ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಲಾ ಐದು ವಿಕೆಟ್‌; ಅರ್ಧ ಚೆಂಡು ಹಂಚಿಕೊಂಡ ಇಂಗ್ಲೆಂಡ್‌ ವೇಗಿಗಳು

ಪಾಕಿಸ್ತಾನವು ತಮ್ಮ ಕೊನೆಯ ಎಂಟು ವಿಕೆಟ್‌ಗಳನ್ನು 74 ರನ್‌ಗಳಿಗೆ ಕಳೆದುಕೊಂಡಿತು ಮತ್ತು 49 ಓವರ್‌ಗಳಲ್ಲಿ ಆಲೌಟ್ ಆಯಿತು. ರಾಬಿನ್ಸನ್ ಮತ್ತು ಟಂಗ್ 20 ವರ್ಷಗಳಲ್ಲಿ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ತಲಾ ಐದು ವಿಕೆಟ್‌ಗಳನ್ನು ಪಡೆದ ಎರಡನೇ ಇಂಗ್ಲೆಂಡ್ ಜೋಡಿಯಾದರು.

ತಲಾ ಐದು ವಿಕೆಟ್‌; ಅರ್ಧ ಚೆಂಡು ಹಂಚಿಕೊಂಡ ಇಂಗ್ಲೆಂಡ್‌ ವೇಗಿಗಳು

Ollie Robinson and Josh Tongue -

Abhilash BC
Abhilash BC Aug 20, 2026 11:40 AM

ಲಾರ್ಡ್ಸ್‌, ಆ.20: ಹೆಡಿಂಗ್ಲಿಯಲ್ಲಿ ಓಲಿ ರಾಬಿನ್ಸನ್ ಮತ್ತು ಜೋಶ್ ಟಂಗ್ ಬಹಳ ಹಳೆಯ ಕ್ರಿಕೆಟ್ ಸಂಪ್ರದಾಯಕ್ಕೆ ಅಸಾಮಾನ್ಯ ಪರಿಹಾರವನ್ನು ಕಂಡುಕೊಂಡರು. ಇಂಗ್ಲೆಂಡ್‌ನ ಇಬ್ಬರೂ ವೇಗಿಗಳು ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳನ್ನು ಪಡೆದ ನಂತರ ಪಂದ್ಯದ ಚೆಂಡನ್ನು ಅರ್ಧದಷ್ಟು ವಿಭಜಿಸಲು ನಿರ್ಧರಿಸಿದರು.

ಟೆಸ್ಟ್‌ ಕ್ರಿಕೆಟ್‌ ಸಂಪ್ರದಾಯದ ಪ್ರಕಾರ ಪಂದ್ಯದಲ್ಲಿ ಅಥವಾ ಇನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಕಿತ್ತರೆ ಆ ಚೆಂಡನ್ನು ಬೌಲರ್‌ಗೆ ನೀಡಲಾಗುತ್ತದೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಬಿನ್ಸನ್( 5/51) ಮತ್ತು ಟಂಗ್ (5/46) ತಲಾ ಐದು ವಿಕೆಟ್ ಪಡೆದರು. ಹೀಗಾಗಿ ಚೆಂಡನ್ನು ಯಾರಿಗೆ ನೀಡುವುದೆಂದು ಗೊಂದಲ ಉಂಟಾಯಿತು. ಈ ವೇಳೆ ರಾಬಿನ್ಸನ್ ಚೆಂಡನ್ನು ಅರ್ಧಕ್ಕೆ ಕತ್ತರಿಸಿ ಹಂಚಿಕೊಳ್ಳುವ ಪ್ರಸ್ತಾವ ಮುಂದಿಟ್ಟರು. ಇದಕ್ಕೆ ಜೋಶ್ ಟಂಗ್ ಕೂಡ ಸಮ್ಮತಿ ಸೂಚಿಸಿದರು.

ಇಂಗ್ಲೆಂಡ್ ತಂಡದ ಮ್ಯಾನೇಜರ್ ವೇಯ್ನ್ ಬೆಂಟ್ಲಿ ಚೆಂಡನ್ನು ಹೆಡಿಂಗ್ಲಿ ಮೈದಾನದ ಸಿಬ್ಬಂದಿ ಕೈಗೆ ನೀಡಿ ವಿಶೇಷ ಕಟಿಂಗ್ ಉಪಕರಣ ಬಳಸಿ, ಚೆಂಡಿನ ಸೀಮ್ ಮೂಲಕವೇ ನಿಖರವಾಗಿ ಅರ್ಧಕ್ಕೆ ಕತ್ತರಿಸಿ ಇಬ್ಬರು ಬೌಲರ್‌ಗಳ ಕೈಗಿಟ್ಟರು. ಅರ್ಧ ಚೆಂಡಿನ ಫೋಟೋಗಳು ವೈರಲ್ ಆಗಿದೆ.

93 ವರ್ಷಗಳ ಹಳೆಯ ಬೌಲಿಂಗ್ ದಾಖಲೆ ಸರಿಗಟ್ಟಿದ ಮಾನವ್ ಸುತಾರ್

ಪಾಕಿಸ್ತಾನವು ತಮ್ಮ ಕೊನೆಯ ಎಂಟು ವಿಕೆಟ್‌ಗಳನ್ನು 74 ರನ್‌ಗಳಿಗೆ ಕಳೆದುಕೊಂಡಿತು ಮತ್ತು 49 ಓವರ್‌ಗಳಲ್ಲಿ ಆಲೌಟ್ ಆಯಿತು. ರಾಬಿನ್ಸನ್ ಮತ್ತು ಟಂಗ್ 20 ವರ್ಷಗಳಲ್ಲಿ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ತಲಾ ಐದು ವಿಕೆಟ್‌ಗಳನ್ನು ಪಡೆದ ಎರಡನೇ ಇಂಗ್ಲೆಂಡ್ ಜೋಡಿಯಾದರು.



2006 ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ಪಾಕಿಸ್ತಾನ ವಿರುದ್ಧ ಸ್ಟೀವ್ ಹಾರ್ಮಿಸನ್ ಮತ್ತು ಮಾಂಟಿ ಪನೇಸರ್ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ಇಂಗ್ಲೆಂಡ್ ಬೌಲರ್‌ಗಳ ಜೋಡಿ ಎನಿಸಿಕೊಂಡಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ರಾಬಿನ್ಸನ್ ಅವರ ಐದನೇ ಐದು ವಿಕೆಟ್ ಗೊಂಚಲು ಇದಾಗಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲೆಂಡ್ ತಂಡದಿಂದ ದೂರವಿದ್ದ ನಂತರ ಉತ್ತಮ ಕಮ್‌ಬ್ಯಾಕ್‌ ಮಾಡಿದರು.