Harmanpreet Kaur: ವಿಶ್ವಕಪ್ ಗೆಲುವಿನ ನಂತರ ಕೋಚ್ ಮುಜುಂದಾರ್ ಕಾಲಿಗೆ ಬಿದ್ದ ಕೌರ್
ಮಹಿಳಾ ಏಕದಿನ ವಿಶ್ವಕಪ್‌ಗಳ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುರಿದು ಹಾಕಿದ್ದಾರೆ. ಈಗ ಮಹಿಳಾ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಕೌರ್ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.
ಹರ್ಮನ್‌ಪ್ರೀತ್ ಕೌರ್ -
Abhilash BC
Nov 3, 2025 12:41 PM
ನವೀ ಮುಂಬೈ: ಇಲ್ಲಿನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಇತಿಹಾಸ ನಿರ್ಮಿಸಿತು. ಪಂದ್ಯ ಮುಗಿದಾಕ್ಷಣ ಭಾರತದ ಆಟಗಾರ್ತಿಯರು ಮೈದಾನದಲ್ಲಿ ಅಳುತ್ತ, ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಅದೇ ಹೊತ್ತಿಗೆ ಡಗ್‌ಔಟ್‌ನಲ್ಲಿದ್ದ ಕೋಚ್ ಅಮೋಲ್ ಮುಜುಂದಾರ್(Amol Muzumdar) ಓಡಿ ಬಂದು ಎಲ್ಲ ಆಟಗಾರ್ತಿಯರನ್ನು ಅಭಿನಂದಿಸಿ, ಅಪ್ಪಿದರು. ಅವರ ಕಂಗಳಲ್ಲಿ ಸಂತಸದ ಧಾರೆ ಹರಿಯುತ್ತಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ಭಾವುಕರಾಗಿ ಮುಜುಂದಾರ್ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಈ ಫೋಟೊ ವೈರಲ್ ಆಗಿದ್ದು ಗುರು-ಶಿಷ್ಯರ ಬಾಂಧವ್ಯ ಹೇಗಿರಬೇಕು ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಯಿತು.
ಈ ಸಂದರ್ಭದಿಂದ ಅಷ್ಟೇ ಭಾವುಕರಾದ ಮುಜುಂದಾರ್, ತಮ್ಮ ನಾಯಕಿಯ ನಾಯಕತ್ವ ಮತ್ತು ಒತ್ತಡದ ನಡುವೆಯೂ ಅವರ ಶಾಂತತೆಯನ್ನು ಶ್ಲಾಘಿಸಿದರು. ಅಕ್ಟೋಬರ್ 2023 ರಲ್ಲಿ ಬಿಸಿಸಿಐ, ಮುಜುಂದಾರ್ ಅವರನ್ನು ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ನೇಮಿಸಿತು.
📽️ Raw Reactions
— BCCI Women (@BCCIWomen) November 3, 2025
Pure Emotions ❤️
The moment when #WomenInBlue created history by winning the #CWC25 Final 🥳#TeamIndia pic.twitter.com/5jV4xaeilD
"ಕಳೆದ ಎರಡೂವರೆ ವರ್ಷಗಳಲ್ಲಿ ಸರ್ ಅವರ ಕೊಡುಗೆ ಅದ್ಭುತವಾಗಿದೆ. ಅವರ ಆಗಮನದ ನಂತರ ಎಲ್ಲವೂ ಸ್ಥಿರ ಮತ್ತು ಸುಗಮವಾಯಿತು. ಅವರು ನಮಗೆ ಹಗಲು ರಾತ್ರಿ ಅಭ್ಯಾಸ ಮಾಡುವಂತೆ ಮಾಡಿದರು. ಸುಧಾರಣೆಯ ಅಗತ್ಯವಿರುವುದನ್ನು ಪುನರಾವರ್ತಿಸಿದರು. ಅವರೊಂದಿಗೆ ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ" ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದರು.
ಇದನ್ನೂ ಓದಿ Women’s World Cup 2025: ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ
ಕೌರ್ ದಾಖಲೆ
ಮಹಿಳಾ ಏಕದಿನ ವಿಶ್ವಕಪ್‌ಗಳ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುರಿದು ಹಾಕಿದ್ದಾರೆ. ಈಗ ಮಹಿಳಾ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಕೌರ್ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, ಉತ್ತಮ ಪ್ರದರ್ಶನವನ್ನು ತೋರಿತು. ಶಫಾಲಿ ವರ್ಮಾ (87) ಹಾಗೂ ದೀಪ್ತಿ ಶರ್ಮಾ (58) ಅವರ ಅರ್ಧಶತಕಗಳ ಬಲದಿಂದ ಭಾರತ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ನಾಯಕಿ ಲಾರಾ ವಾಲ್ವಾರ್ಡ್ಟ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ 45.3 ಓವರ್‌ಗಳಿಗೆ 246 ರನ್‌ಗಳಿಗೆ ಆಲ್‌ಔಟ್ ಆಯಿತು.