ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನೂತನ ಹೆಡ್‌ ಕೋಚ್‌ ಆಗಿ ಸೌರವ್‌ ಗಂಗೂಲಿ ನೇಮಕ!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನೂತನ ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಆ ಮೂಲಕ ಕಳೆದ ಸೀಸನ್‌ನಲ್ಲಿ ಮುಖ್ಯ ತರಬೇತುದಾರನಾಗಿ ಕಾರ್ಯನಿರ್ವಹಿಸಿದ್ದ ಹೇಮಾಂಗ್‌ ಬದಾನಿ ಅವರ ಸ್ಥಾನವನ್ನು ದಾದಾ ತುಂಬಿದ್ದಾರೆ.

IPL 2027: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೌರವ್‌ ಗಂಗೂಲಿ ಹೆಡ್‌ ಕೋಚ್‌!

ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೌರವ್‌ ಗಂಗೂಲಿ ಹೆಡ್‌ ಕೋಚ್‌. -

Profile
Ramesh Kote Oct 6, 2026 3:32 PM

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ (DC) ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganduly) ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಡೆಲ್ಲಿ ಫ್ರಾಂಚೈಸಿಯ ಕೋಚಿಂಗ್‌ ವಿಭಾಗದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಬಳಿಕ ಇದೇ ಮೊದಲ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಮುಖ್ಯ ತರಬೇತುದಾರ ಹುದ್ದೆಯನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಚೊಚ್ಚಲ ಐಪಿಎಲ್‌ ಟ್ರೋಫಿಗೆ ಎದುರು ನೋಡುತ್ತಿರುವ ಡೆಲ್ಲಿ ತಂಡ, ದಾದಾ ಮಾರ್ಗದರ್ಶನದಲ್ಲಿ ಹೇಗೆ ಪ್ರದರ್ಶನವನ್ನು ತೋರಲಿದ್ದಾರೆಂದು ಕಾದು ನೋಡಬೇಕಾಗಿದೆ.

ಸೌರವ್‌ ಗಂಗೂಲಿ ಅವರು 2019ರಲ್ಲಿ ಮೊದಲ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚಿಂಗ್‌ ವಿಭಾಗಕ್ಕೆ ಸೇರಿದ್ದರು. ಅಂದಿನಿಂದ ಅವರು ಪುರುಷ ಹಾಗೂ ಮಹಿಳೆಯರ ಎರಡೂ ತಂಡಗಳಲ್ಲಿ ಕ್ರಿಕೆಟ್‌ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇದರ ಜೊತೆಗೆ ಹಲವು ಹುದ್ದೆಗಳನ್ನು ನಿಭಾಹಿಸಿದ್ದಾರೆ. ಇದೀಗ ಐಪಿಎಲ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಒಂದು ತಂಡಕ್ಕೆ ಹೆಡ್‌ ಕೋಚ್‌ ಕಾರ್ಯನಿರ್ವಹಿಸಲಿದ್ದಾರೆ.

IND vs WI: ವೈಭವ್‌ ಸೂರ್ಯವಂಶಿಯ ಬೆಳವಣಿಗೆ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಮೊರ್ನೆ ಮಾರ್ಕೆಲ್‌!

2025 ಮತ್ತು 2026ರ ಐಪಿಎಲ್‌ ಎರಡು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಹೆಡ್‌ ಆಗಿದ್ದ ಹೇಮಾಂಗ್‌ ಬದಾನಿ ಅವರನ್ನು ಕೈ ಬಿಡಲಾಗಿದ್ದು, ಇವರ ಸ್ಥಾನಕ್ಕೆ ಇದೀಗ ಸೌರವ್‌ ಗಂಗೂಲಿ ಅವರನ್ನು ನೇಮಿಸಲಾಗಿದೆ. ಇದರ ಜೊತೆಗೆ ಬೌಲಿಂಗ್‌ ಕೋಚ್‌ ಮುನಾಫ್‌ ಪಟೇಲ್‌, ಟೀಮ್‌ ಡೈರೆಕ್ಟರ್‌ ವೇಣುಗೋಪಾಲ್‌ ರಾವ್‌ ಹಾಗೂ ಸಹಾಯಕಕೋಚ್‌ ಇಯಾನ್‌ ಬೆಲ್‌ ಅವರನ್ನು ಕೂಡ ಉಳಿಸಿಕೊಳ್ಳಲು ಡೆಲ್ಲಿ ಫ್ರಾಂಚೈಸಿ ಮನಸು ಮಾಡಲಿಲ್ಲ. 2026ರ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐದನೇ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಮುಗಿಸಿತ್ತು.



ಡಿಸಿಗೆ ಕೋಚ್‌ ಆದ ಬಳಿಕ ಸೌರವ್‌ ಗಂಗೂಲಿ ಹೇಳಿದ್ದೇನು?

"ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಹೆಡ್‌ ಕೋಚ್‌ ಆಗಿ ಜವಾಬ್ದಾರಿ ತೆಗೆದುಕೊಳ್ಳಲು ಎದುರು ನೋಡುತ್ತಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನನ್ನ ಹೃದಯಕ್ಕೆ ತುಂಬಾ ಹತ್ತಿರಲ್ಲಿದೆ ಹಾಗೂ ಹಲವು ವರ್ಷಗಳ ಕಾಲ ಡೆಲ್ಲಿ ಫ್ರಾಂಚೈಸಿಯೊಂದಿಗಿನ ನನ್ನ ಬಾಂಧವ್ಯ ಅತ್ಯಂತ ಬಲಿಷ್ಠವಾಗಿದೆ," ಎಂದು ಸೌರವ್‌ ಗಂಗೂಲಿ ತಿಳಿಸಿದ್ದಾರೆ.



"ನಮ್ಮ ಗುಂಪಿನಲ್ಲಿ ಅತ್ಯಂತ ಪ್ರತಿಭಾವಂತರು ಇದ್ದಾರೆ ಹಾಗೂ ಕಳೆದ ವರ್ಷಗಳಿಂದ ಅವರು ಅತ್ಯುತ್ತಮ ಕ್ರಿಕೆಟ್‌ ಆಡಿಕೊಂಡು ಬರುತ್ತಿದ್ದಾರೆ. ತಂಡದ ಜೊತೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಇದು ಹೊಸ ಸೀಸನ್‌ ಆಗಿದ್ದು, ಅತ್ಯಂತ ಬಲಿಷ್ಠ ಹಾಗೂ ಭಯಮುಕ್ತ ತಂಡವನ್ನು ಕಟ್ಟಲು ಪ್ರಯತ್ನ ಹಾಕುತ್ತೇನೆ," ಎಂದು ಡಿಸಿ ನೂತನ ಕೋಚ್‌ ಸೌರವ್‌ ಗಂಗೂಲಿ ಹೇಳಿದ್ದಾರೆ.

ಗಂಗೂಲಿಗೆ ಸ್ವಾಗತ ಕೋರಿದ ಡೆಲ್ಲಿ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯಸ್ಥ ಹಾಗೂ ಸಹ ಮಾಲೀಕ ಪಾರ್ಥ್ ಜಿಂದಾಲ್, ಸೌರವ್ ಗಂಗೂಲಿ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದನ್ನು ಸ್ವಾಗತಿಸಿದ್ದಾರೆ. ಗಂಗೂಲಿ ಅವರು ದೆಹಲಿ ಕ್ಯಾಪಿಟಲ್ಸ್ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಅನುಭವ ಮತ್ತು ನಾಯಕತ್ವವು ಹೊಸ ಜವಾಬ್ದಾರಿಯಲ್ಲಿ ತಂಡಕ್ಕೆ ಬಹಳಷ್ಟು ನೆರವಾಗಲಿದೆ ಎಂದು ಜಿಂದಾಲ್ ಹೇಳಿದ್ದಾರೆ.

“ದಾದಾ ಅವರು ಯಾವಾಗಲೂ ಡೆಲ್ಲಿ ಕ್ಯಾಪಿಟಲ್ಸ್ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ. ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಹಾಗೂ ಅತ್ಯುತ್ತಮ ಆಡಳಿತಗಾರರಾಗಿರುವ ಅವರನ್ನು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಘೋಷಿಸಲು ನನಗೆ ಅಪಾರ ಹೆಮ್ಮೆ ಮತ್ತು ಗೌರವವಿದೆ,” ಎಂದು ಪಾರ್ಥ್‌ ಜಿಂದಾಲ್ ತಿಳಿಸಿದ್ದಾರೆ.