ಫೈನಲ್‌ನಲ್ಲಿ ಭಾರತಕ್ಕೆ ಕಿವೀಸ್ ಸವಾಲು ಸುಲಭವಲ್ಲ; ದಾಖಲೆ ಹೀಗಿದೆ
T20 world cup final 2026: ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಉತ್ತಮ ದಾಖಲೆ ಹೊಂದಿಲ್ಲ. ಭಾರತವನ್ನು ಹಲವು ಬಾರಿ ನಾಕೌಟ್ ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಅಜೇಯ ದಾಖಲೆ ಹೊಂದಿದೆ.
India and New Zealand will chase ultimate glory in the T20 World Cup Final -
ಅಹಮದಾಬಾದ್, ಮಾ.6: ಗುರುವಾರ ಮುಂಬೈನಲ್ಲಿ ನಡೆದಿದ್ದ ದೊಡ್ಡ ಮೊತ್ತದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ ಗಳಿಂದ ಸೋಲಿಸಿದ ಭಾರತ ಫೈನಲ್(T20 world cup final 2026)ಗೆ ಲಗ್ಗೆ ಇಟ್ಟಿತು. ಹಾಲಿ ಚಾಂಪಿಯನ್ ಭಾರತವು ಇದೇ 8ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆದರೆ ಈ ಸವಾಲು ಅಷ್ಟು ಸುಲಭವಲ್ಲ. ಹಿಂದಿನ ವಿಶ್ವಕಪ್ ದಾಖಲೆ ನೋಡವಾಗ ನ್ಯೂಜಿಲೆಂಡ್ ತಂಡವೇ ಗೆಲ್ಲುವ ಫೇವರಿಟ್ ಎನಿಸಿದೆ.
ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಉತ್ತಮ ದಾಖಲೆ ಹೊಂದಿಲ್ಲ. ಭಾರತವನ್ನು ಹಲವು ಬಾರಿ ನಾಕೌಟ್ ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಉದ್ಘಾಟನ ಆವೃತ್ತಿಯಿಂದ ಈವರೆಗೆ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು ಎಲ್ಲ ಪಂದ್ಯಗಳಲ್ಲಿಯೂ ಭಾರತ ಸೋಲು ಕಂಡಿದೆ. ಈ ಬಾರಿ ಫೈನಲ್‌ನಲ್ಲಿ ಭಾರತ ಮುಯ್ಯಿ ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.
2007ರಲ್ಲಿ ಕಿವೀಸ್ ವಿರುದ್ಧ ಏಕೈಕ ಸೋಲು
2007 ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಟ್ರೋಫಿ ಗೆದ್ದುಕೊಂಡಿತು. ಟೂರ್ನಿಯಲ್ಲಿ ಭಾರತ ಸೋತಿದ್ದು ನ್ಯೂಜಿಲೆಂಡ್ ವಿರುದ್ಧ ಮಾತ್ರ. ಸೂಪರ್ 8ರಲ್ಲಿ ನ್ಯೂಜಿಲೆಂಡ್ 10 ರನ್‌ಗಳಿಂದ ಜಯಗಳಿಸಿತ್ತು. 191 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಡೇನಿಯಲ್ ವೆಟ್ಟೋರಿಯ 4 ವಿಕೆಟ್‌ಗಳ ಗೊಂಚಲು ಪಡೆದು ಸೋಲುಣಿಸಿದ್ದರು.
2016ರಲ್ಲಿ ಎರಡನೇ ಸೋಲು
ಉದ್ಘಾಟನ ಆವೃತ್ತಿಯ ಬಳಿಕ ಉಭಯ ತಂಡಗಳು ಮತ್ತೆ ಮುಖಾಮುಖಿಯಾದದ್ದು 2016ರ ಆವೃತ್ತಿಯಲ್ಲಿ. ತವರಿನಲ್ಲೇ ನಡೆದ ಈ ಆವೃತ್ತಿಯಲ್ಲಿ ಭಾರತ ತಂಡ ಕಿವೀಸ್ ತಂಡವನ್ನು ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ ಸೋಲಿಸುವ ನಿರೀಕ್ಷೆಯಿತ್ತು. 127 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ 79 ರನ್‌ಗಳಿಗೆ ಆಲೌಟ್ ಆಯಿತು. ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಅವರ ಸ್ಪಿನ್ ಬೌಲಿಂಗ್ ಮುಂದೆ ಭಾರತ ಮಂಕಾಯಿತು. 47 ರನ್‌ಗಳ ಸೋಲು ಕಂಡಿತ್ತು. ಹಾಲಿ ಆವೃತ್ತಿಯಲ್ಲಿಯೂ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಆಡುತ್ತಿದ್ದಾರೆ. ಸ್ಯಾಂಟ್ನರ್ ನಾಯಕನಾಗಿದ್ದಾರೆ.
ಸಂಜು ಸ್ಯಾಮ್ಸನ್ ಕ್ಯಾಚ್ ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ; ಹ್ಯಾರಿ ಬ್ರೂಕ್
2021ರಲ್ಲಿ ಮೂರನೇ ಸೋಲು
ಭಾರತದ ಪಾಲಿಗೆ ಗೆಲ್ಲಲೇಬೇಕಾದ ಗುಂಪು ಪಂದ್ಯದಲ್ಲಿ, ನ್ಯೂಜಿಲೆಂಡ್‌ನ ಶಿಸ್ತುಬದ್ಧ ಬೌಲಿಂಗ್ ಮೂಲಕ ಭಾರತವನ್ನು 8 ವಿಕೆಟ್ ಅಂತರದಿಂದ ಮಣಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟ್‌ಗೆ 110 ರನ್ ಮಾತ್ರ ಗಳಿಸಿತು. ಸೋಲಿನಿಂದ ಭಾರತ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.
ಭಾರತ vs ನ್ಯೂಜಿಲೆಂಡ್: ಟಿ20 ವಿಶ್ವಕಪ್ ಮುಖಾಮುಖಿ
ಆಡಿರುವ ಪಂದ್ಯಗಳು : 3
ಭಾರತ ಗೆಲುವು: 0
ನ್ಯೂಜಿಲೆಂಡ್ ಗೆಲುವು: 3
ಭಾರತ ಗರಿಷ್ಠ ಸ್ಕೋರ್: 180 (2007)
ನ್ಯೂಜಿಲೆಂಡ್ ಗರಿಷ್ಠ ಸ್ಕೋರ್: 190 (2007)
ಭಾರತ ಕನಿಷ್ಠ ಸ್ಕೋರ್: 79 (2016)