ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026 Final: ಈ ಸಲನೂ ಕಪ್‌ ನಮ್ಮದಾಗಲಿ...

IPL 2026 Final Preview: ಆರ್‌ಸಿಬಿಯ ಇನ್ನೊಂದು ಪ್ಲಸ್‌ ಪಾಯಿಂಟ್‌ ಎಂದರೆ ಪಾಟಿದಾರ್ ನಾಯಕತ್ವ. ಬದಲಿ ಆಟಗಾರನಾಗಿ ತಂಡ ಸೇರಿದ್ದ ಅವರು 2025ರಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಚೊಚ್ಚಲ ಸೀಸನ್‌ನಲ್ಲೇ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಅವರು, ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ.

ಈ ಸಲನೂ ಕಪ್‌ ನಮ್ಮದಾಗಲಿ; ಹೇಗಿದೆ ತಂಡದ ಬಲಾಬಲ?

RCB vs GT -

Abhilash BC
Abhilash BC May 30, 2026 5:11 PM

ಅಹಮದಾಬಾದ್‌, ಮೇ 30: ಸರಿ ಸುಮಾರು ಮೂರು ತಿಂಗಳು ದೇಶಾದ್ಯಂತ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ನೀಡಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026 Final)ನ 19ನೇ ಆವೃತ್ತಿಗೆ ಭಾನುವಾರ ತೆರೆ ಬೀಳಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯವನ್ನಾಡಲು ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಆತಿಥೇಯ ಗುಜರಾತ್‌ ಟೈಟಾನ್ಸ್‌(RCB vs GT Final) ಸಜ್ಜಾಗಿ ನಿಂತಿದೆ. ತಂಡದ ಇದುವರೆಗಿನ ಪ್ರದರ್ಶನ ನೋಡುವಾಗ ಈ ಬಾರಿಯೂ ಆರ್‌ಸಿಬಿ ಕಪ್‌ ಗೆಲ್ಲುವ ಫೇವರಿಟ್‌ ಆಗಿದೆ. ಅಲ್ಲದೆ ಈ ಬಾರಿಯೂ ಕಪ್‌ ನಮ್ಮದಾಗಲಿ ಎನ್ನುವುದು ಕನ್ನಡಿಗರ ಮತ್ತು ಆರ್‌ಸಿಬಿ ಅಭಿಮಾನಿಗಳ ಆಶಯ.

ಆರ್‌ಸಿಬಿಯೇ ಫೇವರಿಟ್‌

2025 ರವರೆಗೆ ಐಪಿಎಲ್‌ನ ಬಲಿಷ್ಠ ತಂಡಗಳು ಎಂದ ತಕ್ಷಣ, ನೆನಪಿಗೆ ಬರುತ್ತಿದ್ದದ್ದು ಐದು ಬಾರಿಯ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು. ಆದರೆ, ಈಗ ಸಮಯ ಬದಲಾಗಿದೆ. 2025ರಿಂದ ಬಲಿಷ್ಠ ತಂಡ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದು ಹೇಳುವಂತಾಗಿದೆ. ಈ ಬಾರಿಯೂ ತಂಡದ ಪ್ರದರ್ಶನ ಉತ್ಕೃಷ್ಟ ಮಟ್ಟದಲ್ಲಿದೆ. ಲೀಗ್‌ ಹಂತದಲ್ಲಿ 14 ಪಂದ್ಯ ಮತ್ತು ಒಂದು ಕ್ವಾಲಿಫೈಯರ್‌ ಸೇರಿ ಒಟ್ಟು 10 ಪಂದ್ಯಗಳನ್ನು ಗೆದ್ದು ಬೀಗಿದೆ. ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನ ಪಡೆದಿತ್ತು. ತಂಡದ ಬ್ಯಾಟಿಂಗ್, ಬೌಲಿಂಗ್, ಕ್ಷೇತ್ರ ರಕ್ಷಣೆ ಹೀಗೆ ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.



ಆರ್‌ಸಿಬಿ ಬ್ಯಾಟಿಂಗ್ ವಿಭಾಗ

ಗುಜರಾತ್‌ ತಂಡಕ್ಕೆ ಹೋಲಿಸಿದರೆ ಆರ್‌ಸಿಬಿ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಈ ಹಿಂದೆ ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ ಮತ್ತು ಕೆಲ ಆಟಗಾರರ ಮೇಲೆ ಹೆಚ್ಚು ಅವಲಂಬನೆಯನ್ನು ಹೊಂದಿತ್ತು. ಆದರೆ, ಈಗ ಆ ಕಾಲ ಬದಲಾಗಿದೆ ವಿರಾಟ್ ಉತ್ತಮ ಪ್ರದರ್ಶನ ತೋರದೇ ಇದ್ದರು ಕೂಡ, ಪಡಿಕ್ಕಲ್, ಸಾಲ್ಟ್, ಟಿಮ್ ಡೇವಿಡ್, ನಾಯಕ ರಜತ್‌ ಪಾಟೀದಾರ್‌, ಆಲ್‌ ರೌಂಡರ್‌ ಕೃನಾಲ್‌ ಪಾಂಡ್ಯರಂತಹ ಆಟಗಾರರು ಇದ್ದು, ತಂಡದ ನೆರವಿಗೆ ಬರಲಿದ್ದಾರೆ. ಈ ಬಾರಿ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ ಉತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿ 600 ರನ್‌ ಕಲೆ ಹಾಕಿದ್ದಾರೆ. ಪಾಟೀದಾರ್‌ 486 ರನ್‌ ಗಳಿಸಿದ್ದಾರೆ.

ಐಪಿಎಲ್‌ ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಬೌಲಿಂಗ್‌ ವಿಭಾಗ

ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡದ ಬೌಲಿಂಗ್ ಶಕ್ತಿ. ಇವರ ಜತೆಗೆ ಚಾಂಪಿಯನ್‌ ಬೌಲರ್‌ ಜೋಶ್ ಹ್ಯಾಜಲ್‌ವುಡ್, ಜೇಕಬ್ ಡಫಿ, ಸುಯಾಶ್ ಶರ್ಮಾ, ಕೃಣಾಲ್ ಪಾಂಡ್ಯರಂತಹ ಆಟಗಾರರು, ಎದುರಾಳಿ ತಂಡದ ಬ್ಯಾಟರ್‌ಗಳ ಮೇಲೆ ಹಿಡಿತ ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಸ್ತುತ ಈ ಎಲ್ಲಾ ಆಟಗಾರರು ಕೂಡ ಅದ್ಭುತ ಲಯದಲ್ಲಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ಅತ್ಯಧಿಕ ವಿಕೆಟ್‌ ಕಿತ್ತ ಯಾದಿಯಲ್ಲಿ ಭುವನೇಶ್ವರ್‌ ಕುಮಾರ್‌(26) ಎರಡನೇ ಸ್ಥಾನದಲ್ಲಿದ್ದಾರೆ.



ಪಾಟೀದಾರ್‌ ನಾಯಕತ್ವ

ಆರ್‌ಸಿಬಿಯ ಇನ್ನೊಂದು ಪ್ಲಸ್‌ ಪಾಯಿಂಟ್‌ ಎಂದರೆ ಪಾಟಿದಾರ್ ನಾಯಕತ್ವ. ಬದಲಿ ಆಟಗಾರನಾಗಿ ತಂಡ ಸೇರಿದ್ದ ಅವರು 2025ರಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಚೊಚ್ಚಲ ಸೀಸನ್‌ನಲ್ಲೇ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಅವರು, ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಈ ಬಾರಿಯ ಐಪಿಎಲ್‌ನಲ್ಲಿ ಅವರು, ಆಡಿರುವ 14 ಪಂದ್ಯಗಳಿಂದ 44 ರ ಸರಾಸರಿ ಮತ್ತು 197ರ ಸ್ಟ್ರೈಕ್‌ರೇಟ್‌ನಲ್ಲಿ 486 ರನ್‌ ಕಲೆಹಾಕಿದ್ದಾರೆ. ಕ್ವಾಲಿಫೈಯರ್ ಪಂದ್ಯದಲ್ಲಿ ತಂಡ 94 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಇಳಿದ ಪಾಟಿದಾರ್, 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿ ಮಿಂಚಿದ್ದರು.

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

ಐಪಿಎಲ್‌ನಲ್ಲಿ ಇದುವರೆಗೆ ಇಬ್ಬರು ನಾಯಕರುಗಳು ಮಾತ್ರ, ತಮ್ಮ ತಂಡಗಳನ್ನು ಸತತ ಎರಡು ಬಾರಿ ಚಾಂಪಿಯನ್ ಮಾಡಿದ್ದಾರೆ. ಧೋನಿ (2010 ಮತ್ತು 2011) ಹಾಗೂ ರೋಹಿತ್ ಶರ್ಮಾ (2019, 2020). ಇದೀಗ ಆರ್‌ಸಿಬಿ ಫೈನಲ್‌ ಗೆದ್ದರೆ, ಪಾಟಿದಾರ್ ಕೂಡ ರೋಹಿತ್‌ ಮತ್ತು ಧೋನಿಯ ಸಾಲಿಗೆ ಸೇರಲಿದ್ದಾರೆ.