ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆದ್ದ ಜ್ವರೇವ್‌ಗೆ 30 ಕೋಟಿ ನಗದು ಬಹುಮಾನ

French Open 2026: ಕಾರ್ಲೋಸ್ ಅಲ್ಕರಾಜ್ ಗಾಯದ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಗ್ರ ಶ್ರೇಯಾಂಕದ ಯಾನಿಕ್‌ ಸಿನ್ನರ್‌, ಮೂರನೇ ಶ್ರೇಯಾಂಕದ ನೊವಾಕ್‌ ಜೊಕೊವಿಕ್‌ ಅವರು ಇಲ್ಲಿ ಆರಂಭಿಕ ಹಂತದಲ್ಲೇ ಹೊರಬಿದ್ದರು. ಹೀಗಾಗಿ, ಜ್ವರೇವ್ ಮಾತ್ರ ಅನುಭವಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಅದರಂತೆ ಅವರು ಸಿಕ್ಕ ಈ ಸುವರ್ಣಾವಕಾಶ ದೊರೆಯಿತು.

ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆದ್ದ ಜ್ವರೇವ್‌ಗೆ 30 ಕೋಟಿ ನಗದು ಬಹುಮಾನ

zverev -

Abhilash BC
Abhilash BC Jun 8, 2026 9:23 AM

ಪ್ಯಾರಿಸ್‌, ಜೂ.8: ವಿಶ್ವ ಟೆನಿಸ್‌ನ ಕೆಲವು ಅತ್ಯುತ್ತಮ ಆಟಗಾರ ನಡುವಿನ ಮೂರು ವಾರಗಳ ಕಠಿಣ ಸ್ಪರ್ಧೆಯ ನಂತರ 2026 ರ ಫ್ರೆಂಚ್ ಓಪನ್(French Open 2026) ಅಂತಿಮವಾಗಿ ಮುಕ್ತಾಯಗೊಂಡಿತು. ರಷ್ಯಾದ ಮಾರಿಯಾ ಆಂಡ್ರೀವಾ ಮಹಿಳಾ ಫೈನಲ್‌ನಲ್ಲಿ ಮಜಾ ಚ್ವಾಲಿನ್ಸ್ಕ ಅವರನ್ನು ಸೋಲಿಸಿದರೆ, ಭಾನುವಾರ ನಡೆದ ಫ್ರೆಂಚ್ ಓಪನ್‌ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜ್ವರೇವ್‌(Alexander Zverev) ಐದು ಸೆಟ್‌ಗಳ ಹೋರಾಟದಲ್ಲಿ ಇಟಲಿಯ ಫ್ಲಾವಿಯೊ ಕೊಬೊಲಿ ಅವರನ್ನು ಸೋಲಿಸಿ ಪುರುಷರ ಸಿಂಗಲ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡರು. ಜ್ವರೇವ್‌ ಅವರು ಕೊನೆಗೂ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ಪ್ರಶಸ್ತಿ ಗೆದ್ದ ಜ್ವರೇವ್‌ಗೆ ಭಾರೀ ನಗದು ಬಹುಮಾನ ದೊರಕಿತು. ಬರೋಬ್ಬರಿ 30 ಕೋಟಿ ರೂ. ಪಡೆದರು.

ಜ್ವರೇವ್‌ 6-1, 4-6, 6-4, 6-7 (5/7), 6-1ರಿಂದ ಹತ್ತನೇ ಶ್ರೇಯಾಂಕದ ಕೊಬೊಲಿ ಅವರನ್ನು ಮಣಿಸಿದರು. 1996ರ ನಂತರ ಗ್ರ್ಯಾನ್‌ಸ್ಲಾಮ್‌ ಗೆದ್ದ ಜರ್ಮನಿಯ ಮೊದಲ ಆಟಗಾರ ಎಂಬ ಹಿರಿಮೆಗೆ ಜ್ವರೇವ್‌ ಪಾತ್ರರಾದರು. ಮೂರು ದಶಕಗಳ ಹಿಂದೆ ಬೋರಿಸ್ ಬೆಕರ್ ಅವರು ಆಸ್ಟ್ರೇಲಿಯನ್ ಓಪನ್‌ ಪ್ರಶಸ್ತಿ ಗೆದ್ದಿದ್ದರು.



ಜ್ವರೇವ್ ಅವರಿಗೆ ಇದು ನಾಲ್ಕನೇ ಫೈನಲ್‌ ಆಗಿತ್ತು. ಎರಡು ವರ್ಷಗಳ ಹಿಂದೆ ಫ್ರೆಂಚ್ ಓಪನ್‌ನಲ್ಲಿ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರಿಗೆ ಸೋತಿದ್ದರು. 2020ರ ಅಮೆರಿಕ ಓಪನ್‌ ಮತ್ತು 2025ರ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲೂ ಎಡವಿದ್ದರು.

ಪ್ರಶಸ್ತಿ ಮೊತ್ತ

ಚಾಂಪಿಯನ್ಸ್: 30.84 ಕೋಟಿ ರೂ.

ರನ್ನರ್ಸ್-ಅಪ್: 15.42 ಕೋಟಿ ರೂ.

ಸೆಮಿಫೈನಲಿಸ್ಟ್: 8.26 ಕೋಟಿ ರೂ.

ಕ್ವಾರ್ಟರ್-ಫೈನಲಿಸ್ಟ್: 5.17 ಕೋಟಿ ರೂ.

ತೆಲಂಗಾಣ ಟಿ20 ಲೀಗ್ ಹರಾಜು: ದೊಡ್ಡ ಮೊತ್ತ ಪಡೆದ ತಿಲಕ್ ವರ್ಮಾ, ಸಿರಾಜ್

24 ವರ್ಷದ ಕೊಬೊಲಿ ಫೈನಲ್‌ ಪಂದ್ಯದಲ್ಲಿ ಎರಡನೇ ಮತ್ತು ನಾಲ್ಕನೇ ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿ, ಜ್ವರೇವ್ ಅವರನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ, ನಿರ್ಣಾಯಕ ಸೆಟ್‌ನಲ್ಲಿ ಲಯ ತಪ್ಪಿದರು. ಸೆಮಿಫೈನಲ್‌ನಲ್ಲಿ ಅವರು ಸ್ವದೇಶದ ಮ್ಯಾಟಿಯೊ ಅರ್ನಾಲ್ಡಿ ಅವರಿಂದ ವಾಕ್‌ ಓವರ್‌ ಪಡೆದಿದ್ದರು.

ಕಾರ್ಲೋಸ್ ಅಲ್ಕರಾಜ್ ಗಾಯದ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಗ್ರ ಶ್ರೇಯಾಂಕದ ಯಾನಿಕ್‌ ಸಿನ್ನರ್‌, ಮೂರನೇ ಶ್ರೇಯಾಂಕದ ನೊವಾಕ್‌ ಜೊಕೊವಿಕ್‌ ಅವರು ಇಲ್ಲಿ ಆರಂಭಿಕ ಹಂತದಲ್ಲೇ ಹೊರಬಿದ್ದರು. ಹೀಗಾಗಿ, ಜ್ವರೇವ್ ಮಾತ್ರ ಅನುಭವಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಅದರಂತೆ ಅವರು ಸಿಕ್ಕ ಈ ಸುವರ್ಣಾವಕಾಶ ದೊರೆಯಿತು.