ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಶ್ಮೀರಿ ಬೆಡಗಿಗೆ ಕ್ಲೀನ್‌ ಬೌಲ್ಡ್‌ ಆದ ಟೀಮ್‌ ಇಂಡಿಯಾ ಆಲ್‌ರೌಂಡರ್‌

Washington Sundar's Girlfriend: 1994 ಡಿಸೆಂಬರ್‌ 5 ರಂದು ಕಾಶ್ಮೀರಿ ಕುಟುಂಬದಲ್ಲಿ ಜನಿಸಿರುವ ಸಾಹಿಬಾ ಬಾಲಿ, ದೆಹಲಿ ವಿವಿಯಲ್ಲಿ ಅರ್ಥಶಾಸ್ತ್ರದ ಪದವೀಧರರಾಗಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ಗಮನಸೆಳೆದಿರುವ ಇವರು ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ನಂತರ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಮೂಲಕವೂ ಜನಪ್ರೀಯರಾಗಿದ್ದಾರೆ.

ಕಾಶ್ಮೀರಿ ಬೆಡಗಿಗೆ ಕ್ಲೀನ್‌ ಬೌಲ್ಡ್‌ ಆದ ಟೀಮ್‌ ಇಂಡಿಯಾ ಆಲ್‌ರೌಂಡರ್‌

Washington Sundar -

Abhilash BC
Abhilash BC Dec 18, 2025 10:04 AM

ಮುಂಬಯಿ,ಡಿ.18: ಟೀಮ್‌ ಇಂಡಿಯಾ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್(Sahiba Bali) ಈಗ ತನ್ನ ವೈಯಕ್ತಿಕ ಜೀವನದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮೂಲಗಳ ಪ್ರಕಾರ ಕ್ರೀಡಾ ನಿರೂಪಕಿ ಹಾಗೂ ಸಿನಿಮಾ ನಟಿ ಕಾಶ್ಮೀರ ಮೂಲದ ಸಾಹಿಬಾ ಬಾಲಿ(Sahiba Bali) ಅವರೊಂದಿಗೆ ವಾಷಿಂಗ್ಟನ್‌ ಸುಂದರ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರು ಕಫೆಯೊಂದರಲ್ಲಿ ಇರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕ್ರಿಕೆಟ್‌ ಟೈಮ್ಸ್‌ ವರದಿಯ ಪ್ರಕಾರ, ವಾಷಿಂಗ್ಟನ್‌ ಸುಂದರ್‌ ಹಾಗೂ ಅವರ ಕುಟುಂಬ ವೈಯಕ್ತಿಕ ವಿಚಾರಗಳನ್ನು ಅತ್ಯಂತ ಖಾಸಗಿಯಾಗಿಟ್ಟಿದೆ ಎನ್ನಲಾಗಿದೆ.

1994 ಡಿಸೆಂಬರ್‌ 5 ರಂದು ಕಾಶ್ಮೀರಿ ಕುಟುಂಬದಲ್ಲಿ ಜನಿಸಿರುವ ಸಾಹಿಬಾ ಬಾಲಿ, ದೆಹಲಿ ವಿವಿಯಲ್ಲಿ ಅರ್ಥಶಾಸ್ತ್ರದ ಪದವೀಧರರಾಗಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ಗಮನಸೆಳೆದಿರುವ ಇವರು ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ನಂತರ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಮೂಲಕವೂ ಜನಪ್ರೀಯರಾಗಿದ್ದಾರೆ.

2024ರಲ್ಲಿ ಐಪಿಎಲ್‌ ಬ್ರಾಡ್‌ಕಾಸ್ಟ್‌ ಟೀಮ್‌ ಸೇರಿಕೊಂಡಿದ್ದ ಸಾಹಿಬಾ ಬಾಲಿ, ಅಂದಿನಿಂದ ಮ್ಯಾಚ್‌ ಡೇಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ 2025ಯಲ್ಲೂ ಅವರು ನಿರೂಪಕಿ ಸ್ಥಾನವನ್ನು ನಿಭಾಯಿಸಿದ್ದರು.

ಇದನ್ನೂ ಓದಿ ವಿಜಯ್ ಹಜಾರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದ ರಾಹುಲ್, ಪ್ರಸಿದ್ಧ್‌ ಕೃಷ್ಣ

‘ವಾಷಿಂಗ್ಟನ್‌’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕುತೂಹಲದ ಹುಡುಕಾಟಗಳೂ ನಡೆದಿದೆ. ಚೆನ್ನೈನ ಹುಡುಗನಿಗೆ ಈ ಹೆಸರು ಬಂದಿದ್ದಾದರೂ ಹೇಗೆ ಎಂಬ ಶೋಧ ಜೋರಾಗಿಯೇ ನಡೆದಿದೆ. ಅವರ ತಂದೆ ಸುಂದರ್, ಮಗನಿಗೆ ವಾಷಿಂಗ್ಟನ್ ಎಂದೇ ನಾಮಕರಣ ಮಾಡಿದ್ದರ ಹಿಂದೆ ಒಂದು ಕಥೆ ಇದೆ. ಅದನ್ನೂ ಅವರ ತಂದೆಯೇ ಹಿಂದೊಮ್ಮೆ ಸಂದರ್ಶನದಲ್ಲಿ ತಿಳಿಸಿದ್ದರು.

'ಚಿಕ್ಕವನಿದ್ದಾಗ ಕ್ರಿಕೆಟ್ ಆಡುವುದೆಂದರೆ ಪಂಚಪ್ರಾಣವಾಗಿತ್ತು. ಆದರೆ ಮನೆಯಲ್ಲಿ ಆರ್ಥಿಕ ಅನುಕೂಲಗಳು ಕಡಿಮೆ ಇದ್ದವು. ನಮ್ಮ ಮನೆಯ ಹತ್ತಿರ ಮಾಜಿ ಯೋಧ ಪಿ.ಡಿ. ವಾಷಿಂಗ್ಟನ್ ಎಂಬುವವರಿದ್ದರು. ನಾವು ಕ್ರಿಕೆಟ್ ಆಡುತ್ತಿದ್ದ ಮೈದಾನಕ್ಕೆ ಬಂದು ಆಟ ನೋಡುತ್ತಿದ್ದರು. ನನ್ನ ಮೇಲೆ ಅದೇನೋ ವಿಶೇಷ ಪ್ರೀತಿ ಅವರಿಗೆ. ಕ್ರಿಕೆಟ್ ಬ್ಯಾಟು, ಚೆಂಡು, ಕಿಟ್, ಶಾಲೆಯ ಶುಲ್ಕ, ಸಮವಸ್ತ್ರವನ್ನೂ ನೀಡುತ್ತಿದ್ದರು. ತಮ್ಮ ಸ್ಕೂಟರ್, ಸೈಕಲ್ ಮೇಲೆ ಶಾಲೆಗೆ ಕರ್ಕೊಂಡು ಹೋಗುತ್ತಿದ್ದರು. ಅವರ ಪ್ರೋತ್ಸಾಹದಿಂದಾಗಿಯೇ ನಾನು ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗುವ ಮಟ್ಟಕ್ಕೆ ಬೆಳೆದೆ. ಮುಂದೆ ನನಗೆ ಮಗ ಜನಿಸಿದ. ನಾಮಕರಣ ಶಾಸ್ತ್ರದಲ್ಲಿ ಮಗುವಿನ ಕಿವಿಯಲ್ಲಿ ವಾಷಿಂಗ್ಟನ್ ಎಂದೇ ಕರೆದೆ’ ಎಂದು ಮಗನ ಹೆಸರಿನಲ್ಲಿರುವ ವಾಷಿಂಗ್ಟನ್‌ ಬಗ್ಗೆ ತಂದೆ ಸುಂದರ್ ಹೇಳಿದ್ದರು.