ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RR vs GT: ಗುಜರಾತ್‌-ರಾಜಸ್ಥಾನ್‌ ಹೈವೋಲ್ಟೇಜ್‌ ಕ್ವಾಲಿಫೈಯರ್‌-2 ಪಂದ್ಯ ಯಾವಾಗ?

IPL 2026 Qualifier 2: ಗುಜರಾತ್-ಹೈದರಾಬಾದ್‌ ನಡುವಿನ ಹೈವೋಲ್ಟೇಜ್ ಕ್ವಾಲಿಫೈರ್‌-2 ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದೆ. ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ಟಾಸ್‌ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ. ಪಂದ್ಯದ ಇನಿಂಗ್ಸ್‌ ಬ್ರೇಕ್‌ ಸಮಯದಲ್ಲಿ ಮನರಂಜನಾ ಕಾರ್ಯಕ್ರಮ ಕೂಡ ನಡೆಯಲಿದೆ.

ಗುಜರಾತ್‌-ರಾಜಸ್ಥಾನ್‌ ಕ್ವಾಲಿಫೈಯರ್‌-2 ಪಂದ್ಯದ ಮಳೆ ನಿಯಮ ಹೇಗಿದೆ?

IPL 2026 Qualifier 2 -

Abhilash BC
Abhilash BC May 28, 2026 10:30 AM

ಮುಲ್ಲನ್‌ಪುರ, ಮೇ 28: ರಾಜಸ್ಥಾನ ರಾಯಲ್ಸ್ ತಂಡ 19ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 47 ರನ್‌ಗಳ ಗೆಲುವು ದಾಖಲಿಸು ಮೂಲಕ ಹಾಲಿ ಆವೃತ್ತಿಯ ಐಪಿಎಲ್‌(IPL 2026)ನಲ್ಲಿ ತನ್ನ ಪ್ರಶಸ್ತಿ ಗೆಲ್ಲುವ ಗುರಿಯನ್ನು ಜೀವಂತವಿರಿಸಿದೆ. ರಿಯಾನ್ ಪರಾಗ್ ಬಳಗ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್‌(IPL 2026 Qualifier 2)ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.

ಲೀಗ್ ಹಂತ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋಲು ಅನುಭವಿಸಿತ್ತು. ಇದೀಗ ಕ್ವಾಲಿಫೈಯರ್-2 ಪಂದ್ಯದಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ಸಿದ್ಧವಾಗಿ ನಿಂತಿದೆ.

ಮೂರನೇ ಮುಖಾಮುಖಿ

ಹಾಲಿ ಆವೃತ್ತಿಯಲ್ಲಿ ಇತ್ತಂಡಗಳ ಮೂರನೇ ಮುಖಾಮುಖಿ ಇದಾಗಿದೆ. ಲೀಗ್‌ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ವೇಳೆ ತಲಾ ಒಂದು ಪಂದ್ಯ ಗೆದ್ದಿದೆ. ಇದೀಗ ಮೂರನೇ ಬಾರಿಯ ಸೆಣಸಾಟದಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದು ಪಂದ್ಯದ ಕೌತುಕ.

ಮಳೆ ಬಂದರೆ...

ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರಸಿಂಗ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಮಳೆ ಅಡಚಣೆ ಇಲ್ಲವಾಗಿತ್ತು. ಹೀಗಾಗಿ ಇಲ್ಲೇ ನಡೆಯುವ ಕ್ವಾಲಿಫೈಯರ್‌-2 ಪಂದ್ಯಕ್ಕೂ ಸದ್ಯ ಯಾವುದೇ ಮಳೆ ಭೀತಿ ಇಲ್ಲ. ಒಂದೊಮ್ಮೆ ಅಕಾಲಿಕ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿ ಪಂದ್ಯ ಸಂಪೂರ್ಣವಾಗಿ ರದ್ದಾದರೆ. ಮೀಸಲು ದಿನ ಇರದ ಕಾರಣ ಲೀಗ್‌ ಹಂತದಲ್ಲಿ ಮುಂದಿದ್ದ ತಂಡವನ್ನು ಜಯಶಾಲಿ ಎಂದು ನಿರ್ಧರಿಸಲಾಗುತ್ತದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಗುಜರಾತ್‌ ಆಗ ಫೈನಲ್‌ ಪ್ರವೇಶ ಪಡೆಯಲಿದೆ. ರಾಜಸ್ಥಾನ್‌ ನಾಲ್ಕನೇ ಸ್ಥಾನ ಪಡೆದಿತ್ತು.

RR vs SRH: ಎಲಿಮಿನೇಟರ್‌ನಲ್ಲಿ ಹೈದರಾಬಾದ್‌ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

ಪಂದ್ಯ ಆರಂಭ

ಗುಜರಾತ್-ಹೈದರಾಬಾದ್‌ ನಡುವಿನ ಹೈವೋಲ್ಟೇಜ್ ಕ್ವಾಲಿಫೈರ್‌-2 ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದೆ. ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ಟಾಸ್‌ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ. ಪಂದ್ಯದ ಇನಿಂಗ್ಸ್‌ ಬ್ರೇಕ್‌ ಸಮಯದಲ್ಲಿ ಮನರಂಜನಾ ಕಾರ್ಯಕ್ರಮ ಕೂಡ ನಡೆಯಲಿದೆ.

ಸಂಭಾವ್ಯ ತಂಡಗಳು

ರಾಜಸ್ಥಾನ್‌ ರಾಯಲ್ಸ್‌: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿ.ಕೀ.), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೆರಾ, ದಾಸುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

ಗುಜರಾತ್‌ ಟೈಟಾನ್ಸ್‌: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ/), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.