ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಇಂದಿನಿಂದ ಭಾರತ-ಇಂಗ್ಲೆಂಡ್‌ ಟೆಸ್ಟ್‌; ಪ್ರತಿ ದಿನದಾಟ ಹೀಗಿರಲಿದೆ

IND vs ENG 1st Test: ಇಂಗ್ಲೆಂಡ್‌ನಲ್ಲಿ ಪಂದ್ಯ ಬೆಳಗ್ಗೆ 11 ಗಂಟೆಗೆ ಆರಂಭವಾದರೂ ಭಾರತೀಯ ಕಾಲ ಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಹೆಚ್ಚುವರಿಯಾಗಿ, ಎಲ್ಲಾ ನಿಗದಿತ ಓವರ್‌ಗಳು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಹೆಚ್ಚುವರಿಯಾಗಿ 30 ನಿಮಿಷಗಳನ್ನು ಆಡಬಹುದು.

ಇಂದಿನಿಂದ ಭಾರತ-ಇಂಗ್ಲೆಂಡ್‌ ಟೆಸ್ಟ್‌; ಪ್ರತಿ ದಿನದಾಟ ಹೀಗಿರಲಿದೆ

Profile Abhilash BC Jun 20, 2025 9:58 AM

ಲೀಡ್ಸ್‌: ಹೊಸ ನಾಯಕ ಶುಭಮಾನ್​ ಗಿಲ್(shubman gill) ಸಾರಥ್ಯದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಭಾರತ ತಂಡ ಸಜ್ಜಾಗಿದೆ. ಶುಕ್ರವಾರದಿಂದ ನಡೆಯಲಿರುವ ಆತಿಥೇಯ ಇಂಗ್ಲೆಂಡ್(IND vs ENG)​ ವಿರುದ್ಧದ 5 ಪಂದ್ಯಗಳ ʼಆ್ಯಂಡರ್ಸನ್‌- ತೆಂಡುಲ್ಕರ್‌ʼ​ ಟ್ರೋಫಿ(Anderson-Tendulkar Trophy) ಟೆಸ್ಟ್​ ಸರಣಿಯಲ್ಲಿ ಶುಭಾರಂಭ ಕಾಣುವ ಹಂಬಲವಾಗಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 4ನೇ ಆವೃತ್ತಿಯಲ್ಲಿ ಉಭಯ ತಂಡಗಳಿಗೂ ಮೊದಲ ಸರಣಿ ಆಗಿದೆ. ಪ್ರತಿ ದಿನದಾಟ ಹೀಗಿರಲಿದೆ ಎಂಬ ಮಾಹಿತಿ ಇಲ್ಲಿದೆ.

ಇಂಗ್ಲೆಂಡ್‌ನಲ್ಲಿ ಪಂದ್ಯ ಬೆಳಗ್ಗೆ 11 ಗಂಟೆಗೆ ಆರಂಭವಾದರೂ ಭಾರತೀಯ ಕಾಲ ಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಹೆಚ್ಚುವರಿಯಾಗಿ, ಎಲ್ಲಾ ನಿಗದಿತ ಓವರ್‌ಗಳು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಹೆಚ್ಚುವರಿಯಾಗಿ 30 ನಿಮಿಷಗಳನ್ನು ಆಡಬಹುದು.

ಮೊದಲ ಅವಧಿ: ಮಧ್ಯಾಹ್ನ 3.30-5.30(ಭೋಜನ ವಿರಾಮ)

ಎರಡನೇ ಅವಧಿ: ಸಂಜೆ 6.10-8.10 (ಚಹಾ ವಿರಾಮ )

ಮೂರನೇ ಅವಧಿ: ರಾತ್ರಿ 8.30-10.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್

ಬೌಲಿಂಗ್‌-ಬ್ಯಾಟಿಂಗ್‌ ಎರಡಕ್ಕೂ ಪಿಚ್‌ ಸಹಕಾರಿ

ಹೆಡಿಂಗ್ಲೆ ಮೈದಾನದ ಹಸಿರು ಪಿಚ್​ ಮೊದಲ ದಿನ ವೇಗದ ಬೌಲರ್​ಗಳಿಗೆ ಹೆಚ್ಚಿನ ನೆರವು ನೀಡಿದರೂ, ನಂತರದಲ್ಲಿ ಬ್ಯಾಟಿಂಗ್​ಗೆ ಸಹಕಾರಿಯಾಗಿರಲಿದೆ ಎಂದು ಪಿಚ್​ ಕ್ಯೂರೇಟರ್​ ರಿಚರ್ಡ್​ ರಾಬಿನ್​ಸನ್​ ತಿಳಿಸಿದ್ದಾರೆ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆಯ್ದುಕೊಂಡರೆ ಉತ್ತಮ. ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಆ ಬಳಿಕ ಬೃಹತ್‌ ರನ್‌ ಪೇರಿಸಿ ಮುನ್ನಡೆ ಕಾಯ್ದುಕೊಳ್ಳಬಹುದು. ವಾರಾಂತ್ಯದಲ್ಲಿ ಲೀಡ್ಸ್​ ವಾತಾವರಣ 30 ಡಿಗ್ರಿವರೆಗೂ ಉಷ್ಣಾಂಶ ಹೊಂದಿರಲಿದ್ದು, ದಿನಗಳೆದಂತೆ ಪಿಚ್​ ತೇವಾಂಶ ಕಳೆದುಕೊಳ್ಳಲಿದೆ. ಹೀಗಾಗಿ ಈ ಸಲದ ಪಿಚ್​ ಸ್ವಲ್ಪ ಭಿನ್ನವಾಗಿ ವರ್ತಿಸಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ IND vs ENG: ಐಪಿಎಲ್‌ ಟ್ರೋಫಿಗಿಂತ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲುವುದು ದೊಡ್ಡದು ಎಂದ ಶುಭಮನ್‌ ಗಿಲ್‌!