ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SA vs NAM: ಚೊಚ್ಚಲ ಏಕದಿನ ಪಂದ್ಯದಲ್ಲಿಯೇ 150 ರನ್‌ ಚಚ್ಚಿದ ಜೋರ್ಡನ್‌ ಹರ್ಮನ್!

ನಮೀಬಿಯಾ ಎದುರು ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ತಂಡದ ಜೋರ್ಡನ್‌ ಹರ್ಮನ್‌ ಅವರು ಶತಕವನ್ನು ಬಾರಿಸಿದ್ದಾರೆ. ಅವರು ತಮ್ಮ 24ನೇ ವಯಸ್ಸಿನಲ್ಲಿಯೇ 126 ಎಸೆತಗಳಲ್ಲಿ 150 ರನ್‌ಗಳನ್ನು ಬಾರಿಸಿದರು. ಆ ಮೂಲಕ ಒಡಿಐ ಕ್ರಿಕೆಟ್‌ನಲ್ಲ ನೂತನ ದಾಖಲೆಯನ್ನು ಬರೆದಿದ್ದಾರೆ.

ಚೊಚ್ಚಲ ಏಕದಿನ ಪಂದ್ಯದಲ್ಲಿಯೇ 150 ರನ್‌ ಚಚ್ಚಿದ ಜೋರ್ಡನ್‌ ಹರ್ಮನ್!

ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಜೋರ್ಡನ್‌ ಹರ್ಮನ್‌. -

Profile
Ramesh Kote Sep 9, 2026 7:52 PM

ನವದೆಹಲಿ: ದಕ್ಷಿಣ ಆಫ್ರಿಕಾದ 24ರ ವಯಸ್ಸಿನ ಎಡಗೈ ಯುವ ಬ್ಯಾಟರ್ ಜೋರ್ಡನ್ ಹರ್ಮನ್ (Jordan Hermann) ತಮ್ಮ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಇತಿಹಾಸದ ಪುಟಗಳಲ್ಲಿ ಹೆಸರು ದಾಖಲಿಸಿದ್ದಾರೆ. ನಮೀಬಿಯಾ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ (NAM vs SA) ನಮೀಬಿಯಾ ವಿರುದ್ಧ ಇನಿಂಗ್ಸ್‌ ಆರಂಭಿಸಿದ ಹರ್ಮನ್ ಕೇವಲ 126 ಎಸೆತಗಳಲ್ಲಿ 150 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಈ ಐತಿಹಾಸಿಕ ಶತಕದೊಂದಿಗೆ ಹರ್ಮನ್ ಚೊಚ್ಚಲ ಏಕದಿನ ಪಂದ್ಯದಲ್ಲೇ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ವಿಶ್ವದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ.

150 ರನ್‌ಗಳ ಭರ್ಜರಿ ಇನಿಂಗ್ಸ್‌ ಮೂಲಕ ಜೋರ್ಡನ್ ಹರ್ಮನ್ ತಮ್ಮದೇ ದೇಶದ ಸಹ ಆಟಗಾರ ಮ್ಯಾಥ್ಯೂ ಬ್ರೀಟ್ಜ್ಕೆ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಬ್ರೀಟ್ಜ್ಕೆ ಅವರು 2025ರ ಫೆಬ್ರವರಿ 10ರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 148 ಎಸೆತಗಳಲ್ಲಿ 150 ರನ್ ಗಳಿಸಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಈ ಇಬ್ಬರು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಮಾತ್ರ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ 150 ರನ್‌ಗಳ ಗಡಿ ತಲುಪಿದ್ದಾರೆ. ಹೀಗಾಗಿ, ಹರ್ಮನ್ ತಮ್ಮ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬ್ರೀಟ್ಜ್ಕೆ ಅವರ ದಾಖಲೆಯನ್ನು ಸರಿಗಟ್ಟುವುದರ ಜೊತೆಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಆರಂಭ ನೀಡಿದ್ದಾರೆ.

Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್‌ ವರ್ಮಾರನ್ನು ಸ್ಲೆಡ್ಜ್‌ ಮಾಡಿದ ವೈಭವ್‌ ಸೂರ್ಯವಂಶಿ!

ಚೊಚ್ಚಲ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು

ಬ್ರೀಟ್ಜ್ಕೆ (ದಕ್ಷಿಣ ಆಫ್ರಿಕಾ): 150 ರನ್ — ನ್ಯೂಜಿಲೆಂಡ್ ವಿರುದ್ಧ, ಲಾಹೋರ್, 2025

ಜೋರ್ಡನ್ ಹರ್ಮನ್ (ದಕ್ಷಿಣ ಆಫ್ರಿಕಾ): 150 ರನ್ — ನಮೀಬಿಯಾ ವಿರುದ್ಧ, ವಿಂಡ್‌ಹೋಕ್, 2026

ಡೆಸ್ಮಂಡ್ ಹೇನ್ಸ್ (ವೆಸ್ಟ್ ಇಂಡೀಸ್): 148 ರನ್ — ಆಸ್ಟ್ರೇಲಿಯಾ ವಿರುದ್ಧ, ಸೇಂಟ್ ಜಾನ್ಸ್, 1978

ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ): 127 ರನ್ — ಐರ್ಲೆಂಡ್ ವಿರುದ್ಧ, ಅಬುಧಾಬಿ, 2021

ಮಾರ್ಕ್ ಚಾಪ್‌ಮನ್ (ಹಾಂಗ್ ಕಾಂಗ್): 124 ರನ್ — ಯುಎಇ ವಿರುದ್ಧ, ದುಬೈ, 2015



ಟೋನಿ ಡಿ ಜಾರ್ಜಿ ಮತ್ತು ಬ್ರೆವಿಸ್ ಜೊತೆ ಬಲಿಷ್ಠ ಜೊತೆಯಾಟ

150 ರನ್‌ಗಳ ಭರ್ಜರಿ ಇನಿಂಗ್ಸ್‌ ವೇಳೆ ಜೋರ್ಡನ್ ಹರ್ಮನ್ 17 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಟೋನಿ ಡಿ ಜಾರ್ಜಿ ಅವರೊಂದಿಗೆ ಎರಡನೇ ವಿಕೆಟ್‌ಗೆ 166 ಎಸೆತಗಳಲ್ಲಿ 190 ರನ್‌ಗಳ ಬೃಹತ್ ಜೊತೆಯಾಟ ನಿರ್ಮಿಸಿದರು. ನಂತರ ಮೂರನೇ ವಿಕೆಟ್‌ಗೆ ಡೆವಾಲ್ಡ್ ಬ್ರೆವಿಸ್ ಜೊತೆಗೂಡಿ 45 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ನಡೆಸಿದರು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಆಶಿಶ್‌ ನೆಹ್ರಾ!

ಹರ್ಮನ್ ಇನ್ನೊಂದು ರನ್ ಗಳಿಸಿದ್ದರೆ, ವಿಶ್ವ ದಾಖಲೆಯನ್ನು ಏಕಾಂಗಿಯಾಗಿ ತಮ್ಮ ಹೆಸರಿಗೆ ಬರೆದುಕೊಳ್ಳಬಹುದಿತ್ತು. ಆದರೆ 42ನೇ ಓವರ್‌ನಲ್ಲಿ ರೂಬೆನ್ ಟ್ರಂಪೆಲ್‌ಮನ್ ಅವರ ಎಸೆತದಲ್ಲಿ ಅವರು ಔಟಾದರು. ಆದರೂ ಔಟಾಗುವ ಮುನ್ನ ಹರ್ಮನ್ ನಮೀಬಿಯಾ ವಿರುದ್ಧದ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾಗೆ ಬೃಹತ್ ಮೊತ್ತದತ್ತ ಸಾಗಲು ಭದ್ರ ಅಡಿಪಾಯ ಹಾಕಿದರು. ಚೊಚ್ಚಲ ಏಕದಿನ ಪಂದ್ಯದಲ್ಲೇ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಗಮನ ಸೆಳೆದಿದೆ.