ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಭಾರತ; ಸಾರಾಂಶ್ ಜೈನ್‌ ಪದಾರ್ಪಣೆ

Saransh Jain: ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಏಕೈಕ ಸ್ಪೆಷಲಿಸ್ಟ್ ಆಫ್-ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರಿಂದ, ಈ ಪ್ರವಾಸಕ್ಕೆ ಸರಾಂಶ್ ತಂಡದಲ್ಲಿ ಸೇರ್ಪಡೆಗೊಳ್ಳಲು ಅವಕಾಶ ದೊರೆಯಿತು. ಈ ವರ್ಷದ ಆರಂಭದಲ್ಲಿ ನಡೆದ ಭಾರತ-ಎ ಶ್ರೀಲಂಕಾ ಪ್ರವಾಸದಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು.

ಎರಡನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಭಾರತ; ಸಾರಾಂಶ್ ಜೈನ್‌ ಪದಾರ್ಪಣೆ

Saransh Jain -

Abhilash BC
Abhilash BC Aug 23, 2026 10:01 AM

ಕೊಲಂಬೊ, ಆ.23: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಭಾರತ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿತು. ಕುಲ್‌ದೀಪ್‌ ಯಾದವ್‌ ಬದಲಿಗೆ ಆಫ್‌ಸ್ಪಿನ್ನರ್ ಸಾರಾಂಶ್ ಜೈನ್‌ಗೆ ಅವಕಾಶ ನೀಡಲಾಯಿತು. ಇದು ಅವರಿಗೆ ಪದಾಪರ್ಣ ಪಂದ್ಯ.

33 ವರ್ಷದ ಅವರು ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಹಲವು ವರ್ಷಗಳ ಸ್ಥಿರ ಪ್ರದರ್ಶನ ನೀಡಿದ ನಂತರ ತಮ್ಮ ಕ್ಯಾಪ್ ಅನ್ನು ಗಳಿಸಿದ್ದಾರೆ. ಇಂದೋರ್ ಕ್ರಿಕೆಟಿಗ 54 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 31.75 ರ ಸರಾಸರಿಯಲ್ಲಿ 2,223 ರನ್ ಗಳಿಸಿದ್ದಾರೆ ಮತ್ತು 27.30 ರ ಸರಾಸರಿಯಲ್ಲಿ 188 ವಿಕೆಟ್‌ಗಳನ್ನು ಪಡೆದಿದ್ದಾರೆ. 2025-26 ರ ದುಲೀಪ್ ಟ್ರೋಫಿಯಲ್ಲಿ ಕೇಂದ್ರ ವಲಯವನ್ನು ಪ್ರತಿನಿಧಿಸುವ ಅವರು ಟೂರ್ನಮೆಂಟ್‌ನ ಆಟಗಾರರಾಗಿದ್ದರು.

ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಏಕೈಕ ಸ್ಪೆಷಲಿಸ್ಟ್ ಆಫ್-ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರಿಂದ, ಈ ಪ್ರವಾಸಕ್ಕೆ ಸರಾಂಶ್ ತಂಡದಲ್ಲಿ ಸೇರ್ಪಡೆಗೊಳ್ಳಲು ಅವಕಾಶ ದೊರೆಯಿತು. ಈ ವರ್ಷದ ಆರಂಭದಲ್ಲಿ ನಡೆದ ಭಾರತ-ಎ ಶ್ರೀಲಂಕಾ ಪ್ರವಾಸದಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು, ಅಜೇಯ 70 ರನ್ ಗಳಿಸಿದರು ಮತ್ತು ಆರು ವಿಕೆಟ್‌ಗಳನ್ನು ಕಬಳಿಸಿದರು. 2021 ರ ಜನವರಿಯಲ್ಲಿ ವಾಷಿಂಗ್ಟನ್ ನಂತರ ಭಾರತ ಪರ ಪದಾರ್ಪಣೆ ಮಾಡಿದ ಮೊದಲ ಆಫ್-ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉಭಯ ಆಡುವ ಬಳಗ

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಸರನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಶ್ರೀಲಂಕಾ ಪ್ಲೇಯಿಂಗ್ XI: ಲಾಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ.), ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೋ.