ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ vs ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ, ಪಂದ್ಯದ ಸಮಯದ ಮಾಹಿತಿ

India vs England ODI Schedule: ಭಾರತ ಮತ್ತು ಇಂಗ್ಲೆಂಡ್‌ ನಡುವಣ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಂಗಳವಾರ(ಜು.14) ಆರಂಭಗೊಳ್ಳಲಿದೆ. ಪಂದ್ಯ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

ಭಾರತ vs ಇಂಗ್ಲೆಂಡ್ ಏಕದಿನ ಸರಣಿ ಯಾವಾಗ ಆರಂಭ?

Rohit and Kohli -

Abhilash BC
Abhilash BC Jul 13, 2026 11:52 AM

ಲಂಡನ್‌, ಜು.13: ಭಾರತ ಮತ್ತು ಇಂಗ್ಲೆಂಡ್‌ ನಡುವಣ ರೋಮಾಂಚನಕಾರಿ ಏಕದಿನ ಸರಣಿ ಕಣ್ತುಂಬಿಕೊಳ್ಳಲು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ದಿಗ್ಗಜ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಮತ್ತು ಕೆ.ಎಲ್‌ ರಾಹುಲ್‌ ಆಡುತ್ತಿರುವ ಕಾರಣ ಸರಣಿ ಇನ್ನಷ್ಟು ಮಹತ್ವ ಪಡೆದಿದೆ. ಇತ್ತಂಡಗಳ ಸರಣಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಸರಣಿ ಯಾವಾಗ ಆರಂಭ?

ಉಭಯ ತಂಡಗಳ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಂಗಳವಾರ(ಜು.14) ಆರಂಭಗೊಳ್ಳಲಿದೆ. ಪಂದ್ಯ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಎರಡನೇ ಪಂದ್ಯ ಜು.16 ಸೋಫಿಯಾ ಗಾರ್ಡನ್ಸ್, ಕಾರ್ಡಿಫ್‌ನಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಜು.19 ರಂದು ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

39 ವರ್ಷದ ರೋಹಿತ್ ಮತ್ತು 37 ವರ್ಷದ ಕೊಹ್ಲಿ, ಒಟ್ಟಿಗೆ ಆಡಿದಾಗ, ಅವರು ಫೀಲ್ಡಿಂಗ್ ತಂಡಕ್ಕೆ ಎರಡು ಪಟ್ಟು ತಲೆನೋವನ್ನುಂಟುಮಾಡುತ್ತಾರೆ. ಭಾರತ ಮೊದಲು ಬ್ಯಾಟಿಂಗ್ ಮಾಡಿದಾಗ, ರೋಹಿತ್ ನಾನು ನೋಡಿದ ಅತ್ಯುತ್ತಮ ಆಟಗಾರ... ಹೊಸ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಿ, ಎದುರಾಳಿಗಳಿಂದ ಪಂದ್ಯವನ್ನು ದೂರವಿಟ್ಟು ದೊಡ್ಡ ಮೊತ್ತವನ್ನು ದಾಖಲಿಸುತ್ತಾರೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಸ್ವಾನ್‌ ಹೇಳಿದರು.

"ವಿರಾಟ್ ನಾವು ಕಂಡ ಶ್ರೇಷ್ಠ ಚೇಸರ್ ಎಂದು ನಾನು ನಂಬುತ್ತೇನೆ. ಅವರ ಕೆಲವು ಇನ್ನಿಂಗ್ಸ್ ಅದ್ಭುತವಾಗಿವೆ. ಎರಡನ್ನೂ ಹೊಂದಿರುವುದು ಭಾರತಕ್ಕೆ ದೊಡ್ಡ ಬೋನಸ್ ಆಗಿದೆ" ಎಂದರು.

ಭಾರತ vs ಇಂಗ್ಲೆಂಡ್ ತಂಡಗಳು

ಇಂಗ್ಲೆಂಡ್‌: ಹ್ಯಾರಿ ಬ್ರೂಕ್ (ನಾಯಕ), ಬೆನ್ ಡಕೆಟ್, ಜೋ ರೂಟ್, ಜಾಕೋಬ್ ಬೆಥೆಲ್, ಜೇಮ್ಸ್ ಕೋಲ್ಸ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಜೋಶ್ ಟಂಗ್.

ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಾಂಶ್ ಶೆಡ್ಜ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಇಶಾನ್ ಕಿಶನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.