ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಾಯ; ಅಭ್ಯಾಸ ಪಂದ್ಯದ ಮೊದಲ ದಿನ ಹೊರಗುಳಿದ ಶುಭಮನ್‌ ಗಿಲ್

Sri Lanka XI vs India: ಭಾರತ ತಂಡ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಮೊದಲ ಪಂದ್ಯ ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯಲಿದೆ.

ಅಭ್ಯಾಸ ಪಂದ್ಯದ ಮೊದಲ ದಿನ ಹೊರಗುಳಿದ ಶುಭಮನ್‌ ಗಿಲ್

Sri Lanka XI vs India -

Abhilash BC
Abhilash BC Aug 7, 2026 10:37 AM

ಕೊಲಂಬೊ, ಆ. 7: ಗುರುವಾರ ಅಭ್ಯಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಶುಕ್ರವಾರ ಆರಂಭಗೊಂಡ ಶ್ರೀಲಂಕಾ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನದ ಆಟದಿಂದ ಹೊರಗುಳಿದಿದ್ದಾರೆ. ಗಿಲ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

"ಅಭ್ಯಾಸದ ಸಮಯದಲ್ಲಿ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಗಾಯವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ದಿನದಿಂದ ಹೊರಗುಳಿಯಲಿದ್ದಾರೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ವೀಕ್ಷಣೆಯಲ್ಲಿರುತ್ತಾರೆ" ಎಂದು ಬಿಸಿಸಿಐ ತಿಳಿಸಿದೆ.

ಭಾರತ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ XI ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರ ಮಾಡಿತು. ಅಭ್ಯಾಸ ಪಂದ್ಯವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರಕ್ಕೆ ಲಭ್ಯವಿರುತ್ತದೆ. ಭಾರತದಲ್ಲಿ ನೇರ ಪ್ರಸಾರವನ್ನು SonyLIV ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ನೋಡಬಹುದು.



ಭಾರತ ತಂಡ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಮೊದಲ ಪಂದ್ಯ ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯಲಿದೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಸಾಯಿ ಸುದರ್ಶನ್‌ ಅನುಮಾನ

ತಂಡಗಳು

ಭಾರತ ತಂಡ: ಕೆಎಲ್ ರಾಹುಲ್(ನಾಯಕ) ,ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಸರನ್ಶ್ ಜೈನ್, ಔಕಿಬ್ ನಬಿ, ಮಾನವ್ ಸುತಾರ್, ಗುರ್ನೂರ್ ಬ್ರಾರ್.

ಶ್ರೀಲಂಕಾ XI ತಂಡ: ಸೋನಾಲ್ ದಿನುಶಾ(ನಾಯಕ), ನಿಶಾನ್ ಮದುಷ್ಕ(ವಿ.ಕೀ.), ನಿಪುನ್ ಧನಂಜಯ, ರವಿಂದು ರಸಂತ, ಪವನ್ ರಥನಾಯಕೆ, ಅಹಾನ್ ವಿಕ್ರಮಸಿಂಘೆ, ರಮೇಶ್ ಮೆಂಡಿಸ್, ದಿಲುಮ್ ಸುದೀರ, ವಿಶ್ವ ಫೆರ್ನಾಂಡೋ, ಲಹಿರು ಕುಮಾರ, ಪಸಿಂದು ಸೂರಿಯಬಂಡಾರ, ಇಸಿತಾ ವಿಜೆಸುಂದರ, ಅಸಂಕ ಮನೋಜ್, ಅಂಜಲ ಬಂಡಾರ, ಕೇಶರ ನುವಂತ.