ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ; ಸೆಮಿಫೈನಲ್ ಪ್ರವೇಶಿಸಿದ ಭಾರತ
Women's Asian Champions Trophy: ಹಿಂದಿನ ಪಂದ್ಯಗಳಲ್ಲಿ ಎರಡು ಬಾರಿ ಗೋಲು ಗಳಿಸಿದ್ದ ಮುಮ್ತಾಜ್ ಖಾನ್, 28ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವ ಮೂಲಕ, ಅರ್ಧಾವಧಿಯ ವಿರಾಮದ ವೇಳೆಗೆ ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
Indian women's hockey team -
ಭೋಪಾಲ್, ನ.22: ಭಾನುವಾರ ನಡೆದ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನ ತಮ್ಮ ಮೂರನೇ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಭಾರತ ತಂಡವು ಥೈಲ್ಯಾಂಡ್ ವಿರುದ್ಧ 7-0 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿದೆ. ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.
ಈ ಟೂರ್ನಮೆಂಟ್‌ನಲ್ಲಿ ಭಾರತಕ್ಕೆ ಇದು ಸತತ ಮೂರನೇ ಗೆಲುವಾಗಿದ್ದು, ಇದಕ್ಕೂ ಮುನ್ನ ತಂಡವು ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾಗಳನ್ನು ಸೋಲಿಸಿತ್ತು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ಲಭ್ಯವಾದ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ನವನೀತ್ ಕೌರ್ ಭಾರತದ ಪರ ಖಾತೆ ತೆರೆದರು. 10ನೇ ನಿಮಿಷದಲ್ಲಿ ದೀಪಿಕಾ ಮತ್ತೊಂದು ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಥೈಲ್ಯಾಂಡ್ ತಂಡವು ಚೇತರಿಸಿಕೊಳ್ಳುವ ಮೊದಲೇ, 11ನೇ ನಿಮಿಷದಲ್ಲಿ ದೀಪಿಕಾ ಮತ್ತೊಮ್ಮೆ ಗೋಲು ಬಾರಿಸುವ ಮೂಲಕ ಭಾರತದ ಪರ ಅಂತರವನ್ನು 3-0 ಕ್ಕೆ ಏರಿಸಿದರು.
ಹಿಂದಿನ ಪಂದ್ಯಗಳಲ್ಲಿ ಎರಡು ಬಾರಿ ಗೋಲು ಗಳಿಸಿದ್ದ ಮುಮ್ತಾಜ್ ಖಾನ್, 28ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವ ಮೂಲಕ, ಅರ್ಧಾವಧಿಯ ವಿರಾಮದ ವೇಳೆಗೆ ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
A NIGHT TO REMEMBER IN BHOPAL! 🇮🇳🔥 The Indian Women’s Hockey Team put on a dominant show against Thailand, securing a commanding 7-0 victory in their third match of the Madhya Pradesh Women’s Asian Champions Trophy Bhopal 2026! 💪🏑 Three wins in three matches and a place in the Semi-Finals secured! 👏🏆 #HockeyIndia #IndiaKaGame #MPAsianCT2026 #HockeyIsBack #NamasteAsia
— Hockey India (@TheHockeyIndia) November 22, 2026
ಮೂರನೇ ಕ್ವಾರ್ಟರ್‌ನಲ್ಲಿ ಆಟ ಪುನರಾರಂಭಗೊಂಡಾಗ ಭಾರತ ತನ್ನ ಲಯವನ್ನು ಕಾಯ್ದುಕೊಂಡಿತು. ಆಟದ ಆರಂಭದಲ್ಲೇ ಸುನೇಲಿತಾ ಟೊಪ್ಪೊ ತಂಡದ ಪರ ಐದನೇ ಗೋಲು (32ನೇ ನಿಮಿಷ) ಗಳಿಸಿದರು.
56ನೇ ನಿಮಿಷದಲ್ಲಿ ದೀಪಿಕಾ ಚೆಂಡನ್ನು ಗೋಲ್ ಪೋಸ್ಟ್‌ನೊಳಗೆ ಸೇರಿಸಿ ತಮ್ಮ ಹ್ಯಾಟ್ರಿಕ್ ಪೂರೈಸಿದರು ಮತ್ತು ಥೈಲ್ಯಾಂಡ್ ತಂಡದ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದರು. ಕೆಲವೇ ಕ್ಷಣಗಳ ನಂತರ ನವನೀತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸುವುದರೊಂದಿಗೆ ಭಾರತ ತನ್ನ ಭರ್ಜರಿ ಗೆಲುವನ್ನು ಖಚಿತಪಡಿಸಿಕೊಂಡಿತು.
ಹರ್ಷಿತ್ ರಾಣಾ ಆಕ್ರಮಣಕಾರಿ ವರ್ತನೆಗೆ ಬೇಸತ್ತ ಪಾಕಿಸ್ತಾನ ಬ್ಯಾಟರ್‌ಗಳು; ವಿಡಿಯೊ ವೈರಲ್
ಪುರುಷರ ತಂಡಕ್ಕೆ ಸರಣಿ
ಭಾರತ ಪುರುಷರ ಹಾಕಿ ತಂಡವು, ಸ್ಪೋರ್ಟಿಂಗ್ ಯೂನಿಟಿ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಭಾನುವಾರ ಆತಿಥೇಯ ನ್ಯೂಜಿಲೆಂಡ್ ತಂಡದ ಜೊತೆ 2–2 ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಆ ಮೂಲಕ ಸರಣಿಯನ್ನು 1–0 ಯಿಂದ ಗೆದ್ದುಕೊಂಡಿತು.
ಗುರುವಾರ ನಡೆದ ಮೊದಲ ಪಂದ್ಯವನ್ನು 3–2 ರಿಂದ ಗೆದ್ದುಕೊಂಡಿತ್ತು. ಶನಿವಾರ ನಡೆದ ಎರಡನೇ ಪಂದ್ಯ 2–2 ಡ್ರಾ ಆಗಿತ್ತು. ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಕ್ರೀಡಾ ಬಾಂಧವ್ಯಕ್ಕೆ ನೂರು ವರ್ಷಗಳು ಸಂದಿರುವ ನೆನಪಿನಲ್ಲಿ ಈ ಸರಣಿ ಏರ್ಪಡಿಸಲಾಗಿತ್ತು.