ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ಸೂಪರ್‌ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

IPL 2025: ರಾಯಲ್ಸ್‌ ಚಾಲೆಂಜರ್ಸ್‌ ತಂಡ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌, ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿದೆ. ನಿಕೋಲಸ್‌ ಪೂರನ್‌ ಆರೆಂಜ್‌ ಕ್ಯಾಪ್‌, ನೂರ್‌ ಅಹ್ಮದ್‌ ಪರ್ಪಲ್‌ ಕ್ಯಾಪ್‌ ಪಡೆದಿದ್ದಾರೆ.

ಸೂಪರ್‌ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

Profile Abhilash BC Apr 17, 2025 6:19 AM

ನವದೆಹಲಿ: ರಾಜಸ್ಥಾನ್‌ ರಾಯಲ್ಸ್‌(Rajasthan Royals) ವಿರುದ್ಧ ಸೂಪರ್‌ ಓವರ್‌ನಲ್ಲಿ ಸೂಪರ್‌ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2025 Points Table) ಮತ್ತೆ ಅಗ್ರಸ್ಥಾನ ಪಡೆದುಕೊಂಡಿದೆ. ಅಗ್ರಸ್ಥಾನದಲ್ಲಿದ್ದ ಗುಜರಾತ್‌ ಟೈಟಾನ್ಸ್‌ ದ್ವಿತೀಯ ಸ್ಥಾನಕ್ಕೆ ಜಾರಿದೆ. ಸೋಲು ಕಂಡ ರಾಜಸ್ಥಾನ್‌ ರಾಯಲ್ಸ್‌ ತಂಡ 8ನೇ ಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಪಂದ್ಯದಲ್ಲಿ 9ನೇ ಸ್ಥಾನಿಯಾದ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು 7ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್‌ ಸೆಣಸಾಟ ನಡೆಸಲಿದೆ.

ರಾಯಲ್ಸ್‌ ಚಾಲೆಂಜರ್ಸ್‌ ತಂಡ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌, ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿದೆ. ನಿಕೋಲಸ್‌ ಪೂರನ್‌ ಆರೆಂಜ್‌ ಕ್ಯಾಪ್‌, ನೂರ್‌ ಅಹ್ಮದ್‌ ಪರ್ಪಲ್‌ ಕ್ಯಾಪ್‌ ಪಡೆದಿದ್ದಾರೆ.

ಅಂಕಪಟ್ಟಿ ಹೀಗಿದೆ



ಡೆಲ್ಲಿಗೆ ಸೂಪರ್‌ ಗೆಲುವು

ಅರುಣ್‌ ಜೇಟ್ಲಿ ಕ್ರಿಕೆಟ್‌ ,ಮೈದಾನದಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ 5 ವಿಕೆಟ್‌ಗೆ 188 ರನ್‌ ಬಾರಿಸಿದರೆ, ರಾಜಸ್ಥಾನ್‌ ಆರಂಭದಿಂದಲೇ ಅಬ್ಬರಿಸುತ್ತ ಹೋದರೂ ಅಂತಿಮವಾಗಿ 4 ವಿಕೆಟಿಗೆ 188 ರನ್‌ ಗಳಿಸಿ ಪಂದ್ಯ ಟೈ ಗೊಂಡಿತು.

ಸೂಪರ್ ಓವರ್​​ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್ 11 ರನ್​ಗಳಿಸಿತು. 12 ರನ್​ಗಳ ಸೂಪರ್​ ಓವರ್​ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 4 ಎಸೆತಗಳಲ್ಲಿ 13 ರನ್​ಗಳಿಸಿ ಗೆಲುವು ಸಾಧಿಸಿತು. ಡೆಲ್ಲಿ ಪರ ರಾಹುಲ್ 7, ಟ್ರಿಸ್ಟಾನ್ ಸ್ಟಬ್ಸ್ 6 ರನ್​ಗಳಿಸಿದರು.