಿಸಿದೆ.

ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 26 ವರ್ಷದ ಗಿಲ್, ನಿರಾಸೆ ಮೂಡಿಸಿದ್ದ ಟಿ20 ಸರಣಿಯ ಪ್ರದರ್ಶನವನ್ನು ಮರೆತು ಏಕದಿನ ಸರಣಿಯಲ್ಲಿ ಉತ್ತಮ ಆರಂಭ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಮೊದಲ ಪಂದ್ಯಕ್ಕೆ ಎರಡು ದಿನ ಬಾಕಿ ಇರುವಾಗ ಏಕದಿನ ತಂಡದ ಆಟಗಾರರು ಬರ್ಮಿಂಗ್‌ಹ್ಯಾಮ್‌ನಲ್ಲಿ ಒಂದು ಕಡೆ ಸೇರಿದ್ದರು. ಈ ವೇಳೆ ನೆಟ್ಸ್‌ನಲ್ಲಿ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಬಹಳ ಹೊತ್ತು ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಗಿಲ್, ತಮ್ಮ ಮಾತುಕತೆ ಮುಂದಿನ ವರ್ಷದ ಮಹತ್ವದ ಟೂರ್ನಿಗಳ ಸಿದ್ಧತೆ ಹಾಗೂ ಯೋಜನೆಗಳ ಕುರಿತಾಗಿಯೇ ನಡೆದಿತ್ತು ಎಂದು ಬಹಿರಂಗಪಡಿಸಿದ್ದಾರೆ.

IND vs ENG: ಕೊಹ್ಲಿ ಕಮ್‌ಬ್ಯಾಕ್‌; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭಮನ್‌ ಗಿಲ್‌, "ನಾನು ಹೇಳಿದಂತೆ, ನಾವು ತಂಡದ ಸಂಯೋಜನೆಯ ಬಗ್ಗೆ ಚರ್ಚಿಸುತ್ತಿದ್ದೆವು. ದಕ್ಷಿಣ ಆಫ್ರಿಕಾದ ಪರಿಸ್ಥಿತಿಗೆ ಯಾವ ರೀತಿಯ ತಂಡದ ಸಂಯೋಜನೆ ಸೂಕ್ತವಾಗಿರುತ್ತದೆ? ಈಗ ತಂಡದಲ್ಲಿಲ್ಲದಿದ್ದರೂ ಭವಿಷ್ಯದಲ್ಲಿ ನಮಗೆ ನೆರವಾಗಬಲ್ಲ ಆಟಗಾರರು ಯಾರು? ಯಾವ ಬೌಲರ್‌ಗಳು, ಆಲ್‌ರೌಂಡರ್‌ಗಳು ಹಾಗೂ ಸ್ಪಿನ್ನರ್‌ಗಳು ತಂಡಕ್ಕೆ ಸೂಕ್ತರಾಗಬಹುದು? ಇಂತಹ ಎಲ್ಲ ವಿಷಯಗಳ ಬಗ್ಗೆ ನಾವು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ," ಎಂದು ತಿಳಿಸಿದರು.

ಕೊಹ್ಲಿ, ರೋಹಿತ್‌ ತಂಡದ ಬೆನ್ನೆಲುಬು: ಗಿಲ್‌

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೂ ಶುಭ್‌ಮನ್ ಗಿಲ್ ತೆರೆ ಎಳೆದರು. ಈ ದಿಗ್ಗಜರು ಭಾರತ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗಿದ್ದು, ತಂಡಕ್ಕೆ ಅವರ ಅನುಭವ ಅಮೂಲ್ಯ ಎಂದು ಅವರು ಹೇಳಿದರು.

ಭಾರತಕ್ಕೆ ಸೇಡು ತೀರಿಸುವ ತವಕ; ನಾಳೆಯಿಂದ ಆಂಗ್ಲರ ವಿರುದ್ಧ ಏಕದಿನ ಸರಣಿ

"ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಕಳೆದ ಒಂದು ದಶಕದಿಂದ ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬೆನ್ನೆಲುಬಾಗಿದ್ದಾರೆ. ಈಗಲೂ ಅವರಿಬ್ಬರೂ ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಂಡಕ್ಕೆ ತರುವ ಅನುಭವ ಮತ್ತು ಕೌಶಲ ಅತ್ಯಂತ ಮೌಲ್ಯಯುತವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ, ಹಲವು ಪಂದ್ಯಗಳು, ವಿವಿಧ ಟೂರ್ನಿಗಳು ಹಾಗೂ ಮಹತ್ವದ ಸಂದರ್ಭಗಳಲ್ಲಿ ಅವರು ನಿರಂತರವಾಗಿ ನೀಡಿರುವ ಪ್ರದರ್ಶನವನ್ನು ನಾವು ನೋಡಿದ್ದೇವೆ," ಎಂದು ಗಿಲ್ ಸುದ್ದಿಗೋಷ್ಠಿಯಲ್ಲಿ ಶ್ಲಾಘಿಸಿದ್ದಾರೆ.

ಬುಮ್ರಾ ಕಮ್‌ಬ್ಯಾಕ್‌ ಬಗ್ಗೆ ಗಿಲ್‌ ಹೇಳಿದ್ದೇನು?

"ಇದರ ಜೊತೆಗೆ, 'ಭೂಮ್‌ಭಾಯ್' (ಜಸ್‌ಪ್ರೀತ್ ಬುಮ್ರಾ) ಕೆಲ ಅವಧಿಯ ವಿರಾಮದ ಬಳಿಕ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಈ ಏಕದಿನ ಸರಣಿಗೂ ಮುನ್ನ ಅವರು ಸಾಕಷ್ಟು ಓವರ್‌ಗಳನ್ನು ಬೌಲ್‌ ಮಾಡಿ ಉತ್ತಮ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ವಿಶ್ವಾಸವಿದೆ. ಈ ಸರಣಿಯಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಆಶಿಸುತ್ತೇನೆ. ನಾವು ಈ ಸರಣಿಯನ್ನು ಗೆದ್ದು ಆತ್ಮವಿಶ್ವಾಸದೊಂದಿಗೆ ಮುಕ್ತಾಯಗೊಳಿಸುತ್ತೇವೆ ಎಂಬ ನಂಬಿಕೆ ಇದೆ," ಎಂದು ಶುಭ್‌ಮನ್ ಗಿಲ್ ತಿಳಿಸಿದ್ದಾರೆ.