ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿರುವ ಪಿಚ್ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮನಾದ ಸ್ಪರ್ಧೆಯನ್ನು ಒದಗಿಸುತ್ತದೆ. ಮೇಲ್ಮೈಯಿಂದ ಬೌನ್ಸ್ ಮತ್ತು ಕ್ಯಾರಿ ಸ್ಥಿರವಾಗಿರುತ್ತದೆ, ಇದು ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಸಣ್ಣ ನೇರ ಬೌಂಡರಿಗಳು ದೊಡ್ಡ ಸ್ಕೋರಿಂಗ್‌ಗೆ ಅವಕಾಶ ನೀಡುತ್ತವೆ.

ಭಾರತ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌

-

Abhilash BC
Abhilash BC Jul 14, 2026 3:11 PM

ಬರ್ಮಿಂಗ್‌ಹ್ಯಾಮ್‌, ಜು.14: ಪ್ರವಾಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ಇಂಗ್ಲೆಂಡ್‌ ತಂಡ ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರ ಕೈಗೊಂಡಿದೆ. ಪಂದ್ಯಕ್ಕೂ ಮುನ್ನ ದಿನವೇ ಇಂಗ್ಲೆಂಡ್‌ ತನ್ನ ಆಡುವ ಬಳಗ ಪ್ರಟಿಸಿದ್ದ ಕಾರಣ ಭಾರತದ ಪ್ಲೇಯಿಂಗ್‌ ಇಲೆವೆನ್‌ ಬಗ್ಗೆ ಮಾತ್ರ ಕುತೂಹಲವಿತ್ತು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಮತ್ತು ರಾಹುಲ್‌ ಮತ್ತೆ ತಂಡಕ್ಕೆ ಮರಳಿದರು.

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿರುವ ಪಿಚ್ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮನಾದ ಸ್ಪರ್ಧೆಯನ್ನು ಒದಗಿಸುತ್ತದೆ. ಮೇಲ್ಮೈಯಿಂದ ಬೌನ್ಸ್ ಮತ್ತು ಕ್ಯಾರಿ ಸ್ಥಿರವಾಗಿರುತ್ತದೆ, ಇದು ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಸಣ್ಣ ನೇರ ಬೌಂಡರಿಗಳು ದೊಡ್ಡ ಸ್ಕೋರಿಂಗ್‌ಗೆ ಅವಕಾಶ ನೀಡುತ್ತವೆ.

ಕೊಹ್ಲಿ ಮತ್ತು ರೋಹಿತ್ ಜೊತೆಗೆ ದೇಶದ ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ನಾಯಕ ಶುಭಮನ್ ಗಿಲ್, ವಿಕೆಟ್‌ ಕೀಪರ್–ಬ್ಯಾಟರ್ ಕೆ.ಎಲ್‌.ರಾಹುಲ್ ಅವರೂ ಭಾರತ ತಂಡಕ್ಕೆ ಮರಳುತ್ತಿದ್ದಾರೆ. ಇದು ಸಹಜವಾಗಿಯೇ ತಂಡವನ್ನು ಬಲಿಷ್ಠಗೊಳಿಸಿದೆ. ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿ ವಿದಾಯ ಹೇಳಲು ಬಯಸಿರುವ ಈ ದಿಗ್ಗಜ ಆಟಗಾರರ ಪಾಲಿಗೆ ಪ್ರತಿಯೊಂದು ಸರಣಿಯೂ ಸತ್ವಪರೀಕ್ಷೆ.

ಭಾರತ ಆಡುವ ಬಳಗ

ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.

ಆಫ್ಘಾನ್ ನಿರಾಶ್ರಿತರ ಮಹಿಳಾ ಕ್ರಿಕೆಟ್‌ ತಂಡಕ್ಕೆ ಐಸಿಸಿಯಿಂದ ಶುಭ ಸುದ್ದಿ

ಇಂಗ್ಲೆಂಡ್‌ ಆಡುವ ಬಳಗ

ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಮತ್ತು ಆದಿಲ್ ರಶೀದ್.