ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೈದಾನದಲ್ಲೇ ಕೃನಾಲ್‌-ಪೂರನ್‌ ಮಧ್ಯೆ ದೃಷ್ಟಿ ಯುದ್ಧ; ವಿಡಿಯೊ ವೈರಲ್‌

IPL 2026: ಏಕನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮಾರ್ಷ್‌ ಅವರ ಶತಕದ ಬಲದಿಂದ ಲಖನೌ ತಂಡವು 19 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 6 ವಿಕೆಟ್‌ಗೆ 203 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಬೌನ್ಸರ್‌ ಎಸೆದು ಮೈದಾನದಲ್ಲೇ ಕೃನಾಲ್‌-ಪೂರನ್‌ ಮಧ್ಯೆ ದೃಷ್ಟಿ ಯುದ್ಧ

Nicholas Pooran-Krunal Pandya -

Abhilash BC
Abhilash BC May 8, 2026 9:19 AM

ಲಖನೌ, ಮೇ 8: ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್(LSG vs RCB) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪಂದ್ಯ ನಡೆದಾಗ ಅದು ಯಾವಾಗಲೂ ಬಿಸಿ ಬಿಸಿಯಾಗಿರುತ್ತದೆ. ಗುರುವಾರ ನಡೆದಿದ್ದ 2026ರ(IPL 2026) ಋತುವಿನ ಐಪಿಎಲ್‌ನ 50ನೇ ಪಂದ್ಯದಲ್ಲಿ ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ನಡುವೆ ಉದ್ವಿಗ್ನ ವಾಗ್ವಾದ ನಡೆಯಿತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆಟದ ಹತ್ತನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಪೂರನ್ ಅವರನ್ನು ಕೃನಾಲ್ ಪಾಂಡ್ಯ ಅವರು ಎರಡು ಬೌನ್ಸರ್‌ಗಳೊಂದಿಗೆ ಸ್ವಾಗತಿಸಿದರು. ಮೊದಲನೆ ಬೌನ್ಸರ್‌ಗೆ ಪೂರನ್‌ ಯಾವುದೇ ರನ್‌ ತೆಗೆಯಲಿಲ್ಲ. ಮುಂದಿನ ಬೌನ್ಸರ್‌ನಲ್ಲಿ ಸಿಂಗಲ್‌ಗೆ ಪಡೆಯಲು ಪೂರನ್ ಒಂದು ವಿಚಿತ್ರ ಹೊಡೆತವನ್ನು ಆಡಬೇಕಾಯಿತು. ಸಿಂಗಲ್‌ ತೆಗೆದು ನಾನ್‌ಸ್ಟ್ರೈಕ್‌ಗೆ ಬಂದಾಗ, ಪೂರನ್ ಮತ್ತು ಪಾಂಡ್ಯ ನಡುವೆ ಮಾತಿನ ಚಕಮಕಿ ನಡೆಯಿತು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕೃನಾಲ್ ಅವರ ಹತ್ತಿರ ಬಂದು ಗುರಾಯಿಸಿ ನೋಡಿದರು.

ಏತನ್ಮಧ್ಯೆ, ಮಳೆಯಿಂದಾಗಿ ಪಂದ್ಯವನ್ನು ಪ್ರತಿ ತಂಡಕ್ಕೆ 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮಿಚೆಲ್ ಮಾರ್ಷ್ 2026 ರ ಋತುವಿನ ತಮ್ಮ ಮೊದಲ ಶತಕವನ್ನು ಗಳಿಸಿದರು. 56 ಎಸೆತಗಳಲ್ಲಿ 111 ರನ್ ಗಳಿಸಿದರು. ಆದರೆ ಪೂರನ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ಸೂಪರ್ ಜೈಂಟ್ಸ್ ತಮ್ಮ ಇನ್ನಿಂಗ್ಸ್ ಅನ್ನು 209/3 ಕ್ಕೆ ಮುಗಿಸಿತು. ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ನಾಯಕ ರಿಷಭ್ ಪಂತ್ 10 ಎಸೆತಗಳಲ್ಲಿ 32 ರನ್ ಗಳಿಸಿದರು.



ಏಕನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮಾರ್ಷ್‌ ಅವರ ಶತಕದ ಬಲದಿಂದ ಲಖನೌ ತಂಡವು 19 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 6 ವಿಕೆಟ್‌ಗೆ 203 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರ್‌ಸಿಬಿ ತಂಡ ಆರಂಭಿಕ ಹಂತದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಜೇಕಬ್‌ ಬೆಥೆಲ್‌ (4) ಹಾಗೂ ವಿರಾಟ್‌ ಕೊಹ್ಲಿ (0) ವಿಕೆಟ್‌ ಕಳೆದುಕೊಂಡಿತು. ಇವರಿಬ್ಬರು ಔಟಾದಾಗ ತಂಡದ ಮೊತ್ತ ಕೇವಲ 9. ಸಂಕಷ್ಟದಲ್ಲಿದ್ದ ಆರ್‌ಸಿಬಿ ತಂಡಕ್ಕೆ ನಾಯಕ ರಜತ್ ಪಾಟೀದಾರ್ (61) ಹಾಗೂ ದೇವದತ್ತ ಪಡಿಕ್ಕಲ್‌ (34) ಮೂರನೇ ವಿಕೆಟ್‌ಗೆ 95 ರನ್‌ ಜೊತೆಯಾಟವಾಡಿ ಆಸರೆಯಾದರು.

ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕೊಹ್ಲಿ; ಬೌಲಿಂಗ್‌ ಸಲಹೆ ನೀಡಿ ಶೂನ್ಯಕ್ಕೆ ಔಟ್‌

ಇದಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಮತ್ತು ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರನ್ನು ಬಿಟ್ಟರೆ ಉಳಿದ ಬೌಲರ್‌ಗಳು ದುಬಾರಿಯಾದರು. ಎಲ್ಲರಿಗೂ ಮಾರ್ಷ್ ಬಿಸಿ ಮುಟ್ಟಿಸಿದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಮಾರ್ಷ್‌ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟಾರೆ ಅವರು ತಲಾ 9 ಬೌಂಡರಿ ಮತ್ತು ಸಿಕ್ಸರ್‌ ಬಾರಿಸಿದರು.