ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs KKR: ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ; ಆರ್‌ಸಿಬಿಗೆ ಪ್ಲೇ-ಆಫ್‌ ಪ್ರವೇಶಿಸುವ ಇರಾದೆ

IPL 2026: ಸತತ ಎರಡು ಬಾರಿ ಸೊನ್ನೆ ಸುತ್ತಿರುವ ವಿರಾಟ್‌ ಕೊಹ್ಲಿ ಬುಧವಾರ ಮತ್ತೆ ಬಲವಾಗಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ಜಾಕೋಬ್ ಬೆಥೆಲ್ ಫಿಲ್ ಸಾಲ್ಟ್ ಸ್ಥಾನವನ್ನು ತುಂಬಲು ಪದೇಪದೆ ವಿಫಲವಾಗುತ್ತಿದ್ದಾರೆ. ಹೀಗಾಗಿ ಕೊಹ್ಲಿ ಜತೆ ದೇವದತ್ತ ಪಡಿಕ್ಕಲ್‌ ಇನಿಂಗ್ಸ್‌ ಆರಂಭಿಸಿದರೂ ಅಚ್ಚರಿಯಲ್ಲ.

ಪ್ಲೇ-ಆಫ್‌ ಪ್ರವೇಶಿಸುವ ವಿಶ್ವಾಸದಲ್ಲಿ ಆರ್‌ಸಿಬಿ; ನಾಳೆ ಕೆಕೆಆರ್‌ ಎದುರಾಳಿ

Royal Challengers Bengaluru vs Kolkata Knight Riders -

Abhilash BC
Abhilash BC May 12, 2026 2:18 PM

ರಾಯ್ಪುರ, ಮೇ 12: ಬುಧವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026 ರ 57 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs KKR) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗಲಿವೆ. ಆರ್‌ಸಿಬಿಗೆ ಗೆದ್ದರೆ ಪ್ಲೇ-ಆಫ್‌ ಸ್ಥಾನ ಅಧಿಕೃತವಾಗಲಿದೆ. ಅತ್ತ ಕೆಕೆಆರ್‌ಗೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯ ಗೆಲ್ಲಲ್ಲೇ ಬೇಕು.

ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು ಪ್ರಸ್ತುತ 11 ಪಂದ್ಯಗಳಿಂದ ಏಳು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅವರು ತಮ್ಮ ಕೊನೆಯ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದ್ದಾರೆ. ಅವರ ಇತ್ತೀಚಿನ ಪಂದ್ಯದಲ್ಲಿ, ಅವರು ಕೊನೆಯ ಎಸೆತದಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ್ದರು. ಭುವನೇಶ್ವರ್ ಕುಮಾರ್ ತಮ್ಮ ಆಲ್‌ರೌಂಡ್ ಸಾಹಸದಿಂದ ಮಿಂಚಿದರೆ, ಕೃನಾಲ್ ಪಾಂಡ್ಯ ಅರ್ಧಶತಕ ಗಳಿಸಿದ್ದರು.

ಸತತ ಎರಡು ಬಾರಿ ಸೊನ್ನೆ ಸುತ್ತಿರುವ ವಿರಾಟ್‌ ಕೊಹ್ಲಿ ಬುಧವಾರ ಮತ್ತೆ ಬಲವಾಗಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ. ಜಾಕೋಬ್ ಬೆಥೆಲ್ ಫಿಲ್ ಸಾಲ್ಟ್ ಸ್ಥಾನವನ್ನು ತುಂಬಲು ಪದೇಪದೆ ವಿಫಲವಾಗುತ್ತಿದ್ದಾರೆ. ಹೀಗಾಗಿ ಕೊಹ್ಲಿ ಜತೆ ದೇವದತ್ತ ಪಡಿಕ್ಕಲ್‌ ಇನಿಂಗ್ಸ್‌ ಆರಂಭಿಸಿದರೂ ಅಚ್ಚರಿಯಲ್ಲ. ಗಾಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದಾಗಿನಿಂದ ಜೋಶ್ ಹ್ಯಾಜಲ್‌ವುಡ್ ಕೂಡ ಅಷ್ಟೊಂದು ಮಾರಕವಾಗಿಲ್ಲ. ಭುವನೇಶ್ವರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಬೇಕು.

ರೋಮ್ ಡೈಮಂಡ್ ಲೀಗ್‌ನಿಂದ ಹೊರಗುಳಿದ ನೀರಜ್‌ ಚೋಪ್ರಾ; ಸಚಿನ್‌ ಯಾದವ್‌ ಪದಾರ್ಪಣೆ

ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡವು 10 ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಐದು ಸೋಲುಗಳನ್ನು ಕಂಡಿದೆ. ಪ್ಲೇಆಫ್‌ಗೆ ಮುನ್ನಡೆಯಲು ಅವರಿಗೆ ಉಳಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಅತ್ಯಗತ್ಯ. ಫಿನ್ ಅಲೆನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಶತಕ ಗಳಿಸಿದರು. ಹೀಗಾಗಿ ತಂಡ ಅವರ ಮೇಲೆ ಹೆಚ್ಚಿನ ಭರವಸೆ ಇರಿಸಿದೆ.

ರಾಯ್‌ಪುರ ಸ್ಟೇಡಿಯಂನ ಅಂಕಿ ಅಂಶಗಳು

ಆಡಿದ ಪಂದ್ಯಗಳು 7

ಮೊದಲ ಬ್ಯಾಟಿಂಗ್ ಗೆಲುವು- 2

ಎರಡನೇ ಬ್ಯಾಟಿಂಗ್ ಗೆಲವು- 5

ಟಾಸ್ ಗೆದ್ದ ಪಂದ್ಯಗಳು ಗೆಲುವು- 4

ಟಾಸ್ ಸೋತ ಪಂದ್ಯಗಳು ಗೆಲುವು- 3

ಫಲಿತಾಂಶವಿಲ್ಲದ ಪಂದ್ಯಗಳು 0

ಗರಿಷ್ಠ ಒಟ್ಟು ಮೊತ್ತ- 167/8

ಕಡಿಮೆ ಒಟ್ಟು ಮೊತ್ತ- 119/6

ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ- 149

ಗರಿಷ್ಠ ಮೊತ್ತದ ಯಶಸ್ವಿ ಚೇಸಿಂಗ್‌- 167/8(ಆರ್‌ಸಿಬಿ)