Noor Khan Airbase: ಭಾರತದ ದಾಳಿಗೆ ನಜ್ಜುಗುಜ್ಜಾಗಿದ್ದ ನೂರ್ ಖಾನ್ ವಾಯುನೆಲೆ; ಸರಿಪಡಿಸುವ ಕಾರ್ಯಕ್ಕೆ ಪಾಕ್ ಮುಂದು
ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಲ್ಲಿ ಭಾರತ, ಪಾಕಿಸ್ತಾನದ ಹಲವು ವಾಯುನೆಲೆಗಳನ್ನು ಧ್ವಂಸಗೊಳಿಸಿತ್ತು. ಅದರಲ್ಲಿ ಪ್ರಮುಖವಾಗಿ ನೂರ್ ಖಾನ್ ವಾಯುನೆಲೆಯೂ (Noor Khan Air Base) ಒಂದು. ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ಕ್ಷಿಪಣಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯು ನೆಲೆಯ ಮೇಲೆ ನಿಖರ ದಾಳಿ ನಡೆಸಿತ್ತು.

-

ಇಸ್ಲಾಮಾಬಾದ್: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಲ್ಲಿ ಭಾರತ, ಪಾಕಿಸ್ತಾನದ ಹಲವು ವಾಯುನೆಲೆಗಳನ್ನು ಧ್ವಂಸಗೊಳಿಸಿತ್ತು. ಅದರಲ್ಲಿ ಪ್ರಮುಖವಾಗಿ ನೂರ್ ಖಾನ್ ವಾಯುನೆಲೆಯೂ (Noor Khan Air Base) ಒಂದು. ಭಾರತದ ಏಟಿಗೆ ಈ ವಾಯುನೆಲೆ ಸಂಪೂರ್ಣವಾಗಿ ನಾಶವಾಗಿತ್ತು. ಇದೀಗ ಮತ್ತೆ ಅದರ ಪುನರ್‌ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಪುಷ್ಟಿ ಎನ್ನುವಂತೆ, ನೂರ್ ಖಾನ್ ವಾಯುನೆಲೆಯ ಉಪಗ್ರಹದ ಚಿತ್ರ ವೈರಲ್ ಆಗಿದೆ. ಇಸ್ಲಾಮಾಬಾದ್‌ನಿಂದ 25 ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿರುವ ಕಾರ್ಯತಂತ್ರದ ವಾಯುನೆಲೆಯಾದ ನೂರ್ ಖಾನ್, ಪಾಕಿಸ್ತಾನ ವಾಯುಪಡೆಯ ಪ್ರಮುಖ ಏರ್ ಬೇಸ್.
ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ಕ್ಷಿಪಣಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯು ನೆಲೆಯ ಮೇಲೆ ನಿಖರ ದಾಳಿ ನಡೆಸಿದ್ದನ್ನು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಒಪ್ಪಿಕೊಂಡಿದ್ದರು. ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ಮಾಡಿ ಈ ಮಾಹಿತಿ ಹೇಳಿದ್ದರು ಎಂದು ಅವರು ತಿಳಿಸಿದ್ದರು. ಇದರಿಂದ ಸೇನೆ ಮತ್ತು ಖುದ್ದು ಸೇನಾ ಮುಖ್ಯಸ್ಥರು ಭಾರೀ ಆಘಾತಕ್ಕೆ ಒಳಗಾಗಿದ್ದರು. ಕೂಡಲೇ, ಅವರು ರಾವಲ್ಪಿಂಡಿಯಲ್ಲಿರುವ ಜನರಲ್ ಹೆಡ್ ಕ್ವಾಟರ್ಸ್ ನಲ್ಲಿನ ಬಂಕರ್ ಒಳಗೆ ಸ್ಥಳಾಂತರಗೊಂಡಿದ್ದರು ಎಂದು ವರದಿಯಾಗಿದೆ.
ಪಾಕಿಸ್ತಾನದ ವಾಯುಸೇನೆಯ ಏರ್ ಮೊಬಿಲಿಟಿ ಕಮಾಂಡ್ ಮುಖ್ಯ ಕಚೇರಿಯೂ ಈ ಭಾಗದಲ್ಲಿದೆ. ದೇಶದ ಹೆಚ್ಚಿನ ವಿಐಪಿಗಳು ನೂರ್ ಖಾನ್ ಏರ್ಬೇಸ್ ನಿಂದಲೇ ಪ್ರಯಾಣಿಸುತ್ತಾರೆ. ಹೀಗಾಗಿ ಈ ವಾಯುನೆಲೆ ಪ್ರಮುಖವಾಗಿ ಗುರುತಿಸಿಕೊಂಡಿದೆ. ಭಾರತದ ದಾಳಿ ಬಳಿಕ ನೂರ್ ಖಾನ್ ಸೇರಿದಂತೆ ಒಟ್ಟು 11 ವಾಯುನೆಲೆಗಳ ಉಪಗ್ರಹ ಆಧಾರಿತ ಚಿತ್ರಗಳು ವೈರಲ್ ಆಗಿದ್ದವು.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್‌ಗೆ ಬಳಸಿದ್ದು ಕೇವಲ 50 ಶಸ್ತ್ರಾಸ್ತ್ರಗಳು; ಅಚ್ಚರಿಯ ಮಾಹಿತಿ ಬಹಿರಂಗ
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರು ನೇಪಾಳಿ ಪ್ರಜೆ ಸೇರಿದಂತೆ 26 ನಾಗರಿಕರ ಬಲಿ ಪಡೆದಿದ್ದರು. ಈ ದಾಳಿಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.