ʻಯಾರು ಗುರು ಇವನು?ʼ: ಜಸ್‌ಪ್ರೀತ್ ಬುಮ್ರಾಗೆ ಮೊದಲ ಎಸೆತದಲ್ಲಿಯೇ ಸಿಕ್ಸ್ ಹೊಡೆದ ವೈಭವ್ ಸೂರ್ಯವಂಶಿ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಾಕಷ್ಟು ಬೌಲರ್‌ಗಳನ್ನು ವೈಭವ್ ಸೂರ್ಯವಣಂಶಿ ಎದುರಿಸಿದ್ದಾರೆ. ಇದೀಗ ಅವರು ಯಾರ್ಕರ್ ಕಿಂಗ್ ಜಸ್‌ಪ್ರೀತ್ ಬುಮ್ರಾ ಅವರನ್ನು ತಮ್ಮ ಶೈಲಿಯಲ್ಲಿ ಎದುರಿಸಿ, ಮೊಟ್ಟ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದ್ದಾರೆ.
ಜಸ್‌ಪ್ರೀತ್ ಬುಮ್ರಾಗೆ ಮೊದಲ ಎಸೆತದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್. -
ಗುವಾಹಟಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಈಗಾಗಲೇ ವಿಶ್ವದ ಹಲವು ಸ್ಟಾರ್ ಬೌಲರ್‌ಗಳಿಗೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಚಳ್ಳೆ ಹಣ್ಣು ತಿನ್ನಿಸಿರುವ 15ರ ವಯಸ್ಸಿನ ವೈಭವ್ ಸೂರ್ಯವಂಶಿ (Vaibhav Suryavanshi), ಯಾರ್ಕರ್ ಕಿಂಗ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರನ್ನು ಎದುರಿಸುವುದು ಬಾಕಿ ಇತ್ತು. ಆದರೆ, ಏಪ್ರಿಲ್ 7 ರಂದು ಈ ಕೆಲಸವನ್ನು ಪೂರ್ಣಗೊಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ನಿದ್ದೆ ಕೆಡಿಸಿದ್ದ ಜಸ್‌ಪ್ರೀತ್ ಬುಮ್ರಾಗೆ, ವೈಭವ್ ಸೂರ್ಯವಂಶಿ ಬೆವರಿಳಿಸಿದ್ದಾರೆ. ಜಸ್‌ಪ್ರೀತ್ ಬುಮ್ರಾ ಅವರನ್ನು ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ವೈಭವ್ ಸೂರ್ಯವಂಶಿ ಭರ್ಜರಿ ಸಿಕ್ಸರ್ ಬಾರಿಸಿ ಎಲ್ಲರೂ ದಂಗಾಗುವಂತೆ ಮಾಡಿದರು.
ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಕ್ಕೂ ಮುನ್ನ ಜಸ್‌ಪ್ರೀತ್ ಬುಮ್ರಾ ಮತ್ತು ವೈಭವ್ ಸೂರ್ಯವಂಶಿ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಮೊದಲ ಬಾರಿ ಬುಮ್ರಾ ಅವರನ್ನು ವೈಭವ್ ಹೇಗೆ ಎದುರಿಸಬಹುದೆಂಬ ಬಗ್ಗೆ ತೀವ್ರ ಕುತೂಹಲವಿತ್ತು. ಮಳೆ ಕಾರಣ 11 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ, ಜಸ್‌ಪ್ರೀತ್ ಬುಮ್ರಾಗೆ ಆಡಿದ ಮೊಟ್ಟ ಮೊದಲ ಎಸೆತದಲ್ಲಿಯೇ ಯಾವುದೇ ಭಯ ಇಲ್ಲದೆ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿದರು. ಬುಮ್ರಾ ಲೈನ್ ಅಂಡ್ ಲೆನ್ತ್‌ನಲ್ಲಿ ಎಡವಿದ ಕಾರಣ ಚೆಂಡು ಸ್ಲಾಟ್‌ನಲ್ಲಿ ಬಿತ್ತು ಹಾಗೂ ಇದನ್ನು ವೈಭವ್ ಸದುಪಯೋಗಪಡಿಸಿಕೊಂಡರು.
IPL 2026: ʻಸಂಯಮದಿಂದ ವರ್ತಿಸಿʼ-ಅಜಿಂಕ್ಯ ರಹಾನೆಗೆ ಪಾಠ ಮಾಡಿದ ವೀರೇಂದ್ರ ಸೆಹ್ವಾಗ್!
ಅವರ ದಿಟ್ಟ ಹೊಡೆತಗಳಿಂದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆರಂಭವನ್ನು ಪಡೆಯುವ ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಒತ್ತಡ ಬಿತ್ತು. ನಿಖರತೆ ಮತ್ತು ನಿಯಂತ್ರಣಕ್ಕೆ ಹೆಸರಾಗಿರುವ ಜಸ್‌ಪ್ರೀತ್ ಬುಮ್ರಾ ಅವರು, ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟದ ವಿಧಾನದಿಂದ ಅಚ್ಚರಿಗೊಳಗಾದರು ಹಾಗೂ ನಕ್ಕರು.
HE IS HIM MOMENT FOR VAIBHAV. 🥶🔥
— Mufaddal Vohra (@mufaddal_vohra) April 7, 2026
- 15 year old Vaibhav Suryavanshi smashed Jasprit Bumrah for two sixes in 3 balls. 🤯 pic.twitter.com/rCZ5Hx0aGl
ಆರಂಭಿಕ ಆಘಾತದ ನಡುವೆಯೂ ಬುಮ್ರಾ ತಮ್ಮ ಶಾಂತತೆಯನ್ನು ಕಾಪಾಡಿಕೊಂಡು, ಯಾವುದೇ ಅಸಮಾಧಾನವನ್ನು ತೋರಿಸದೇ ನಗುತ್ತಾ ಹಿಂತಿರುಗಿದರು. ಆದರೆ 15 ವರ್ಷದ ವೈಭವ್ ಅವರ ದಾಳಿ ಅಲ್ಲಿಗೇ ನಿಲ್ಲಲಿಲ್ಲ; ಅದೇ ಓವರ್‌ನಲ್ಲಿ ಅವರು ಬುಮ್ರಾ ವಿರುದ್ಧ ಮತ್ತೊಂದು ಸಿಕ್ಸರ್ ಸಿಡಿಸಿದರು. ಈ ಬಾರಿ ಲೆಗ್ ಸೈಡ್ ಕಡೆ ಸ್ವಲ್ಪ ಶಾರ್ಟ್ ಲೆನ್ತ್ ಡೆಲಿವರಿ ಬಂದಾಗ, ವೈಭವ್ ಹಿಂದಕ್ಕೆ ಸರಿದು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಮೇಲೆ ಭರ್ಜರಿ ಸಿಕ್ಸರ್ ಹೊಡೆದರು.
ʻತಮ್ಮ ಪಾತ್ರವನ್ನು ಪೂರ್ಣಗೊಳಿಸದ ಆಟಗಾರರನ್ನು ಬ್ಯಾನ್ ಮಾಡಿʼ: ಬಿಸಿಸಿಐಗೆ ಸುನೀಲ್ ಗವಾಸ್ಕರ್ ಆಗ್ರಹ!
ಸೂರ್ಯವಂಶಿ 39 ರನ್ ಗಳಿಸಿ ಔಟ್
ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೊದಲ ಓವರ್‌ನಲ್ಲೇ ಜೈಸ್ವಾಲ್ 22 ರನ್ ಗಳಿಸಿದರು. ಎರಡನೇ ಓವರ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 14 ರನ್ ನೀಡಿದರೆ, ಮೂರನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ 22 ರನ್ ನೀಡಿದರು. ಸೂರ್ಯವಂಶಿ ಕೇವಲ 14 ಚೆಂಡುಗಳಲ್ಲಿ 39 ರನ್ ಗಳಿಸಿ ಸಿಡಿಸಿದ ನಂತರ ಶಾರ್ದುಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಸೂರ್ಯವಂಶಿ ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ಒಂದು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.