ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahavatar Narsimha Movie: ಆ್ಯನಿಮೇಷನ್‌ ಚಿತ್ರ ʼಮಹಾವತಾರ್‌ ನರಸಿಂಹʼಕ್ಕೆ ಶುಭ ಹಾರೈಸಿದ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

Rishab Shetty: ಬಹು ನಿರೀಕ್ಷಿತ ʼಮಹಾವತಾರ್‌ ನರಸಿಂಹʼ ಆ್ಯನಿಮೇಷನ್‌ ಚಿತ್ರ ರಿಲೀಸ್‌ ಆಗಿದೆ. ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗಿರುವ ʼಮಹಾವತಾರ್‌ ನರಸಿಂಹʼಕ್ಕೆ ಸ್ಯಾಂಡಲ್‌ವುಡ್‌ ನಟ-ನಿರ್ದೇಶಕ, ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಶುಭ ಹಾರೈಸಿದ್ದಾರೆ.

ʼಮಹಾವತಾರ್‌ ನರಸಿಂಹʼ ಚಿತ್ರಕ್ಕೆ ರಿಷಬ್‌ ಶೆಟ್ಟಿ ಶುಭ ಹಾರೈಕೆ

Ramesh B Ramesh B Jul 26, 2025 7:13 PM

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ, ಆ್ಯನಿಮೇಷನ್‌ ಸಿನಿಮಾ ʼಮಹಾವತಾರ್‌ ನರಸಿಂಹʼ (Mahavatar Narsimha Movie) ಕನ್ನಡ ಸಹಿತ ವಿವಿಧ ಭಾಷೆಗಳಲ್ಲಿ ತೆರೆಗೆ ಬಂದಿದೆ. ಅಶ್ವಿನ್‌ ಕುಮಾರ್‌ ನಿರ್ದೇಶನದ ಈ ಚಿತ್ರದಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಪೌರಾಣಿಕ ಕಥೆಯ ಈ ಸಿನಮಾವನ್ನು ಕ್ಲೀಮ್‌ ಪ್ರೊಡಕ್ಷನ್‌ (Kleen Production) ಮತ್ತು ಕನ್ನಡ ಹೊಂಬಾಳೆ ಫಿಲ್ಮ್ಸ್‌ (Hombale Films) ಜಂಟಿಯಾಗಿ ತೆರೆಗೆ ಬಂದಿದೆ. ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗಿರುವ ʼಮಹಾವತಾರ್‌ ನರಸಿಂಹʼಕ್ಕೆ ಸ್ಯಾಂಡಲ್‌ವುಡ್‌ ನಟ-ನಿರ್ದೇಶಕ, ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಶುಭ ಹಾರೈಸಿದ್ದಾರೆ.

ʼಕಾಂತಾರʼ ಚಿತ್ರದ ಮೂಲಕ ದೇಶದ ಗಮನ ಸೆಳೆದು, ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ರಿಷಬ್‌ ಶೆಟ್ಟಿ ʼಮಹಾವತಾರ್‌ ನರಸಿಂಹʼ ಚಿತ್ರದ ಟ್ರೈಲರ್‌ ಹಂಚಿಕೊಂಡು ಸಿನಿಮಾ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ʼʼಮಹಾವತಾರ ನರಸಿಂಹʼ ಚಿತ್ರತಂಡಕ್ಕೆ ನನ್ನ ಆತ್ಮಪೂರ್ವಕ ಶುಭಾಶಯಗಳು...ಸಿನಿಮಾ ದೊಡ್ಡ ಯಶಸ್ಸು ಕಾಣಲಿ...ʼʼ ಎಂದು ಅವರು ಬರೆದುಕೊಂಡಿದ್ದಾರೆ.

ರಿಷಬ್‌ ಶೆಟ್ಟಿ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Mahavatar Narsimha Promo: ಅಧರ್ಮ ತಲೆ ಎತ್ತಿದಾಗ...; ಹೊಂಬಾಳೆ ಫಿಲ್ಮ್ಸ್‌ನ ʼಮಹಾವತಾರ್‌ ನರಸಿಂಹʼದ ಪ್ರೊಮೋ ಔಟ್‌: ಅಬ್ಬರಿಸಿದ ಹಿರಣ್ಯಕಶಿಪು

ಪ್ರೇಕ್ಷಕರನ್ನು ರೋಮಾಂಚಗೊಳಿಸಿದ ಚಿತ್ರ

ಸದ್ಯ ಪ್ರೇಕ್ಷಕರನ್ನು ಸೆಳೆದಿರುವ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ತೀವ್ರ ಪೈಪೋಟಿ ನಡುವೆ ಈ ತ್ರೀಡಿ ಚಿತ್ರ ಮೊದಲ ದಿನ 1.75 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಅತೀ ಹೆಚ್ಚು ಆದಾರ ಹಿಂದಿಯಿಂದಲೇ ಹರಿದು ಬಂದಿದೆ. ಹಿಂದಿಯಲ್ಲಿ 1.3 ಕೋಟಿ ರೂ. ಗಳಿಸಿದೆ. ಕನ್ನಡದಲ್ಲಿ 0.05 ಕೋಟಿ ರೂ., ತೆಲುಗಿನಲ್ಲಿ 0.35 ಕೋಟಿ ರೂ., ತಮಿಳಿನಲ್ಲಿ 0.03 ಕೋಟಿ ರೂ., ಮಲಯಾಳಂನಲ್ಲಿ 0.02 ಕೋಟಿ ರೂ. ಗಳಿಸಿದೆ. ಪ್ರೇಕ್ಷಕರಿಂದ ಮತ್ತು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್‌ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಹ್ಲಾದನ ಭಕ್ತಿಯ ಪರಾಕಾಷ್ಠೆ, ದುಷ್ಟ ಹಿರಣ್ಯ ಕಶ್ಯಪುವಿನ ಆರ್ಭಟ ತ್ರೀಡಿಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ರೋಮಾಂಚನಗೊನಗೊಂಡಿದ್ದಾರೆ.

ʼʼಅದ್ಭುತ ಚಿತ್ರ. 10ಕ್ಕೆ 10 ಅಂಕ ನೀಡುತ್ತೇನೆ. ಚಿತ್ರ ನೋಡುತ್ತಿದ್ದಂತೆ ರೋಮಾಂಚನಗೊಂಡೆ. ಆದರೆ ಚಿತ್ರಕ್ಕೆ ಕಡಿಮೆ ಶೋ ಕೊಟ್ಟಿದ್ದು ಮತ್ತು ಸರಿಯಾಗಿ ಪ್ರಚಾರ ನಡೆಸದೇ ಇದ್ದುದು ಬೇಸರ ಮೂಡಿಸಿದೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಸುಮಾರು 30 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.

2 ವರ್ಷಗಳ ಅಂತರದಲ್ಲಿ 7 ಚಿತ್ರಗಳ ಬಿಡುಗಡೆ

ಇದು ಆ್ಯನಿಮೇಡೆಡ್‌ ಸರಣಿ ಚಿತ್ರವಾಗಿದ್ದು ʼಮಹಾವತಾರ್ ಪರಶುರಾಮ್ʼ (2027), ʼಮಹಾವತಾರ್ ರಘುನಂದನ್ʼ (2029), ʼಮಹಾವತಾರ್ ದ್ವಾರಕಾದೀಶ್‌ʼ (2031), ʼಮಹಾವತಾರ್ ಗೋಕುಲಾನಂದʼ (2033), ʼಮಹಾವತಾರ್ ಕಲ್ಕಿ ಪಾರ್ಟ್ 1ʼ (2035), ʼಮಹಾವತಾರ್ ಕಲ್ಕಿ ಪಾರ್ಟ್ 2ʼ (2037) ಹೀಗೆ ಇವು 2 ವರ್ಷಗಳ ಅಂತರದಲ್ಲಿ ಬಿಡುಗಡೆಯಾಗಲಿವೆ.