ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಪಿಎಲ್ 2026 ಪ್ಲೇ-ಆಫ್‌ ಅರ್ಹತಾ ಸನ್ನಿವೇಶಗಳು; ಒಂದು ಸ್ಥಾನಕ್ಕೆ ಐದು ತಂಡಗಳ ಪೈಪೋಟಿ

IPL 2026 Qualification Scenarios: ಡೆಲ್ಲಿ ತಂಡ ಕಳಪೆ ರನ್‌ರೇಟ್‌ ಹೊಂದಿರುವ ಕಾರಣ ತಂಡಕ್ಕೆ ದೊಡ್ಡ ಗೆಲುವು ಮತ್ತು ಪಂಜಾಬ್‌, ಸಿಎಸ್‌ಕೆ ಮತ್ತು ರಾಜಸ್ಥಾನ್‌ ಮುಂದಿನ ಪಂದ್ಯಗಳಲ್ಲಿ ಹೀನಾಯ ಸೋಲು ಕಾಣಬೇಕು. ಅವರ ರನ್‌ರೇಟ್‌ ಕುಸಿದರೆ ಆಗ ತಂಡಕ್ಕೆ ಪ್ಲೇ ಆಫ್‌ ಸ್ಥಾನವೊಂದು ಸಿಗುವ ಸಾಧ್ಯತೆ ಇದೆ.

ಒಂದು ಪ್ಲೇಆಫ್ ಸ್ಥಾನಕ್ಕೆ ಐದು ತಂಡಗಳ ಪೈಪೋಟಿ; ಹೀಗಿದೆ ಲೆಕ್ಕಾಚಾರ

Urvil Patel -

Abhilash BC
Abhilash BC May 19, 2026 7:31 AM

ಬೆಂಗಳೂರು, ಮೇ 19: ಭಾನುವಾರ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2026(IPL 2026) ರಲ್ಲಿ ಪ್ಲೇಆಫ್ ಸ್ಥಾನವನ್ನು ಗಳಿಸಿದ ಮೊದಲ ತಂಡವಾಯಿತು. ಒಂದು ದಿನದ ನಂತರ(ಸೋಮವಾರ), ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ಗೆಲುವು ಸಾಧಿಸುವ ಮೂಲಕ ತಾನು ಮಾತ್ರವಲ್ಲದೆ ಗುಜರಾತ್ ಟೈಟಾನ್ಸ್ ಕೂಡ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿಕೊಂಡವು. ಲೀಗ್ ಹಂತದ ಏಳು ಪಂದ್ಯಗಳು ಇನ್ನೂ ಬಾಕಿ ಉಳಿದಿರುವಾಗ, ಅಂತಿಮ ಪ್ಲೇಆಫ್ ಸ್ಥಾನಕ್ಕಾಗಿ ಐದು ತಂಡಗಳು(IPL 2026 Qualification Scenarios) ಪೈಪೋಟಿಯಲ್ಲಿವೆ. ಪ್ರಸ್ತುತ ಸ್ಥಾನಗಳು ಮತ್ತು ಅರ್ಹತಾ ಸನ್ನಿವೇಶಗಳ ನೋಟ ಇಲ್ಲಿದೆ.

ಪಂಜಾಬ್‌ ಕಿಂಗ್ಸ್‌

ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಪಂಜಾಬ್‌ನ ಪ್ಲೇಆಫ್ ನಿರೀಕ್ಷೆಗೆ ಮತ್ತೊಂದು ಹೊಡೆತ ಬಿದ್ದಿತು. ತಂಡಕ್ಕೆ ಇನ್ನು ಒಂದು ಪಂದ್ಯ ಬಾಕಿ ಇದೆ. ಎಲ್‌ಎಸ್‌ಜಿ ವಿರುದ್ಧ. ಈ ಪಂಯ ಗೆದ್ದರೆ 15 ಅಂಕಗಳನ್ನು ಕಲೆ ಹಾಕಬಹುದು. ಜತೆಗೆ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಿದೆ. ರಾಜಸ್ಥಾನ್‌ ಮತ್ತು ಕೆಕೆಆರ್‌ಗೂ 15 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಅವಕಾಶ ಹೊಂದಿರುವ ಕಾರಣ ರಾಜಸ್ಥಾನ್‌ ಮತ್ತು ಕೆಕೆಆರ್‌ ಮುಂದಿನ ಪಂದ್ಯ ಸೋಲಬೇಕು. ಆರ್‌ಆರ್ ಎರಡೂ ಪಂದ್ಯಗಳನ್ನು ಸೋತರೆ, ಜಿಟಿ ಸಿಎಸ್‌ಕೆಯನ್ನು ಸೋಲಿಸಬೇಕು.

CSK vs SRH: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೋಲು, ಸನ್‌ರೈಸರ್ಸ್‌ ಹೈದರಾಬಾದ್‌, ಗುಜರಾತ್‌ ಟೈಟನ್ಸ್‌ಗೆ ಪ್ಲೇಆಫ್ಸ್‌ ಟಿಕೆಟ್‌!

ರಾಜಸ್ಥಾನ ರಾಯಲ್ಸ್

ರಾಜಸ್ಥಾನ್‌ ತಂಡವು ಕಳೆದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋತಿದೆ. ಆದರೆ ಅವರ ಪ್ಲೇಆಫ್ ಭವಿಷ್ಯ ಇನ್ನೂ ಜೀವಂತವಾಗಿದೆ. ಅವರು ಹೊರಬಿದ್ದ ತಂಡಗಳಾದ ಲಖನೌ ಮತ್ತು ಮುಂಬೈ ವಿರುದ್ಧ ಎರಡು ಪಂದ್ಯಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅವರು ಎರಡನ್ನೂ ಗೆದ್ದರೆ 16 ಅಂಕಗಳನ್ನು ತಲುಪಿ ಪ್ಲೇ ಆಫ್‌ ಅರ್ಹತೆ ಪಡೆಯಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್

ಸನ್‌ರೈಸರ್ಸ್‌ ವಿರುದ್ಧದ ಸೋಲಿನಿಂದಾಗಿ ಸಿಎಸ್‌ಕೆ ಕೇವಲ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಅದು ಗುಜರಾತ್‌ ಟೈಟಾನ್ಸ್‌ ವಿರುದ್ಧ. ತಂಡ ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ, ಅಂತಿಮ ಪಂದ್ಯವನ್ನು ಗೆಲ್ಲಬೇಕು, ಮತ್ತು ರಾಜಸ್ಥಾನ್‌, ಪಂಜಾಬ್‌ ಮತ್ತು ಕೆಕೆಆರ್‌ ಎಲ್ಲರೂ ಸೋಲಬೇಕು.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ತಂಡ ಕಳಪೆ ರನ್‌ರೇಟ್‌ ಹೊಂದಿರುವ ಕಾರಣ ತಂಡಕ್ಕೆ ದೊಡ್ಡ ಗೆಲುವು ಮತ್ತು ಪಂಜಾಬ್‌, ಸಿಎಸ್‌ಕೆ ಮತ್ತು ರಾಜಸ್ಥಾನ್‌ ಮುಂದಿನ ಪಂದ್ಯಗಳಲ್ಲಿ ಹೀನಾಯ ಸೋಲು ಕಾಣಬೇಕು. ಅವರ ರನ್‌ರೇಟ್‌ ಕುಸಿದರೆ ಆಗ ತಂಡಕ್ಕೆ ಪ್ಲೇ ಆಫ್‌ ಸ್ಥಾನವೊಂದು ಸಿಗುವ ಸಾಧ್ಯತೆ ಇದೆ.

ಕೋಲ್ಕತಾ ನೈಟ್‌ರೈಡರ್ಸ್‌

5 ತಂಡಗಳ ಪೈಕಿ ರಾಜ್ಥಾನ್‌ ಹೊರತುಪಡಿಸಿದರೆ ಹೆಚ್ಚಿನ ಅವಕಾಶ ಇರುವುದು ಕೆಕೆಆರ್‌ಗೆ. ತಂಡಕ್ಕೆ ಎರಡು ಪಂದ್ಯಗಳು ಬಾಕಿ ಇದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್‌ ಒಂದು ಪಂದ್ಯ ಸೋತರೂ ಕೆಕೆಆರ್‌ ಪ್ಲೇ ಆಫ್‌ ಪ್ರವೇಶ ಪಡೆಯಲಿದೆ.