ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇವದತ್ತ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ; ಸೋಲಿನ ಭೀತಿಯಿಂದ ಪಾರಾದ ಭಾರತ 'ಎ'

Devdutt Padikkal: ಮೊದಲ ಎರಡು ದಿನಗಳ ಬಹುಪಾಲು ಅವಧಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಹಿನ್ನಡೆಯಲ್ಲಿದ್ದ 'ಇಂಡಿಯಾ ಎ' ತಂಡವು, ಇವರ ಈ ಇನಿಂಗ್ಸ್‌ನ ನೆರವಿನಿಂದ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕೇವಲ 113 ರನ್‌ಗಳಿಗೆ ಆಲೌಟ್ ಆಗಿತ್ತು ಮತ್ತು ಎದುರಾಳಿ ತಂಡಕ್ಕೆ 317 ರನ್‌ಗಳನ್ನು ಬಿಟ್ಟುಕೊಟ್ಟಿತ್ತು.

ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್‌; ಸೋಲಿನ ಭೀತಿಯಿಂದ ಭಾರತ 'ಎ' ಪಾರು

Devdutt Padikkal -

Abhilash BC
Abhilash BC Oct 26, 2026 9:39 AM

ಲಿಂಕನ್‌, ಅ.26: ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯೆಂಡ್‌ 'ಎ' ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ದೇವದತ್ತ ಪಡಿಕ್ಕಲ್ ಅದ್ಭುತವಾದ ಬ್ಯಾಟಿಂಗ್‌ ನಡೆಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿ ಭಾರತ 'ಎ' ತಂಡವನ್ನು ಬಲವಾದ ಸ್ಥಿತಿಯಲ್ಲಿ ನಿಲ್ಲಿಸಿದರು. ಆದರೆ, ಅವರು 199 ರನ್‌ಗೆ ವಿಕೆಟ್‌ ಕಳೆದುಕೊಂಡು ಕೇವಲ ಒಂದು ರನ್‌ ಅಂತರದಿಂದ ದ್ವಿಶತಕ ವಂಚಿತರಾದರು.

ಎಡಗೈ ಬ್ಯಾಟರ್ ಪಡಿಕ್ಕಲ್, ಸಾಯಿ ಸುದರ್ಶನ್ ಅವರೊಂದಿಗೆ 215 ರನ್‌ಗಳ ಜೊತೆಯಾಟವನ್ನೂ ಹಾಗೂ ಯಶ್ ರಾಥೋಡ್ ಅವರೊಂದಿಗೆ 142 ರನ್‌ಗಳ ಜೊತೆಯಾಟವನ್ನೂ ನಿರ್ಮಿಸಿ, ಭಾರತ 'ಎ' ತಂಡವನ್ನು ಪ್ರಬಲ ಸ್ಥಿತಿಗೆ ತಲುಪಿಸಿದರು.

56 ರನ್‌ ಗಳಿಸಿದ್ದಲ್ಲಿಂದ ಸೋಮವಾರ ಬ್ಯಾಟಿಂಗ್‌ ಮುಂದುವರಿಸಿದ ಪಡಿಕ್ಕಲ್‌, ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರಿಸಿ 199 ರನ್‌ಗಳನ್ನು ತಲುಪಿದರು. ಟೀ ವಿರಾಮಕ್ಕೆ 10 ನಿಮಿಷಗಳಿರುವಾಗ, ವೇಗದ ಬೌಲರ್ ಝಾಕ್ ಗಿಬ್ಸನ್ ಅವರ ಎಸೆತವೊಂದನ್ನು ಲೆಗ್ ಸೈಡ್ ಕಡೆಗೆ ತಿರುಗಿಸಲು ಪ್ರಯತ್ನಿಸಿದಾಗ ಚೆಂಡು ಬ್ಯಾಟ್‌ನ ಅಂಚಿಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು.



ಚೆಂಡು ಬ್ಯಾಟ್‌ಗೆ ತಗುಲಿಲ್ಲ ಎಂದು ಪಡಿಕ್ಕಲ್, ಅಂಪೈರ್ ಜೊತೆ ವಾದಕ್ಕಿಳಿದರು. ಆದರೆ ಅಂತಿಮವಾಗಿ ಮೈದಾನದಿಂದ ನಿರ್ಗಮಿಸಿದರು. ತಮ್ಮ ಬ್ಯಾಟ್ ಮತ್ತು ಚೆಂಡಿನ ನಡುವೆ ಸಾಕಷ್ಟು ಅಂತರವಿತ್ತು ಎಂಬುದನ್ನು ಅವರು ಸನ್ನೆ ಮೂಲಕ ಸೂಚಿಸಿದರು. 248 ಎಸೆತಗಳಲ್ಲಿ 80.24 ಸ್ಟ್ರೈಕ್ ರೇಟ್‌ನೊಂದಿಗೆ 199 ರನ್‌ಗಳನ್ನು ಗಳಿಸಿದರು. ಇದರಲ್ಲಿ 24 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು.

ಮೊದಲ ಎರಡು ದಿನಗಳ ಬಹುಪಾಲು ಅವಧಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಹಿನ್ನಡೆಯಲ್ಲಿದ್ದ 'ಇಂಡಿಯಾ ಎ' ತಂಡವು, ಇವರ ಈ ಇನಿಂಗ್ಸ್‌ನ ನೆರವಿನಿಂದ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕೇವಲ 113 ರನ್‌ಗಳಿಗೆ ಆಲೌಟ್ ಆಗಿತ್ತು ಮತ್ತು ಎದುರಾಳಿ ತಂಡಕ್ಕೆ 317 ರನ್‌ಗಳನ್ನು ಬಿಟ್ಟುಕೊಟ್ಟಿತ್ತು.

ಅಜೇಯ ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಶಾದಾಬ್ ಖಾನ್

ಸಾಯಿ ಸುದರ್ಶನ್, ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿಯು ಜೊತೆಯಾಟದಲ್ಲಿ 215 ರನ್‌ಗಳನ್ನು ಕಲೆಹಾಕಿತು. ಸಾಯಿ ಸುದರ್ಶನ್ 91 ರನ್‌ ಗಳಿಸಿದರು. ಮತೋರ್ವ ಬ್ಯಾಟರ್‌ ಯಶ್ ರಾಥೋಡ್(66) ಅರ್ಧಶತಕ ಬಾರಿಸಿದರು. ಸದ್ಯ ಭಾರತ ಉತ್ತಮ ಮುನ್ನಡೆ ಕಾಯ್ದುಕೊಂಡು ಸೋಲಿನ ಭೀತಿಯಿಂದ ಪಾರಾಗಿದೆ.