IPL 2026: ಎಐ ನಿರ್ಮಿತ ನಕಲಿ ಐಪಿಎಲ್ ಟಿಕೆಟ್ ಮಾರಾಟ; ನಾಲ್ವರ ಬಂಧನ
Fake AI-Made IPL Tickets: ಪಿಟಿಐ ವರದಿ ಪ್ರಕಾರ, ಈ ಗ್ಯಾಂಗ್ ನಕಲಿ ಐಪಿಎಲ್ ಪಂದ್ಯದ ಟಿಕೆಟ್‌ಗಳನ್ನು ಸೃಷ್ಟಿಸಲು ಮತ್ತು ಸ್ಥಳದ ಗೇಟ್‌ಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಮಾರಾಟ ಮಾಡಲು ಚಾಟ್‌ಜಿಪಿಟಿ ಮತ್ತು ಗ್ರಾಫಿಕ್ ವಿನ್ಯಾಸ ಸಾಫ್ಟ್‌ವೇರ್ ಅನ್ನು ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.
Fake AI-Made IPL Tickets -
ಲಖನೌ, ಮೇ 9: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026ರ ಪಂದ್ಯದ ಟಿಕೆಟ್‌ಗಳನ್ನು ನಕಲಿ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದ ಅಂತರರಾಜ್ಯ ಗ್ಯಾಂಗ್ ಅನ್ನು ಲಖನೌ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(RCB vs LSG) ವಿರುದ್ಧದ ಲಖನೌ ಪಂದ್ಯದ ಸಮಯದಲ್ಲಿ, ಏಕಾನಾ ಕ್ರೀಡಾಂಗಣದ ಹೊರಗೆ ನಕಲಿ(Fake AI-Made IPL Tickets) ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ನಾಲ್ವರನ್ನು ಬಂಧಿಸಲಾಗಿದೆ.
ಪಿಟಿಐ ವರದಿ ಪ್ರಕಾರ, ಈ ಗ್ಯಾಂಗ್ ನಕಲಿ ಐಪಿಎಲ್ ಪಂದ್ಯದ ಟಿಕೆಟ್‌ಗಳನ್ನು ಸೃಷ್ಟಿಸಲು ಮತ್ತು ಸ್ಥಳದ ಗೇಟ್‌ಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಮಾರಾಟ ಮಾಡಲು ಚಾಟ್‌ಜಿಪಿಟಿ ಮತ್ತು ಗ್ರಾಫಿಕ್ ವಿನ್ಯಾಸ ಸಾಫ್ಟ್‌ವೇರ್ ಅನ್ನು ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.
"ಆರ್‌ಸಿಬಿ ಮತ್ತು ಲಖನೌ ಪಂದ್ಯದ ವೇಳೆ ಏಕಾನಾ ಕ್ರೀಡಾಂಗಣದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ನಕಲಿ ಐಪಿಎಲ್ ಟಿಕೆಟ್ ಪತ್ತೆಯಾಗಿದೆ" ಎಂದು ಡಿಸಿಪಿ (ಲಕ್ನೋ ದಕ್ಷಿಣ) ಅಮಿತ್ ಕುಮಾರ್ ಆನಂದ್ ಪಿಟಿಐಗೆ ತಿಳಿಸಿದರು.
"ವಿಚಾರಣೆಯ ಸಮಯದಲ್ಲಿ, ಕ್ರೀಡಾಂಗಣದ ಹೊರಗೆ ಯಾರೋ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ನಂತರ, ಸೈಬರ್ ಸೆಲ್ ಲಕ್ನೋ ಮತ್ತು ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಅವರೆಲ್ಲರೂ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ನಿವಾಸಿಗಳು" ಎಂದು ಡಿಸಿಪಿ ಆನಂದ್ ಹೇಳಿದ್ದಾರೆ.
VIDEO | An interstate gang that allegedly used ChatGPT and graphic design software to create fake Indian Premier League (IPL) tickets and sell them to cricket fans outside Lucknow's Ekana Stadium has been busted with the arrest of four persons.
— Press Trust of India (@PTI_News) May 8, 2026
DCP (Lucknow South) Amit Kumar… pic.twitter.com/9dDhIgrOmZ
ಪತ್ಯೇಕ ಪ್ರಕರಣವೊಂದರಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬುಕ್ಕಿಯನ್ನು ಕ್ಯಾಂಪ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸರಿಂದ ಶಾಸ್ತ್ರಿ ನಗರದ ನಿವಾಸಿ ಸಾಹೀಲ್ ಪಾಟೀಲ್ (23) ಎಂಬಾತನನ್ನು ಬಂಧಿಸಲಾಗಿದೆ. ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಡಲ್ಸ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.
ಶ್ರೇಯಸ್ ಅಯ್ಯರ್ ಅಲ್ಲ!; ಸೂರ್ಯಕುಮಾರ್ ಬದಲಿಗೆ ಭಾರತದ ಟಿ20 ನಾಯಕನಾಗಿ ಸಂಜು ಸ್ಯಾಮ್ಸನ್ ಆಯ್ಕೆ ಸಾಧ್ಯತೆ
ಮೊಬೈಲ್‌ನಲ್ಲೇ ಪ್ರತಿ ಕ್ಷಣದ ಆಟ ಮೇಲೆ ಬೆಟ್ಟಿಂಗ್ ಪಡೆಯುತ್ತಿದ್ದ ಆರೋಪಿಯಿಂದ ಮೊಬೈಲ್, 12,900 ಹಣ ಜಪ್ತಿ ಮಾಡಲಾಗಿದ್ದು, ಮತ್ತೊಬ್ಬ ಆರೋಪಿ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ; 8 ಕೋಟಿಗೂ ಹೆಚ್ಚಿನ ಡಿಜಿಟಲ್ ವಹಿವಾಟು ಪತ್ತೆ
ಮುಂಬೈನಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರ ಮೊಬೈಲ್ ಫೋನ್‌ಗಳಲ್ಲಿ 8 ಕೋಟಿ ರೂ.ಗೂ ಹೆಚ್ಚಿನ ಡಿಜಿಟಲ್ ವಹಿವಾಟು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಆವರಣದಿಂದಲೇ ಬೆಟ್ಟಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು, ಐಪಿಎಲ್ ಪಂದ್ಯಗಳ ವಿವಿಧ ಅಂಶಗಳ ಮೇಲೆ ಪಣತೊಡುತ್ತಿದ್ದರು, ಅದರಲ್ಲಿ ವಿಕೆಟ್‌ಗಳು, ರನ್‌ಗಳು ಮತ್ತು ಓವರ್‌ಗಳು ಸೇರಿವೆ. ಅವರಿಂದ ವಶಪಡಿಸಿಕೊಂಡ ನಾಲ್ಕು ಮೊಬೈಲ್ ಫೋನ್‌ಗಳು 8.05 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಡಿಜಿಟಲ್ ನಾಣ್ಯಗಳನ್ನು ಒಳಗೊಂಡ ವಹಿವಾಟುಗಳನ್ನು ಬಹಿರಂಗಪಡಿಸಿದವು. ಪೊಲೀಸರು 5,000 ರೂ.ಗಳಿಗೂ ಹೆಚ್ಚು ನಗದನ್ನು ವಶಪಡಿಸಿಕೊಂಡರು.