ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಭಾರತ ತಂಡಕ್ಕೆ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಸುನೀಲ್‌ ಗವಾಸ್ಕರ್‌!

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಹಮಾನ್‌ವುಲ್ಲಾ ಗುರ್ಬಾಝ್‌ ಅವರನ್ನು ಔಟ್‌ ಮಾಡಿದ್ದ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರು ಭಾರತ ತಂಡಕ್ಕೆ ಮೌಲ್ಯಯುತ ಆಟಗಾರ ಎಂದು ಬಣ್ಣಿಸಿದ್ದಾರೆ.

ಭಾರತ ತಂಡಕ್ಕೆ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಗವಾಸ್ಕರ್‌!

ನಿತೀಶ್‌ ಕುಮಾರ್‌ ರೆಡ್ಡಿಗೆ ಸುನೀಲ್‌ ಗವಾಸ್ಕರ್‌ ಮೆಚ್ಚುಗೆ. -

Profile
Ramesh Kote Jun 16, 2026 4:53 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ (IND vs AFG) ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಭಾರತ ತಂಡದ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ (NitishKumar Reddy) ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಮಳೆ ಬಾಧಿತ ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿತ್ತು. ಜೂನ್‌ 17 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯಕ್ಕೆ ಶುಭಮನ್‌ ಗಿಲ್‌ ಸಜ್ಜಾಗುತ್ತಿದೆ.

ಜೂನ್‌ 13 ರಂದು ಶನಿವಾರ ಧರ್ಮಶಾಲಾದಲ್ಲಿ ನಡೆದಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹಾಗಾಗಿ ಈ ಪಂದ್ಯವನ್ನು 25 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್‌ ಗೆದ್ದು ಎದುರಾಳಿ ಆಫ್ಘನ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ನಾಯಕ ಶುಭಮನ್‌ ಗಿಲ್‌ ಅವರ ನಿರ್ಧಾರ ಆರಂಭದಲ್ಲಿಯೇ ವರ್ಕ್‌ಔಟ್‌ ಆಗುವ ರೀತಿ ಕಂಡಿತ್ತು. ಆದರೆ, ಮಧ್ಯಮ ಓವರ್‌ಗಳಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ರಹಮಾನ್‌ವುಲ್ಲಾ ಗುರ್ಬಾಝ್‌ ಅವರು 47 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಈ ವೇಳೆ ಆಫ್ಘನ್‌ 200ಕ್ಕೂ ಅಧಿಕ ರನ್‌ ಗಳಿಸಬಹುದೆಂದು ಅಂದಾಜಿಸಲಾಗಿತ್ತು.

ಆದರೆ, 16ನೇ ಓವರ್‌ನಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಯಾರ್ಕರ್‌ ಹಾಕಿ ರಹಮಾನ್‌ವುಲ್ಲಾ ಗುರ್ಬಾಝ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಆ ಮೂಲಕ ಪಂದ್ಯವನ್ನು ಭಾರತದ ಪರ ತಿರುಗಿಸಿದ್ದರು. ಅವರು ಈ ಪಂದ್ಯದಲ್ಲಿ ಬೌಲ್‌ ಮಾಡಿದ ನಾಲ್ಕು ಓವರ್‌ಗಳಿಗೆ 31 ರನ್‌ ನೀಡಿದರೂ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ನಾಯಕ ಗಿಲ್‌ ಅವರು ಇಟ್ಟಿದ್ದ ನಂಬಿಕೆಯನ್ನು ನಿತೀಶ್‌ ರೆಡ್ಡಿ ಉಳಿಸಿಕೊಂಡರು. ಅಂತಿಮವಾಗಿ ಎದುರಾಳಿ ತಂಡ 194 ರನ್‌ಗಳಿಗೆ ಸೀಮಿತವಾಗಿತ್ತು. ಭಾರತೀಯ ಬೌಲರ್‌ಗಳು ಡೆತ್‌ ಓವರ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದ್ದರು.

ಲಖನೌದಲ್ಲೇ ಭಾರತಕ್ಕೆ ಸರಣಿ ಗೆಲ್ಲುವ ತವಕ; ನಾಳೆ ದ್ವಿತೀಯ ಏಕದಿನ

ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶುಭಮನ್‌ ಗಿಲ್‌ ಅದ್ಭುತ ಬ್ಯಾಟಿಂಗ್‌ ಬಲದಿಂದ 22.5 ಓವರ್‌ಗಳಲ್ಲಿ ಗೆದ್ದ ಬೀಗಿತ್ತು. ಈ ಪಂದ್ಯದ ಬಳಿಕ ಮಾತನಾಡಿದ್ದ ಸುನೀಲ್‌ ಗವಾಸ್ಕರ್‌, ವಿಶೇಷವಾಗಿ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ನಿತೀಶ್‌ ರೆಡ್ಡಿ ಅತ್ಯಂತ ಮೌಲ್ಯಯುತ ಆಟಗಾರ

ಜಿಯೊಸ್ಟಾರ್‌ ಜೊತೆ ಮಾತನಾಡಿದ ಅವರು, "ಪರಿಪೂರ್ಣ ಯಾರ್ಕರ್‌ ಹಾಕುವ ಮೂಲಕ ನಿತೀಶ್‌ ಕುಮಾರ್‌ ರೆಡ್ಡಿ ಅವರು ರಹಮಾನ್‌ವುಲ್ಲಾ ಗುರ್ಬಾಝ್‌ ಅವರ ದೊಡ್ಡ ವಿಕೆಟ್‌ ಅನ್ನು ಪಡೆದಿದ್ದಾರೆ. ನೀವು ಈ ರೀತಿ ಯಾರ್ಕರ್‌ ಬೌಲ್‌ ಮಾಡಿದರೆ, ನೀವು ತಂಡಕ್ಕೆ ಅತ್ಯಂತ ಮೌಲ್ಯಯುತ ಆಟಗಾರರಾಗುತ್ತೀರಿ," ಎಂದು ಹೇಳಿದ್ದಾರೆ.

"ಅವರು ಪ್ರತಿ ಬಾರಿಯೂ ಏನಾದರೂ ಫ್ಯಾನ್ಸಿಯಾಗಿ ಪ್ರಯತ್ನಿಸುತ್ತಾರೆ, ಇದರಿಂದ ರನ್‌ ಹೋಗುತ್ತಿತ್ತು. ಈ ವೇಳೆ ಅವರು ಯಾವಾಗಲೂ ಯಾರ್ಕರ್‌ಗೆ ಮರಳುತ್ತಾರೆ ಹಾಗೂ ಇದು ಕೆಲಸ ಮಾಡಿದೆ," ಎಂದು ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಗಾಯದ ಅಪ್ಡೇಟ್‌; ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಾರಾ?

ನಿತೀಶ್‌ ರೆಡ್ಡಿ ಯಾವುದೇ ಪಾತ್ರಕ್ಕೂ ಸಿದ್ದ

"ಹೀಗಾಗಿ, ಇದರ ಪ್ರಮುಖ ಅಂಶವೇನೆಂದರೆ ಭಾರತ ತಂಡಕ್ಕೆ ಈಗ ನಿತೀಶ್‌ ಕುಮಾರ್‌ ರೆಡ್ಡಿ ಅವರ ರೂಪದಲ್ಲಿ ಐದನೇ ಅಥವಾ ಆರನೇ ಬೌಲರ್‌ನ ಪಾತ್ರವನ್ನು ನಿಭಾಯಿಸಬಲ್ಲ ಆಟಗಾರ ಸಿಕ್ಕಿದ್ದಾರೆ. ಪಿಚ್‌ನ ಸ್ವರೂಪ ಮತ್ತು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅವರು ನಾಯಕ ಮತ್ತು ಆಯ್ಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತಾರೆ. 'ನನ್ನನ್ನು ಬ್ಯಾಟರ್ ಆಗಿ ಆಯ್ಕೆ ಮಾಡಿ, ಬೌಲರ್ ಆಗಿ ಆಯ್ಕೆ ಮಾಡಿ, ನಾನು ಯಾವುದೇ ಪಾತ್ರಕ್ಕೆ ಸಿದ್ಧನಿದ್ದೇನೆ' ಎಂಬ ಸಂದೇಶವನ್ನು ಅವರು ನೀಡುತ್ತಿದ್ದಾರೆ. ಇಂತಹ ಬಹುಮುಖ ಸಾಮರ್ಥ್ಯ ಹೊಂದಿರುವ ಆಟಗಾರ ಯಾವುದೇ ತಂಡಕ್ಕೂ ದೊಡ್ಡ ಆಸ್ತಿಯಾಗಿರುತ್ತಾನೆ," ಎಂದು ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

2026ರ ಐಪಿಎಲ್‌ ಟೂರ್ನಿಯಲ್ಲಿ ಮಿಂಚಿದ್ದ ಆಲ್‌ರೌಂಡರ್‌

ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಲ್‌ರೌಂಡರ್‌ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಅವರು 302 ರನ್‌ಗಳು ಹಾಗೂ 8 ವಿಕೆಟ್‌ಗಳನ್ನು ಕಬಳಿಸಿದ್ದರು.