ಶ್ರೀಲಂಕಾ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗೆ ಇಳಿದು ಶಾಕ್ ನೀಡಿದ ಧನಂಜಯ ಡಿ ಸಿಲ್ವಾ!
ಧನಂಜಯ ಡಿ ಸಿಲ್ವಾ ಅವರು ಶ್ರೀಲಂಕಾ ಟೆಸ್ಟ್ ತಂಡದ ನಾಯಕತ್ವವನ್ನು ಹಠಾತ್ ತೊರೆದಿದ್ದಾರೆ. 2024ರ ಜನವರಿ ತಿಂಗಳಿನಿಂದ ಅವರು ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಆದರೆ, ಮುಂದಿನ ಪೀಳಿಗೆಗೆ ನಾಯತ್ವವನ್ನು ಹಸ್ತಾಂತರಿಸುವುದು ಅವರ ಉದ್ದೇಶವಾಗಿದೆ. ಈ ಕಾರಣದಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಅವರ ಪತ್ರದಲ್ಲಿ ಉಲ್ಲೇಖವಾಗಿದೆ.
ಶ್ರೀಲಂಕಾ ಟೆಸ್ಟ್ ನಾಯಕತ್ವವನ್ನು ತೊರೆದ ಧನಂಜಯ ಡಿ ಸಿಲ್ವಾ. -
ನವೆದೆಹಲಿ: ಹಿರಿಯ ಬ್ಯಾಟ್ಸ್‌ಮನ್ ಧನಂಜಯ್ ಡಿ ಸಿಲ್ವಾ (Dhananjaya De Silva) ಅವರು ಶ್ರೀಲಂಕಾ ಟೆಸ್ಟ್(Sri lanka Test Captaincy) ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಆ ಮೂಲಕ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ. 2024ರ ಜನವರಿಯಲ್ಲಿ ಅವರು ಶ್ರೀಲಂಕಾ ಟೆಸ್ಟ್ ತಂಡಕ್ಕೆ ನಾಯಕರಾಗಿ ನೇಮಕಗೊಂಡಿದ್ದರು. ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಅವರು, ಇದೀಗ ಟೆಸ್ಟ್ ನಾಯಕತ್ವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಹಾಗೂ ಅವರು ಹಿರಿಯ ಬ್ಯಾಟ್ಸ್‌ಮನ್ ಆಗಿ ಇನ್ನು ಮುಂದೆ ಆಡಲಿದ್ದಾರೆ.
ಧನಂಜಯ ಡಿ ಸಿಲ್ವಾ ಅವರು ಟೆಸ್ಟ್ ತಂಡದ ನಾಯಕತ್ವವನ್ನು ತೊರೆಯುವ ನಿರ್ಧಾರವನ್ನು ಶ್ರೀಲಂಕಾ ಆಯ್ಕೆ ಸಮತಿಗೆ ತಿಳಿಸಿದ್ದಾರೆ ಹಾಗೂ ಅವರು ಮುಂದಿನ ದಿನಗಳಲ್ಲಿ ಆಟಗಾರನಾಗಿ ಮುಂದುವರಿಯಲಿದ್ದೇನೆಂದು ಅವರು ಹೇಳಿದ್ದಾರೆ. ಹಾಗಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನುಮುಂದೆ ಕೇವಲ ಹಿರಿಯ ಆಲ್‌ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
IND vs WI: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್!
"ಶ್ರೀಲಂಕಾ ತಂಡದ ನಾಯಕತ್ವ ಮುಂದಿನ ತಲೆಮಾರಿಗೆ ಹೋಗಬೇಕೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ," ಎಂದು ಧನಂಜಯ್ ಡಿ ಸಿಲ್ವಾ ಅವರು ತಮ್ಮ ಪತ್ರದಲ್ಲಿ ಶ್ರೀಲಂಕಾ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ.
ಧನಂಜಯ್ ಡಿ ಸಿಲ್ವಾಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೆಚ್ಚುಗೆ
ಶ್ರೀಲಂಕಾ ಟೆಸ್ಟ್ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವ ನಾಯಕನಿಗೆ ಶ್ರೀಲಂಕಾ ಕ್ರಿಕೆಟ್ (SLC) ಸಿಇಒ ಆಶ್ಲೇ ಡಿ ಸಿಲ್ವಾ ಧನ್ಯವಾದ ಅರ್ಪಿಸಿದ್ದಾರೆ. ಟೆಸ್ಟ್ ತಂಡಕ್ಕೆ ಅವರು ನೀಡಿದ ನಾಯಕತ್ವವನ್ನು ಶ್ಲಾಘಿಸಿರುವ ಆಶ್ಲೇ ಡಿ ಸಿಲ್ವಾ, ಮುಂದಿನ ದಿನಗಳಲ್ಲೂ ತಂಡದ ಆಯ್ಕೆಗೆ ಲಭ್ಯವಿರುವುದನ್ನು ಸ್ವಾಗತಿಸಿದ್ದಾರೆ.
“ಅವರ ವೃತ್ತಿಜೀವನದ ಉಳಿದ ಭಾಗಕ್ಕೆ ಶ್ರೀಲಂಕಾ ಕ್ರಿಕೆಟ್ ಶುಭ ಹಾರೈಸುತ್ತದೆ. ನಮ್ಮ ಟೆಸ್ಟ್ ತಂಡಕ್ಕೆ ಅವರು ನೀಡಿದ ನಾಯಕತ್ವಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ,” ಎಂದು ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಹೇಳಿದ್ದಾರೆ.
Sri Lanka’s Test captain, Dhananjaya de Silva, has decided to step down from the captaincy with immediate effect. READ: https://t.co/8IeasaKyun #SriLankaCricket
— Sri Lanka Cricket 🇱🇰 (@OfficialSLC) October 8, 2026
ದಿಮುತ್ ಕರುಣಾರತ್ನೆ ಬಳಿಕ ನಾಯಕತ್ವ ವಹಿಸಿಕೊಂಡಿದ್ದ ಧನಂಜಯ ಡಿ ಸಿಲ್ವಾ, ಶ್ರೀಲಂಕಾ ಪರ ಒಟ್ಟು 18 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಈ ಪೈಕಿ ಶ್ರೀಲಂಕಾ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ನಾಯಕನಾಗಿ ಆಡಿದ ಅವಧಿಯಲ್ಲಿ ಡಿ ಸಿಲ್ವಾ 18 ಪಂದ್ಯಗಳಲ್ಲಿ 1,130 ರನ್ ಗಳಿಸಿದ್ದು, 36.45ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಬೌಲಿಂಗ್‌ನಲ್ಲೂ ಕೊಡುಗೆ ನೀಡಿರುವ ಅವರು ಒಟ್ಟು 9 ವಿಕೆಟ್ ಪಡೆದಿದ್ದು, 44.44ರ ಬೌಲಿಂಗ್ ಸರಾಸರಿ ಹೊಂದಿದ್ದಾರೆ.