ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಂಕಾ ಎದುರಿನ ಅಭ್ಯಾಸ ಪಂದ್ಯ; ಶತಕ ಬಾರಿಸಿ ಮಿಂಚಿದ ದೇವದತ್ತ ಪಡಿಕ್ಕಲ್‌

Devdutt Padikkal: ಪಡಿಕ್ಕಲ್‌ ಚುರುಕಿನ ಬ್ಯಾಟಿಂಗ್‌ ಮಾಡುತ್ತಿದ್ದರೆ ಮತ್ತೊಂದು ತುದಿಯಲ್ಲಿ ರಾಹುಲ್‌ ನೈಜ ಟೆಸ್ಟ್‌ ಶೈಲಿಯಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದರು. ಆದರೆ 40 ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು. ರಾಹುಲ್‌ ಮತ್ತು ಪಡ್ಡಿಕ್ಕಲ್‌ ಎರಡನೇ ವಿಕೆಟ್‌ಗೆ 96ರನ್‌ ಗಳಿಸಿದರು. ಪಡಿಕ್ಕಲ್‌ ಶತಕ ಬಾರಿಸಿದ ಬಳಿಕ ರಿಟರ್ಡ್‌ ಹರ್ಟ್‌ ಆದರು. 121 ಎಸೆತ ಎದುರಿಸಿದ ಅವರು 14 ಬೌಂಡರಿಯೊಂದಿಗೆ 103 ರನ್‌ ಗಳಿಸಿದರು.

ಲಂಕಾ ಎದುರಿನ ಅಭ್ಯಾಸ ಪಂದ್ಯ; ಶತಕ ಬಾರಿಸಿದ ಪಡಿಕ್ಕಲ್‌

Devdutt Padikkal -

Abhilash BC
Abhilash BC Aug 8, 2026 3:58 PM

ಕೊಲಂಬೊ, ಆ. 8: ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ XI ನಡುವಿನ ನಡೆಯುತ್ತಿರುವ ಅಭ್ಯಾಸ ಪಂದ್ಯದ 2ನೇ ದಿನದಂದು ಕನ್ನಡಿಗ ದೇವದತ್ತ ಪಡಿಕ್ಕಲ್‌ ಶತಕ ಬಾರಿಸಿ ಮಿಂಚಿದ್ದಾರೆ. ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 363 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಗುರಿ ಬೆನ್ನಟ್ಟಲು ಆರಂಭಿಸಿದ ಭಾರತ ಮೊದಲ ಓವರ್‌ನಲ್ಲಿಯೇ ಆಘಾತ ಎದುರಿಸಿತು. ಆರಂಭಕಾರ ಯಶಸ್ವಿ ಜೈಸ್ವಾಲ್‌ ಎರಡು ಎಸೆತ ಎದುರಿಸಿ ಖಾತೆ ತೆರೆಯಲು ವಿಫಲರಾದರು.

ಎರಡನೇ ವಿಕೆಟ್‌ಗೆ ಉಸ್ತುವಾರಿ ನಾಯಕ ಕೆ.ಎಲ್‌ ರಾಹುಲ್‌ ಜತೆಗೂಡಿದ ಪಡಿಕ್ಕಲ್‌ ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿ ಶತಕ ಬಾರಿಸುವಲ್ಲಿ ಯಶಸ್ವಿಯಾದರು. ಪಂದ್ಯಕ್ಕೆ ಮಳೆಯ ಅಡಚಣೆಯೂ ಉಂಟಾದ ಕಾರಣ ಚಹಾ ವಿರಾಮವನ್ನು ಬೇಗನೆ ಘೋಷಿಸಲಾಯಿತು.

ಪಡಿಕ್ಕಲ್‌ ಚುರುಕಿನ ಬ್ಯಾಟಿಂಗ್‌ ಮಾಡುತ್ತಿದ್ದರೆ ಮತ್ತೊಂದು ತುದಿಯಲ್ಲಿ ರಾಹುಲ್‌ ನೈಜ ಟೆಸ್ಟ್‌ ಶೈಲಿಯಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದರು. ಆದರೆ 40 ರನ್‌ ಗಳಿಸಿದ ವೇಳೆ ವಿಕೆಟ್‌ ಕಳೆದುಕೊಂಡರು. ರಾಹುಲ್‌ ಮತ್ತು ಪಡ್ಡಿಕ್ಕಲ್‌ ಎರಡನೇ ವಿಕೆಟ್‌ಗೆ 96ರನ್‌ ಗಳಿಸಿದರು. ಪಡಿಕ್ಕಲ್‌ ಶತಕ ಬಾರಿಸಿದ ಬಳಿಕ ರಿಟರ್ಡ್‌ ಹರ್ಟ್‌ ಆದರು. 121 ಎಸೆತ ಎದುರಿಸಿದ ಅವರು 14 ಬೌಂಡರಿಯೊಂದಿಗೆ 103 ರನ್‌ ಗಳಿಸಿದರು.

SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಭಾರತದ ಸ್ಟಾರ್ ಎಡಗೈ ಬ್ಯಾಟ್ಸ್‌ಮನ್ ಬಿ. ಸಾಯಿ ಸುಧರ್ಸನ್ ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ವರದಿಗಳ ಪ್ರಕಾರ, ಕಾಲ್ಬೆರಳಿನ ಗಾಯದಿಂದಾಗಿ ಸುಧರ್ಸನ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಅಲಭ್ಯತೆ ಮಧ್ಯೆ ಪಡಿಕ್ಕಲ್‌ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ ಕಾರಣ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ.

ತಮಿಳುನಾಡಿನ ಎಡಗೈ ಬ್ಯಾಟ್ಸ್‌ಮನ್ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ ಭಾರತ ಪರ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ಖಚಿತವಾಗಿತ್ತು, ಆದರೆ ಅವರು ಪೂರ್ಣ ಫಿಟ್ನೆಸ್ ಪಡೆಯಲು ವಿಫಲರಾಗಿದ್ದಾರೆ. ಇದೀಗ ಮೂರನೇ ಸ್ಥಾನದಲ್ಲಿ ಪಡಿಕ್ಕಲ್‌ ಆಡುವ ಸಾಧ್ಯತೆ ಅಧಿಕವಾಗಿದೆ.

2026 ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ 700 ಕ್ಕೂ ಹೆಚ್ಚು ರನ್ ಗಳಿಸಿದ್ದ ಮತ್ತು ಜೂನ್‌ನಲ್ಲಿ ನಡೆದ ಏಕೈಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 81 ರನ್ ಗಳಿಸಿದ್ದ 24 ವರ್ಷದ ಬ್ಯಾಟ್ಸ್‌ಮನ್ ಅವರನ್ನು ಜುಲೈ 28 ರಂದು ಭಾರತದ 15 ಸದಸ್ಯರ ತಂಡದಲ್ಲಿ ಸೇರಿಸಲಾಯಿತು ಆದರೆ ಅವರ ಭಾಗವಹಿಸುವಿಕೆಯು ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿತ್ತು.