T20 World Cup: 2014ರ ಪೆಟ್ರೋಲ್ ಬಂಕ್‌ನಲ್ಲಿನ ಫೋಟೋಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್!
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 8 ರಂದು ಭಾನುವಾರ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಭಾರತ ತಂಡ, 96 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರನೇ ಬಾರಿ ಟೀಮ್ ಇಂಡಿಯಾ ಚುಟುಕು ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಇದರ ಬೆನ್ನಲ್ಲೆ ಸೂರ್ಯಕುಮಾರ್ ಯಾದವ್ ಅವರ ಹಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸೂರ್ಯಕುಮಾರ್ ಯಾದವ್‌ರ ಹಳೆಯ ಫೋಟೋ ವೈರಲ್. -
ಅಹಮದಬಾದ್: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಹಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸೂರ್ಯಕುಮಾರ್ ಅವರ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳ ಫೋಟೋಗಳ ಸ್ಕ್ರೀನ್ ಶಾಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಒಂದು ಫೋಟೋದಲ್ಲಿ ಸೂರ್ಯಕುಮಾರ್ ಯಾದವ್ ಅವರು ಪೆಟ್ರೋಲ್ ಬಂಕ್ ಪಕ್ಕ ನಿಂತಿದ್ದಾರೆ. ಈ ಫೋಟೋ ಬಗ್ಗೆ ಟೀಮ್ ಇಂಡಿಯಾ ಸ್ಪಷ್ಟನೆಯನ್ನು ನೀಡಿದ್ದಾರೆ. 2013ರ ಮತ್ತೊಂದು ಫೋಟೋಗೆ ಸೂರ್ಯ, ʻಅಹಮದಾಬಾದ್ ಕಾಲಿಂಗ್ʼ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, ಈ ಹಳೆಯ ಫೋಟೋಗಳು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದುದನ್ನು ಗಮನಿಸಿದ ಸಾಮಾಜಿಕ ಮಾಧ್ಯಮ ತಂಡದ ಸದಸ್ಯರು ತಮಗೆ ತಿಳಿಸಿದರು. ಆಗ ಮಾತ್ರ ನನಗೆ ಇವುಗಳ ಬಗ್ಗೆ ಅರಿವಿಗೆ ಬಂತು ಎಂದರು.
"ಈ ಹಳೆ ಪೋಟೋಗಳು ಟ್ರೆಂಡಿಂಗ್ ಆಗಿವೆ ಎಂದು ನನಗೆ ನಮ್ಮವರು ತಿಳಿಸಿದರು. ನಮ್ಮ ಸೋಶಿಯಲ್ ಮೀಡಿಯಾ ತಂಡದವರು ಈ ಫೋಟೋಗಳನ್ನು ಉಲ್ಲೇಖಿಸಿ ಹಾಗೂ ನನಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾರೆ," ಎಂದು ಸೂರ್ಯಕುಮಾರ್ ಯಾದವ್ ಅವರು ತಮ್ಮ ಹಳೆಯ ಫೋಟೋಗಳನ್ನು ಸ್ಮರಿಸಿಕೊಂಡಿದ್ದಾರೆ.
T20 World Cup: ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಶೋಯೆಬ್ ಅಖ್ತರ್ ವಿಶೇಷ ಸಂದೇಶ!
ಪೆಟ್ರೋಲ್ ಬಂಕ್‌ನಲ್ಲಿನ ತಮ್ಮ ಫೋಟೋ ವೃತ್ತಿ ಜೀವನದ ಆರಂಭಿಕ ದಿನಗಳದ್ದು, ಬಹುಶಃ 2010 ಅಥವಾ 2011ರಲ್ಲಿ ತೆಗೆದುಕೊಂಡು ಪೋಟೋ ಅದಾಗಿರಬೇಕು. ಈ ವೇಳೆ ಅವರು ತಮ್ಮ ಸ್ನೇಹಿತನ ಪೆಟ್ರೋಲ್ ಪಂಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದರು. ಆಗ ಸೆರೆ ಹಿಡಿತ ಫೋಟೋ ಇದಾಗಿದೆ.
India T20I captain Suryakumar Yadav (@surya_14kumar) explained the story behind two viral old photos, including one from a petrol pump inauguration and another 'Ahmedabad calling' posthttps://t.co/6tiHSpXWwM pic.twitter.com/ApMLWseU3s
— IndiaToday (@IndiaToday) March 9, 2026
"ನಾನು ಆ ಫೋಟೋವನ್ನು ನೋಡಿದ ಬಳಿಕ, ಅದು 2010 ಅಥವಾ 2011ರ ಫೋಟೋ ಎಂದು ನೆನೆಪಿಸಿಕೊಳುತ್ತೇನೆ. ನನ್ನ ಸ್ನೇಹಿತರಲ್ಲಿ ಒಬ್ಬರು ಪೆಟ್ರೋಲ್ ಪಂಪ್ ಅನ್ನು ಉದ್ಘಾಟನೆ ಮಾಡಿದ್ದರು ಹಾಗೂ ಆ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಇದು ನನಗೆ ಹತ್ತಿರವಿದ್ದ ಕಾರಣ ಹೋಗಿದ್ದೆ. ಆ ಸಂದರ್ಭದಲ್ಲಿ ತೆಗೆದುಕಂಡು ಫೋಟೋ ಇದಾಗಿದೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಅಹಮದಾಬಾದ್ ಕಾಲಿಂಗ್
ಪೆಟ್ರೋಲ್ ಬಂಕ್‌ನಲ್ಲಿನ ಫೋಟೋ ಬಳಿಕ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಮತ್ತೊಂದು ಫೋಟೋ ವೈರಲ್ ಆಗಿದೆ. 2013ರಲ್ಲಿ ಸೂರ್ಯಕುಮಾರ್ ಯಾದವ್ ಹಂಚಿಕೊಂಡಿದ್ದ ಫೋಟೋಗೆ, "ಅಹಮದಾಬಾದ್ ಕಾಲಿಂಗ್" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
“ಆ ನಂತರ ಮತ್ತೊಂದು ಫೋಟೋ ‘ಅಹಮದಾಬಾದ್ ಕಾಲಿಂಗ್’ ಎಂಬುದು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಇದನ್ನು ನೋಡಿದಾಗ ಜೀವನದ ಒಂದು ದೊಡ್ಡ ವೃತ್ತ ಪೂರ್ಣವಾದಂತೆ ಅನಿಸುತ್ತದೆ,” ಎಂದು ಅವರು ತಿಳಿಸಿದರು.
“ಇಲ್ಲಿಗೆ ತಲುಪಲು ಬಹಳ ಸಮಯ ಬೇಕಾಯಿತು. ಸುಮಾರು 15 ವರ್ಷಗಳ ಪ್ರಯಾಣ ಇದಾಗಿದೆ, ಆದರೆ ಅದು ಅತ್ಯಂತ ಸುಂದರವಾದ ಪಯಣವಾಗಿದೆ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.