ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎರಡನೇ ಏಕದಿನದಲ್ಲಿ ಟಾಸ್‌ ಗೆದ್ದ ಆಫ್ಘಾನ್‌; ಭಾರತ ಪರ ಪ್ರಿನ್ಸ್‌ ಯಾದವ್‌ ಪದಾರ್ಪಣೆ

IND vs AFG Live Score: ಆಫ್ಗನ್ ತಂಡ ಮೊದಲ ಪಂದ್ಯ ಸೋತಿದ್ದರೂ, ಹಗುರವಾಗಿ ಪರಿಗಣಿಸುವಂತಿಲ್ಲ. ಅನುಭವದ ಕೊರತೆ ಇದ್ದರೂ, ದಿಟ್ಟತನ ಮತ್ತು ಆತ್ಮವಿಶ್ವಾಸ ಬಹಳಷ್ಟಿದೆ. ಮಾತ್ರವಲ್ಲದೆ ಆಫ್ಘಾನ್‌ ತಂಡ ಕೂಡ ಈ ಮೈದಾನದಲ್ಲಿ ಹಲವು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.

ಎರಡನೇ ಏಕದಿನ; ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ

Prince Yadav -

Abhilash BC
Abhilash BC Jun 17, 2026 1:05 PM

ಲಖನೌ, ಜೂ.17: ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದಿದೆ. ಸರಣಿ ಜೀವಂತವಿರಿಸಬೇಕಿದ್ದರೆ ಆಫ್ಘಾನ್‌ಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಭಾರತ ಈ ಪಂದ್ಯಕ್ಕೆ ಮೂರು ಬದಲಾವಣೆ ಮಾಡಿತು. ಫಿನ್ಸ್‌ ಯಾದವ್‌, ಕುಲ್‌ದೀಪ್‌ ಯಾದವ್‌ ಮತ್ತು ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಿತು. ಹರ್ಷ್‌ ದುಬೆ, ಪ್ರಸಿದ್ಧ್‌ ಕೃಷ್ಣ ಮತ್ತು ನಿತೀಶ್‌ ಕುಮಾರ್‌ ರೆಡ್ಡಿಯನ್ನು ಕೈಬಿಡಲಾಯಿತು.

ಪ್ರಿನ್ಸ್‌ ಯಾದವ್‌ ಪದಾರ್ಪಣೆ

ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿಯನ್ನು ಶೂನ್ಯಕ್ಕೆ ಔಟ್‌ ಮಾಡಿ ಖ್ಯಾತಿ ಗಳಿಸಿದ ಮಧ್ಯಮ ವೇಗಿ ಪ್ರಿನ್ಸ್‌ ಯಾದವ್‌ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಉಪ ನಾಯಕ ಶ್ರೇಯಸ್‌ ಅಯ್ಯರ್‌ ಕ್ಯಾಪ್‌ ನೀಡಿ ತಂಡಕ್ಕೆ ಸ್ವಾಗತಿಸಿದರು.



ಏಕನಾ ಕ್ರಿಕೆಟ್ ಸ್ಟೇಡಿಯಂ ಇಲ್ಲಿಯವರೆಗೆ ಒಂಬತ್ತು 50-ಓವರ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿದೆ. ಭಾರತ ತಂಡಕ್ಕೆ ಇದು ತವರು ಮೈದಾನದಂತೆ ಕಂಡರೂ, ಅಫ್ಘಾನಿಸ್ತಾನ ಇಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (ನಾಲ್ಕು) ಆಡಿದೆ ಎಂಬುದನ್ನು ಉಲ್ಲೇಖನಿಯ. ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಚೇಸಿಂಗ್ ನಡೆಸಿದ ತಂಡಗಳು ಗೆಲುವು ಸಾಧಿಸಿದೆ. ಇದೇ ಕಾರಣಕ್ಕೆ ಟಾಸ್‌ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್‌ ಆಯ್ದುಕೊಂಡಿತು.

ಆಫ್ಗನ್ ತಂಡ ಮೊದಲ ಪಂದ್ಯ ಸೋತಿದ್ದರೂ, ಹಗುರವಾಗಿ ಪರಿಗಣಿಸುವಂತಿಲ್ಲ. ಅನುಭವದ ಕೊರತೆ ಇದ್ದರೂ, ದಿಟ್ಟತನ ಮತ್ತು ಆತ್ಮವಿಶ್ವಾಸ ಬಹಳಷ್ಟಿದೆ. ಮಾತ್ರವಲ್ಲದೆ ಆಫ್ಘಾನ್‌ ತಂಡ ಕೂಡ ಈ ಮೈದಾನದಲ್ಲಿ ಹಲವು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ. ಧರ್ಮಶಾಲಾದಲ್ಲಿ ಶತಕ ಬಾರಿಸಿದ್ದ ರೆಹಮಾನುಲ್ಲಾ ಗುರ್ಬಾಜ್, ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರಶೀದ್ ಖಾನ್ ಹಾಗೂ ಅಲ್ಲಾಹ ಘಜನಫರ್ ಅವರ ಪಾತ್ರ ಈ ಪಂದ್ಯದಲ್ಲಿ ಮುಖ್ಯವಾಗಲಿದೆ.

ಎದುರಾಳಿ ಆಟಗಾರನಿಗೆ ತುಳಿದರೂ ರೆಡ್‌ ಕಾರ್ಡ್‌ ಪಡೆಯದ ಮೆಸ್ಸಿ; ವಿವಾದಾತ್ಮಕ ವಿಡಿಯೊ ವೈರಲ್‌

ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಗುರ್ನೂರ್ ಬ್ರಾರ್, ಅರ್ಶ್ದೀಪ್ ಸಿಂಗ್, ಪ್ರಿನ್ಸ್ ಯಾದವ್.

ಅಫ್ಘಾನಿಸ್ತಾನ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ದರ್ವಿಶ್ ರಸೂಲಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಎಎಮ್ ಗಜನ್ಫರ್, ಮೊಹಮ್ಮದ್ ಸಲೀಮ್ ಸಫಿ, ಬಿಲಾಲ್

ಮುಖಾಮುಖಿ

ಒಟ್ಟು ಪಂದ್ಯ-5

ಭಾರತ ಗೆಲುವು-4

ಅಫ್ಘಾನಿಸ್ತಾನ ಗೆಲುವು-0

ಪಂದ್ಯ ರದ್ದು-1