Asia Cup 2025: ಏಷ್ಯಾಕಪ್‌ಗೆ ಯುಎಇ ತಂಡ ಪ್ರಕಟ; ವಸೀಮ್ ನಾಯಕ
UAE Asia Cup squad: 32 ವರ್ಷದ ಮಟಿಯುಲ್ಲಾ ಅವರು ಯುಎಇ ಪರ ಕೇವಲ ಒಂದು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೊನೆಯ ಬಾರಿಗೆ ಈ ವರ್ಷದ ಜುಲೈನಲ್ಲಿ ನೈಜೀರಿಯಾ ವಿರುದ್ಧ ಪರ್ಲ್ ಆಫ್ ಆಫ್ರಿಕಾ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಏತನ್ಮಧ್ಯೆ, 35 ವರ್ಷದ ಸಿಮ್ರನ್‌ಜೀತ್ ಸಿಂಗ್ ಕೂಡ ಡಿಸೆಂಬರ್ 2024 ರ ನಂತರ ಮೊದಲ ಬಾರಿಗೆ ತಂಡಕ್ಕೆ ಮರಳುತ್ತಿದ್ದಾರೆ. ಅವರು ಇದುವರೆಗೆ ಐದು ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದಾರೆ.

-

ದುಬೈ: ಬಹುನಿರೀಕ್ಷಿತ ಏಷ್ಯಾ ಕಪ್(Asia Cup 2025) ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕೇವಲ 5 ದಿನಗಳು ಬಾಕಿ ಇರುವಾಗ ಯುಎಇ ತನ್ನ 17 ಸದಸ್ಯರ ತಂಡವನ್ನು(UAE Asia Cup squad) ಪ್ರಕಟಿಸಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20ಐ ತ್ರಿಕೋನ ಸರಣಿಯಲ್ಲಿಯಲ್ಲಿ ಆಡುತ್ತಿರುವ ಎಲ್ಲ ಸದಸ್ಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡವನ್ನು ಮುಹಮ್ಮದ್ ವಸೀಮ್ ಮುನ್ನಡೆಸಲಿದ್ದಾರೆ. ಮಟಿಯುಲ್ಲಾ ಖಾನ್ ಮತ್ತು ಸಿಮ್ರನ್‌ಜೀತ್ ಸಿಂಗ್ ಹೊಸ ಸೇರ್ಪಡೆಯಾಗಿದೆ. ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ.
32 ವರ್ಷದ ಮಟಿಯುಲ್ಲಾ ಅವರು ಯುಎಇ ಪರ ಕೇವಲ ಒಂದು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೊನೆಯ ಬಾರಿಗೆ ಈ ವರ್ಷದ ಜುಲೈನಲ್ಲಿ ನೈಜೀರಿಯಾ ವಿರುದ್ಧ ಪರ್ಲ್ ಆಫ್ ಆಫ್ರಿಕಾ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಏತನ್ಮಧ್ಯೆ, 35 ವರ್ಷದ ಸಿಮ್ರನ್‌ಜೀತ್ ಸಿಂಗ್ ಕೂಡ ಡಿಸೆಂಬರ್ 2024 ರ ನಂತರ ಮೊದಲ ಬಾರಿಗೆ ತಂಡಕ್ಕೆ ಮರಳುತ್ತಿದ್ದಾರೆ. ಅವರು ಇದುವರೆಗೆ ಐದು ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದಾರೆ.
2016 ರ ನಂತರ ಮೊದಲ ಬಾರಿಗೆ ಯುಎಇ ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿದೆ. ಆಗ ಮೊದಲ ಬಾರಿಗೆ ಟಿ 20 ಸ್ವರೂಪದಲ್ಲಿ ಪಂದ್ಯಾವಳಿಯನ್ನು ಆಡಲಾಯಿತು ಮತ್ತು ಬಾಂಗ್ಲಾದೇಶ ಆತಿಥ್ಯ ವಹಿಸಿತ್ತು. ಯುಎಇ ತಂಡ ಗ್ರೂಪ್ ಎ ವಿಭಾಗದಲ್ಲಿದ್ದು, ಸೆಪ್ಟೆಂಬರ್ 10 ರಂದು ದುಬೈನಲ್ಲಿ ಭಾರತವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಪಾಕಿಸ್ತಾನ ಮತ್ತು ಒಮನ್ ಈ ಗುಂಪಿನಲ್ಲಿರುವ ಇತರ ಎರಡು ತಂಡಗಳಾಗಿವೆ. ಇತ್ತೀಚಿನ ತಂಡದ ಫಾರ್ಮ್ ಬಗ್ಗೆ ಹೇಳುವುದಾದರೆ, ಯುಎಇ ತಂಡವು ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ.
ಯುಎಇ ತಂಡ
ಮುಹಮ್ಮದ್ ವಸೀಮ್ (ನಾಯಕ), ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ (ವಿ.ಕೀ.), ಆಸಿಫ್ ಖಾನ್, ಧ್ರುವ ಪರಾಶರ್, ಎಥನ್ ಡಿ'ಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕ್, ಮತಿಯುಲ್ಲಾ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವಾದುಲ್ಲಾ,ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿ.ಕೀ.), ರೋಹಿದ್ ಖಾನ್, ಸಿಮ್ರಂಜೀತ್ ಸಿಂಗ್ ಮತ್ತು ಸಘೀರ್ ಖಾನ್.
ಇದನ್ನೂ ಓದಿ Asia Cup 2025: ಇಂದು ಟೀಮ್ ಇಂಡಿಯಾ ಆಟಗಾರರ ದುಬೈ ಪ್ರಯಾಣ