GT vs RCB: ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ ಎಂದ ಆರ್‌ಸಿಬಿ ನಾಯಕ
IPL 2026: ಆರ್‌ಸಿಬಿ ಪರ ವಿರಾಟ್ ಕೊಹ್ಲಿ (28)ಹಾಗೂ ದೇವದತ್ತ ಪಡಿಕ್ಕಲ್ (40) ನಿರೀಕ್ಷೆ ಮೂಡಿಸಿದರೂ ಪ್ರಯೋಜನವಾಗಲಿಲ್ಲ. ಜೇಕಬ್ ಬೆಥೆಲ್ (5), ನಾಯಕ ರಜತ್ ಪಾಟೀದಾರ್ (19), ಜಿತೇಶ್ ಶರ್ಮಾ (1), ಟಿಮ್ ಡೇವಿಡ್ (9) ಹಾಗೂ ಕೃಣಾಲ್ ಪಾಂಡ್ಯ (4) ವೈಫಲ್ಯ ಅನುಭವಿಸಿದರು.
Rajat Patidar -
ಅಹಮದಾಬಾದ್, ಮೇ 1: ಗುಜರಾತ್ ಟೈಟಾನ್ಸ್ (GT) ವಿರುದ್ಧ ನಾಲ್ಕು ವಿಕೆಟ್‌ಗಳ ಸೋಲಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್(Rajat Patidar) ತಮ್ಮ ತಂಡದ ಬ್ಯಾಟಿಂಗ್ ನ್ಯೂನತೆಗಳನ್ನು ಒಪ್ಪಿಕೊಂಡರು. ಆದರೆ ಸವಾಲಿನ ಪರಿಸ್ಥಿತಿಗಳಲ್ಲಿ ಬಲವಾದ ಹೋರಾಟ ನೀಡಿದ್ದಕ್ಕಾಗಿ ಬೌಲರ್‌ಗಳನ್ನು ಶ್ಲಾಘಿಸಿದರು.
ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಪಾಟಿದಾರ್, ನಾವು ಗಳಿಸಿದ ಮೊತ್ತವು ಕಡಿಮೆಯಾಯಿತು. ಹೀಗಾಗಿ ಪಂದ್ಯದಲ್ಲಿ ಸೋಲು ಕಾಣಬೇಕಾಯಿತು. ಸೋತರೂ ಕೂಡ ನಮ್ಮ ತಂಡದ ಬೌಲರ್‌ಗಳ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು, ಏಕೆಂದರೆ ಸಣ್ಣ ಮೊತ್ತವನ್ನು ಉಳಿಸಿಕೊಳ್ಳಲು ಅವರ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ ಎಂದು ಹೇಳಿದರು. ಮಧ್ಯಮ ಓವರ್‌ಗಳಲ್ಲಿ ಆರ್‌ಸಿಬಿಯ ಕುಸಿತವೇ ಸೋಲಿಗೆ ಪ್ರಮುಖ ಕಾರಣ ಎಂದು ಪಾಟಿದಾರ್ ಹೇಳಿದರು.
'ಈ ಪಿಚ್‌ನಲ್ಲಿ ಉತ್ತಮ ಹುಲ್ಲಿನ ಹೊದಿಕೆ ಇತ್ತು, ಮತ್ತು ಅದು ವೇಗದ ಬೌಲರ್‌ಗಳಿಗೆ ಸಹಾಯ ಮಾಡಿತು. ಶುಭ್‌ಮನ್ ಆಡಿದ ರೀತಿ, ನಮ್ಮ ಮೇಲೆ ಒತ್ತಡ ಹೇರಿತು" ಎಂದು ಪಾಟೀದಾರ್ ಹೇಳಿದರು.
ಆರ್‌ಸಿಬಿ ಪರ ವಿರಾಟ್ ಕೊಹ್ಲಿ (28)ಹಾಗೂ ದೇವದತ್ತ ಪಡಿಕ್ಕಲ್ (40) ನಿರೀಕ್ಷೆ ಮೂಡಿಸಿದರೂ ಪ್ರಯೋಜನವಾಗಲಿಲ್ಲ. ಜೇಕಬ್ ಬೆಥೆಲ್ (5), ನಾಯಕ ರಜತ್ ಪಾಟೀದಾರ್ (19), ಜಿತೇಶ್ ಶರ್ಮಾ (1), ಟಿಮ್ ಡೇವಿಡ್ (9) ಹಾಗೂ ಕೃಣಾಲ್ ಪಾಂಡ್ಯ (4) ವೈಫಲ್ಯ ಅನುಭವಿಸಿದರು. ಒಂದು ಹಂತದಲ್ಲಿ 10.3 ಓವರ್‌ಗಳಲ್ಲಿ 96 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೆಳ ಕ್ರಮಾಂಕದಲ್ಲಿ ರೊಮರಿಯೊ ಶೆಫರ್ಡ್ (17), ವೆಂಕಟೇಶ್ ಐಯ್ಯರ್ (12) ಹಾಗೂ ಭುವನೇಶ್ವರ್ ಕುಮಾರ್ (15*) ಉಪಯುಕ್ತ ಇನಿಂಗ್ಸ್ ಕಟ್ಟಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು.
RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್ ಟೈಟನ್ಸ್!
ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ತಂಡವು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಜವಾಬಿತ್ತ ಗುಜರಾತ್, 15. 5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 158 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಸೋಲಿನ ಹೊರತಾಗಿಯೂ, ಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ 10 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.