ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್‌ಗಳು ಯಾರು?
ಐಸಿಸಿ ಟೂರ್ನಿಗೆ ಆತಿಥ್ಯ ನೀಡುವ ರಾಷ್ಟ್ರಕ್ಕೆ ಹಣದ ಹೊಳೆಯೇ ಹರಿದು ಬರಲಿದೆ. ಪ್ರಾಯೋಜಕತ್ವ, ಟಿಕೆಟ್ ಮಾರಾಟದಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹವಾಗಲಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಐಸಿಸಿಯಿಂದ ಆರ್ಥಿಕ ನೆರವು ಸಿಗಲಿದೆ. ಒಂದು ಅಂದಾಜಿನ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿ ನಡೆಸುವುದರಿಂದ ಪಿಸಿಬಿಗೆ ಐಸಿಸಿಯಿಂದ 100 ಕೋಟಿ ರು.ಗೂ ಹೆಚ್ಚಿನ ನೆರವು ಸಿಗಲಿದೆ.


ಬೆಂಗಳೂರು: ಇನ್ನೇನು ಒಂದು ವಾರದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ವಿಶ್ವದ ಬಲಿಷ್ಠ ಎಂಟು ತಂಡಗಳಾದ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. 29 ವರ್ಷ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಿಕೊಂಡ ಪಾಕಿಸ್ತಾನ ಪಂದ್ಯಾವಳಿಗಾಗಿ ಉತ್ಸುಕಗೊಂಡಿದೆ. 1998ರಲ್ಲಿ ಆರಂಭಗೊಂಡ ಟೂರ್ನಿಯ ಇತಿಹಾಸದಲ್ಲಿ ಇದುವರೆಗೆ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪರಿಚಯ ಇಲ್ಲಿದೆ.
ಕೈಲ್ ಮಿಲ್ಸ್
ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ನ್ಯೂಜಿಲ್ಯಾಂಡ್‌ನ ಮಾಜಿ ವೇಗಿ ಕೈಲ್ ಮಿಲ್ಸ್ ಹೆಸರಿನಲ್ಲಿದೆ. 2002-2013ರ ತನಕ 15 ಪಂದ್ಯಗಳನ್ನಾಡಿ 28 ವಿಕೆಟ್ ಕಿತ್ತಿದ್ದಾರೆ. ಎರಡು ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದಾರೆ. 30 ರನ್‌ಗೆ 4 ವಿಕೆಟ್ ಕಿತ್ತದ್ದು ಅವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.

ಲಸಿತ್ ಮಾಲಿಂಗ
ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅವರು ಅತ್ಯಧಿಕ ವಿಕೆಟ್ ಕಿತ್ತ ಸಾಧಕರ ಯಾದಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 2006-2017 ರ ತನಕ 16 ಪಂದ್ಯಗಳನ್ನಾಡಿ 25 ವಿಕೆಟ್ ಕಿತ್ತಿದ್ದಾರೆ. 34 ರನ್‌ಗೆ 4 ಉರುಳಿಸಿದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. 9 ಮೇಡನ್ ಓವರ್ ಎಸೆದಿದ್ದಾರೆ.

ಮುತ್ತಯ್ಯ ಮುರಳೀಧರನ್
ಶ್ರೀಲಂಕಾ ಕ್ರಿಕೆಟ್ ದಂತಕಥೆ, ಮುತ್ತಯ್ಯ ಮುರಳೀಧರನ್ ಅವರು 1998-2009ರ ತನಕ ಚಾಂಪಿಯನ್ಸ್ ಟ್ರೋಫಿ ಆಡಿ 17 ಪಂದ್ಯಗಳಿಂದ 24 ವಿಕೆಟ್ ಕಿತ್ತಿದ್ದಾರೆ. 15 ರನ್‌ಗೆ 4 ವಿಕೆಟ್ ಕಿತ್ತದ್ದು ಅವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. ಎರಡು ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದಾರೆ. ಅತ್ಯಧಿಕ ವಿಕೆಟ್ ಕಿತ್ತ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಬ್ರೆಟ್ ಲೀ
ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಅವರು 22 ವಿಕೆಟ್ ಕಿತ್ತು ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2000-2009ರ ತನಕ ಒಟ್ಟು 16 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 6 ಮೇಡನ್ ಓವರ್ ಎಸೆದಿದ್ದಾರೆ.

ಗ್ಲೆನ್ ಮೆಕ್‌ಗ್ರಾತ್
ಮಾಜಿ ಆಸೀಸ್ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸದ್ಯ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. 2000-2006ರ ಅವಧಿಯಲ್ಲಿ 12 ಪಂದ್ಯವಾಡಿ 21 ವಿಕೆಟ್ ಪಡೆದಿದ್ದಾರೆ.
