ಮೊರಾಕ್ಕೊ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್
FIFA World Cup 2026: ದ್ವಿತೀಯಾರ್ಧದಲ್ಲಿ ಕೈಲಿಯನ್ ಎಂಬಾಪೆ 60ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಗೋಲಿನ ಖಾತೆ ತೆರೆದರು. ಮೊದಲಾರ್ಧದಲ್ಲಿ ಅವರು ಪೆನಾಲ್ಟಿ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿದ್ದರು. ಎಂಬಾಪೆ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಲಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು.
France enters semifinals -
ಬಾಸ್ಟನ್, ಜು.10: ಕೀಲಿಯನ್ ಎಂಬಾಪೆ ಮತ್ತು ಒಸ್ಮಾನ್ ಡೆಂಬೆಲೆ ಬಾರಿಸಿದ ತಲಾ ಒಂದು ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಈ ಬಾರಿ ಫಿಫಾ ಫುಟ್ಬಾಲ್(FIFA World Cup 2026) ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ತಂಡಕ್ಕೆ ಮೊರಾಕ್ಕೊ ವಿರುದ್ಧ 2-0 ಗೋಲಿನಿಂದ ಭರ್ಜರಿ ಗೆಲುವು ಲಭಿಸಿತು.
ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು ಮಣಿಸಿದ ಫ್ರಾನ್ಸ್ ಸತತ ಮೂರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತು. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳ ಆಟಗಾರರು ಗೋಲು ಬಾರಿಸಲು ಯತ್ನಿಸಿದರೂ ಬಲಿಷ್ಠ ರಕ್ಷಣ ವಿಭಾಗದ ಮುಂದೆ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಗೋಲು ರಹಿತವಾಗಿ ಕೊನೆಗೊಂಡಿತು.
ದ್ವಿತೀಯಾರ್ಧದಲ್ಲಿ ಕೈಲಿಯನ್ ಎಂಬಾಪೆ 60ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಗೋಲಿನ ಖಾತೆ ತೆರೆದರು. ಮೊದಲಾರ್ಧದಲ್ಲಿ ಅವರು ಪೆನಾಲ್ಟಿ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿದ್ದರು. ಎಂಬಾಪೆ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಲಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು.
A third straight Semi-final secured for France. 🇫🇷#FIFAWorldCup
— FIFA World Cup (@FIFAWorldCup) July 9, 2026
66ನೇ ನಿಮಿಷದಲ್ಲಿ ಎಂಬಾಪೆ ನೀಡಿದ ಅಸಿಸ್ಟ್ ಅನ್ನು ಒಸ್ಮಾನ್ ಡೆಂಬೆಲೆ ಸುಂದರ ಗೋಲಾಗಿ ಪರಿವರ್ತಿಸಿದ್ದರಿಂದ ಫ್ರಾನ್ಸ್ ತನ್ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು. ಹಾಲಿ ಆವೃತ್ತಿಯಲ್ಲಿ ಡೆಂಬೆಲೆ ಬಾರಿಸಿದ ಐದನೇ ಗೋಲು ಇದಾಯಿತು. ಮೊರಾಕ್ಕೊ ಆಟಗಾರರು ಹೋರಾಟ ನಡೆಸಿದರೂ, ಫ್ರಾನ್ಸ್‌ನ ಅನುಭವಿ ಆಟಗಾರರ ಮುಂದೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಶ್ರೇಯಸ್ ಏಕಾಂಗಿ ಹೋರಾಟ ವ್ಯರ್ಥ, ಇಂಗ್ಲೆಂಡ್ ಎದುರು ಟಿ20ಐ ಸರಣಿ ಕಳೆದುಕೊಂಡ ಭಾರತ!
2022ರ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದಲೂ ಫ್ರಾನ್ಸ್ ಗೆಲುವು ಸಾಧಿಸಿತ್ತು. ಈ ಬಾರಿಯೂ ಫ್ರಾನ್ಸ್ ಮತ್ತೊಮ್ಮೆ ಮೇಲುಗೈ ಸಾಧಿಸಿತು. ಪಂದ್ಯ ಸೋತರೂ ಸತತ ಎರಡನೇ ಸಲ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಫ್ರಿಕಾದ ತಂಡ ಎಂಬ ಹೆಗ್ಗಳಿಕೆಗೆ ಮೊರೊಕ್ಕೊ ಪಾತ್ರವಾಯಿತು. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವು ಸ್ಪೇನ್ ಹಾಗೂ ಬೆಲ್ಜಿಯಂ ನಡುವಣ ವಿಜೇತ ತಂಡವನ್ನು ಎದುರಿಸಲಿದೆ. ಇತ್ತಂಡಗಳ ಪಂದ್ಯ ಶುಕ್ರವಾರ ತಡರಾತ್ರಿ ನಡೆಯಲಿದೆ.