ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಹ್ಯಾರಿ ಬ್ರೂಕ್
Harry Brook creates history: ಬ್ರೂಕ್ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಎರಡನೇ ಅತಿ ವೇಗದ ಶತಕ. 2016ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ 47 ಎಸೆತಗಳಲ್ಲಿ ಶತಕ ಬಾರಿಸಿದ್ದು ದಾಖಲೆ.
Harry Brook -
ಪಲ್ಲೆಕೆಲೆ, ಫೆ.25: ಮಂಗಳವಾರ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ 2026(T20 World Cup 2026) ಸೂಪರ್-8ರ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್(T20 World Cup 2026) ಅದ್ಭುತ ಶತಕ ಬಾರಿಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಹ್ಯಾರಿ ಬ್ರೂಕ್ (100, 51 ಎಸೆತ) ಅವರು ಆಕರ್ಷಕ ಶತಕ ಬಾರಿಸಿ ಇಂಗ್ಲೆಂಡ್ ತಂಡವನ್ನು ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಮುನ್ನಡೆಸಿದರು.
T20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಬ್ರೂಕ್ ಪಾತ್ರರಾಗಿದ್ದಾರೆ. ಈ ಹಿಂದೆ ಟೂರ್ನಮೆಂಟ್ ಇತಿಹಾಸದಲ್ಲಿ 13 ಶತಕಗಳು ದಾಖಲಾಗಿದ್ದವು, ಆದರೆ ಅವುಗಳಲ್ಲಿ ಯಾವುದೂ ನಾಯಕನ ಸಾಮರ್ಥ್ಯದಿಂದ ಬಂದಿರಲಿಲ್ಲ. 2010 ರ ಟಿ20 ವಿಶ್ವಕಪ್‌ನಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ಭಾರತದ ವಿರುದ್ಧ 98 ರನ್ ಗಳಿಸಿದ್ದ ಕ್ರಿಸ್ ಗೇಲ್, ಇದುವರೆಗೆ ಟೂರ್ನಮೆಂಟ್‌ನಲ್ಲಿ ನಾಯಕನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಇದೀಗ ಈ ದಾಖಲೆಯನ್ನು ಬ್ರೂಕ್ ಮುರಿದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ನಾಯಕನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್‌ಗಳು
100- ಹ್ಯಾರಿ ಬ್ರೂಕ್ vs ಪಾಕಿಸ್ತಾನ, ಪಲ್ಲೆಕೆಲೆ, 2026*
98- ಕ್ರಿಸ್ ಗೇಲ್ vs ಭಾರತ, ಬ್ರಿಡ್ಜ್‌ಟೌನ್, 2010
94*- ಲೋರ್ಕನ್ ಟಕರ್ vs ಒಮಾನ್, ಕೊಲಂಬೊ SSC, 2026
92- ರೋಹಿತ್ ಶರ್ಮಾ vs ಆಸ್ಟ್ರೇಲಿಯಾ, ಬ್ರಿಡ್ಜ್‌ಟೌನ್, 2024
ಎಲ್ಲಾ ಸ್ವರೂಪಗಳಲ್ಲಿ ಶತಕ ಬಾರಿಸಿದ 3ನೇ ಇಂಗ್ಲಿಷ್ ಆಟಗಾರ
ಏತನ್ಮಧ್ಯೆ, ಬ್ರೂಕ್ ತಮ್ಮ ಶತಕದ ಹಾದಿಯಲ್ಲಿ ಇನ್ನೂ ಕೆಲವು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಆಟದ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ತಮ್ಮ ದೇಶದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೋಸ್ ಬಟ್ಲರ್ ಮತ್ತು ಡೇವಿಡ್ ಮಲಾನ್ ಮೊದಲಿಬ್ಬರು.
ENG vs PAK: ಹ್ಯಾರಿ ಬ್ರೂಕ್ ಶತಕ, ಪಾಕ್‌ಗೆ ಆಘಾತ ನೀಡಿ ಸೆಮೀಸ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್!
ಬ್ರೂಕ್ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಎರಡನೇ ಅತಿ ವೇಗದ ಶತಕ. 2016ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ 47 ಎಸೆತಗಳಲ್ಲಿ ಶತಕ ಬಾರಿಸಿದ್ದು ದಾಖಲೆ.
T20 ವಿಶ್ವಕಪ್‌ನಲ್ಲಿ ಅತಿ ವೇಗದ ಶತಕಗಳು
47 ಎಸೆತ- ಕ್ರಿಸ್ ಗೇಲ್ vs ENG, ವಾಂಖೆಡೆ, 2016
50 ಎಸೆತ- ಕ್ರಿಸ್ ಗೇಲ್ vs SA, ಜೋಬರ್ಗ್, 2007
50 ಎಸೆತ - ಹ್ಯಾರಿ ಬ್ರೂಕ್ vs PAK, ಪಲ್ಲೆಕೆಲೆ, 2026*
51 ಎಸೆತ- ಬ್ರೆಂಡನ್ ಮೆಕಲಮ್ vs BAN, ಪಲ್ಲೆಕೆಲೆ, 2012