ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಮರಳಲು ಯುವರಾಜ್‌, ಡಿವಿಲಿಯರ್ಸ್‌, ಗೇಲ್ಸ್‌ ಸಜ್ಜು!

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟಿ20 ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿ ಅಕ್ಟೋಬರ್ 3ರಿಂದ 18ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಮೊದಲ ಎರಡು ಆವೃತ್ತಿಗಳನ್ನು ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿದ ಬಳಿಕ, ಈ ಬಾರಿ ಯುಎಇಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ ಮತ್ತು ಕ್ರಿಸ್ ಗೇಲ್ ಸೇರಿದಂತೆ ವಿಶ್ವ ಕ್ರಿಕೆಟ್‌ನ ಹಲವು ಖ್ಯಾತ ಮಾಜಿ ಆಟಗಾರರು ಭಾಗವಹಿಸಲಿದ್ದಾರೆ.

ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಮರಳಲು ಎಬಿಡಿ, ಗೇಲ್‌ ಸಜ್ಜು!

ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ ಆಡಲು ಎಬಿಡಿ, ಯುವಿ, ಗೇಲ್‌ ಸಜ್ಜು. -

Profile
Ramesh Kote Oct 2, 2026 3:24 PM

ನವದೆಹಲಿ: ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರು ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟಿ20 ಲೀಗ್‌ನ ಮೂರನೇ ಆವೃತ್ತಿ ಅಕ್ಟೋಬರ್ 3ರಿಂದ 18ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿ ಮಧ್ಯಪ್ರಾಚ್ಯದಲ್ಲಿ ಟೂರ್ನಿ ಆಯೋಜನೆಯಾಗುತ್ತಿದ್ದು, ದುಬೈ ಮತ್ತು ಶಾರ್ಜಾದ ಪ್ರಮುಖ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಇಂಗ್ಲೆಂಡ್‌ನಲ್ಲಿ ನಡೆದ ಮೊದಲ ಎರಡು ಆವೃತ್ತಿಗಳು ಯಶಸ್ವಿಯಾಗಿದ್ದವು. ಅದರಲ್ಲೂ ಎರಡನೇ ಆವೃತ್ತಿಯನ್ನು ವಿಶ್ವದಾದ್ಯಂತ 42.5 ಕೋಟಿಗೂ ಅಧಿಕ ವೀಕ್ಷಕರು ವೀಕ್ಷಿಸಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಟೂರ್ನಿಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

2027ರ ವಿಶ್ವಕಪ್ ಹೊಸ ನಿಮಯದ ಪ್ರಕಾರ ಸೆಮಿಫೈನಲ್ ತಲುಪಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?

ಮತ್ತೆ ಮೈದಾನಕ್ಕಿಳಿಯಲಿರುವ ಕ್ರಿಕೆಟ್ ದಿಗ್ಗಜರು

ಮೂರನೇ ಆವೃತ್ತಿಯಲ್ಲಿ ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಜ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇವಿಡ್ ವಾರ್ನರ್, ಮೊಯೀನ್ ಅಲಿ ಮತ್ತು ಮಹಮದುಲ್ಲಾ ರಿಯಾದ್ ಸೇರಿದಂತೆ ಹಲವು ಖ್ಯಾತ ಮಾಜಿ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿ ಹಾಗೂ ಸ್ಫೋಟಕ ಆಟದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಈ ಆಟಗಾರರು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿರುವುದು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದೆ. ಕ್ರಿಸ್ ಗೇಲ್ ಅವರ ಸಿಕ್ಸರ್‌ಗಳ ಅಬ್ಬರ, ಎಬಿ ಡಿವಿಲಿಯರ್ಸ್ ಅವರ 360 ಡಿಗ್ರಿ ಬ್ಯಾಟಿಂಗ್ ಹಾಗೂ ಯುವರಾಜ್ ಸಿಂಗ್ ಅವರ ಆಕ್ರಮಣಕಾರಿ ಆಟವನ್ನು ಮತ್ತೊಮ್ಮೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಭಾರತ–ಪಾಕಿಸ್ತಾನ ನಡುವಿನ ಕದನಕ್ಕೆ ವೇದಿಕೆ

ಮೂರನೇ ಆವೃತ್ತಿಯಲ್ಲಿ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ತಂಡಗಳ ನಡುವಿನ ಪಂದ್ಯ ಪ್ರಮುಖ ಆಕರ್ಷಣೆಯಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾಗಿರುವ ಭಾರತ–ಪಾಕಿಸ್ತಾನ ಪೈಪೋಟಿ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆಯಲಿದೆ. ಯುವರಾಜ್ ಸಿಂಗ್, ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ಹಫೀಜ್ ಅವರಂತಹ ಆಟಗಾರರು ಮುಖಾಮುಖಿಯಾಗುವ ಸಾಧ್ಯತೆಯಿರುವುದರಿಂದ ಈ ಪಂದ್ಯಕ್ಕೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಇದರೊಂದಿಗೆ ಇತರ ತಂಡಗಳ ನಡುವಿನ ಪಂದ್ಯಗಳೂ ಟೂರ್ನಿಗೆ ಮತ್ತಷ್ಟು ರೋಚಕತೆ ನೀಡಲಿವೆ.

ODI World Cup 2027: ಅ 10ಕ್ಕೆ ಪಾಕ್‌ ಪಂದ್ಯ, ಟೀಮ್‌ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

ಏಳು ತಂಡಗಳ ನಡುವೆ ಪ್ರಶಸ್ತಿ ಪೈಪೋಟಿ

ಡಬ್ಲ್ಯುಸಿಎಲ್‌ ಮೂರನೇ ಆವೃತ್ತಿಯಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಸೇರಿದಂತೆ ಏಳು ತಂಡಗಳು ಭಾಗವಹಿಸಲಿವೆ. ಈ ತಂಡಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಟೂರ್ನಿಯ ಕುರಿತು ಮಾತನಾಡಿದ WCL ಸಂಸ್ಥಾಪಕ ಹರ್ಷಿತ್ ತೋಮರ್, "ಮೂರನೇ ಆವೃತ್ತಿಯ ಉದ್ದೇಶ ಪ್ರಮುಖ ಪೈಪೋಟಿಗಳನ್ನು ಹಾಗೂ ಕ್ರಿಕೆಟ್ ದಿಗ್ಗಜರನ್ನು ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಸೇರಿಸುವುದಾಗಿದೆ. WCL ಅನ್ನು ಯುಎಇಗೆ ಕೊಂಡೊಯ್ಯುತ್ತಿರುವುದು ಈ ಆವೃತ್ತಿಯನ್ನು ವಿಶೇಷವಾಗಿಸಿದೆ. ನಮ್ಮ ಟೈಟಲ್ ಪ್ರಾಯೋಜಕರಾದ BNW ಡೆವಲಪರ್ಸ್‌ನ ಸಹಕಾರದಿಂದ ಟೂರ್ನಿಯನ್ನು ಮತ್ತಷ್ಟು ಯಶಸ್ವಿಗೊಳಿಸುವ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.

ಜಾಗತಿಕ ಅಭಿಮಾನಿ ಬಳಗ ಮತ್ತು ಅಂತಾರಾಷ್ಟ್ರೀಯ ಪ್ರಸಾರ ವ್ಯವಸ್ಥೆಯ ಮೂಲಕ WCL ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಅಕ್ಟೋಬರ್ 3ರಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯಲ್ಲಿ ದಿಗ್ಗಜ ಆಟಗಾರರ ಆಟ, ಸಾಂಪ್ರದಾಯಿಕ ಪೈಪೋಟಿ ಹಾಗೂ ರೋಚಕ ಪಂದ್ಯಗಳು ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ.