IPL 2025: ಸಚಿನ್ ದಾಖಲೆ ಮುರಿದ ಸಾಯಿ ಸುದರ್ಶನ್
Sai Sudharsan: ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 1500 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಕೂಡ ಸುದರ್ಶನ್( 35 ಇನಿಂಗ್ಸ್) ತಮ್ಮ ಹೆಸರಿಗೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶಾನ್ ಮಾರ್ಷ್(36 ಇನಿಂಗ್ಸ್) ಹೆಸರಿನಲ್ಲಿತ್ತು.


ಅಹಮದಾಬಾದ್: ಗುಜರಾತ್ ಟೈಟಾನ್ಸ್(Gujarat Titans) ತಂಡದ ಯುವ ಎಡಗೈ ಬ್ಯಾಟರ್ ಸಾಯಿ ಸುದರ್ಶನ್(Sai Sudharsan) ಅವರು ಶುಕ್ರವಾರ ನಡೆದಿದ್ದ ಐಪಿಎಲ್‌ನ(IPL 2025) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 48 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ವೇಳೆ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಮುರಿದ್ದಾರೆ. ಸಚಿನ್ 59 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದರೆ, ಸುದರ್ಶನ್ 54 ಇನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ವಿಶ್ವ ದಾಖಲೆ ಶಾನ್ ಮಾರ್ಷ್ (53 ಇನಿಂಗ್ಸ್) ಹೆಸರಿನಲ್ಲಿದೆ.
ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 1500 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಕೂಡ ಸುದರ್ಶನ್( 35 ಇನಿಂಗ್ಸ್) ತಮ್ಮ ಹೆಸರಿಗೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶಾನ್ ಮಾರ್ಷ್(36 ಇನಿಂಗ್ಸ್) ಹೆಸರಿನಲ್ಲಿತ್ತು.
ಹೈದರಾಬಾದ್ ವಿರುದ್ಧ 23 ಎಸೆತಗಳಿಂದ 48 ರನ್ ಬಾರಿಸಿದ ಸಾಯಿ ಸುದರ್ಶನ್ ಒಟ್ಟಾರೆ 504 ರನ್ ಗಳಿಸುವ ಮೂಲಕ ಹಾಲಿ ಆವೃತ್ತಿಯಲ್ಲಿ ಅತ್ಯಧಿಕ ರನ್‌ಗಳಿಸಿದ ಆಟಗಾರ ಎನಿಸಿಕೊಂಡು ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ IPL 2025 Points Table: ಗುಜರಾತ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ತಂಡ ಆರ್‌ಸಿಬಿ
ಟಿ20ಯಲ್ಲಿ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 2 ಸಾವಿರ ರನ್
ಶಾನ್ ಮಾರ್ಷ್ - 53 ಇನಿಂಗ್ಸ್
ಸಾಯಿ ಸುದರ್ಶನ್ - 54 ಇನ್ನಿಂಗ್ಸ್
ಬ್ರಾಡ್ ಹಾಡ್ಜ್ - 58 ಇನ್ನಿಂಗ್ಸ್
ಮಾರ್ಕಸ್ ಟ್ರೆಸ್ಕೊಥಿಕ್ - 58 ಇನ್ನಿಂಗ್ಸ್
ಮುಹಮ್ಮದ್ ವಸೀಮ್ - 58 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ - 59 ಇನ್ನಿಂಗ್ಸ್
ಐಪಿಎಲ್‌ನಲ್ಲಿ ಅತಿ ವೇಗದ 2 ಸಾವಿರ ರನ್
ಕ್ರಿಸ್ ಗೇಲ್-48 ಇನಿಂಗ್ಸ್
ಶಾನ್ ಮಾರ್ಷ್-52 ಇನಿಂಗ್ಸ್
ಋತುರಾಜ್ ಗಾಯಕ್ವಾಡ್- 57 ಇನಿಂಗ್ಸ್
ಕೆ.ಎಲ್ ರಾಹುಲ್-60 ಇನಿಂಗ್ಸ್
ಯಶಸ್ವಿ ಜೈಸ್ವಾಲ್- 62 ಇನಿಂಗ್ಸ್