ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ashes: ಬೆನ್‌ ಸ್ಟೋಕ್ಸ್‌-ಜೋಫ್ರಾ ಆರ್ಚರ್‌ ನಡುವೆ ಮಾತಿಕ ಚಕಮಕಿ! ವಿಡಿಯೊ ವೈರಲ್‌

Ben Stokes vs Jofra: ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಣ ಆಷಸ್‌ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಆಂಗ್ಲರ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ನಡುವೆ ಮಾತಿನ ಚಕಮಕಿಯಾಗಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮೂರನೇ ಟೆಸ್ಟ್‌ ವೇಳೆ ಬೆನ್‌ ಸ್ಟೋಕ್ಸ್‌-ಜೋಫ್ರಾ ಆರ್ಚರ್‌ ನಡುವೆ ಕಿರಿಕ್‌!

ಬೆನ್‌ ಸ್ಟೋಕ್ಸ್‌-ಜೋಫ್ರಾ ಆರ್ಚರ್‌ ನಡುವೆ ಮಾತಿನ ಚಕಮಕಿ. -

Profile
Ramesh Kote Dec 18, 2025 5:03 PM

ಅಡಿಲೇಡ್: ಇಲ್ಲಿನ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ (IND vs AUS) ಆಷಸ್‌ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಆಂಗ್ಲರ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಹಾಗೂ ವೇಗದ ಬೌಲರ್‌ ಜೋಫ್ರಾ ಆರ್ಚರ್‌ (Jofra Archer) ನಡುವೆ ಮಾತಿನ ಚಕಮಕಿ ನಡೆಯಿತು. ಎರಡನೇ ದಿನ ಎರಡನೇ ಸೆಷನ್‌ನಲ್ಲಿ ಆಸ್ಟ್ರೇಲಿಯಾ ತಂಡ 326 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದ್ದ ವೇಳೆ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅರ್ಧಶತಕ ಬಾರಿಸಿದ್ದರು ಹಾಗೂ ಇಂಗ್ಲೆಂಡ್‌ ಬೌಲರ್‌ ಮೇಲೆ ದಾಳಿ ನಡೆಸಿದ್ದರು.

ಆಸ್ಟ್ರೇಲಿಯಾ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮಿಚೆಲ್‌ ಸ್ಟಾರ್ಕ್‌ ಅವರು ಇಂಗ್ಲೆಂಡ್‌ ಬೌಲರ್‌ಗಳ ಎದುರು ಆಕ್ರಮಣಕಾರಿಯಾಗಿ ಬೌಲ್‌ ಮಾಡಿದ್ದರು. ಅವರು ಸತತವಾಗಿ ಬೌಂಡರಿಗಳನ್ನು ಬಾರಿಸುವ ಮೂಲಕ 54 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಪ್ರವಾಸಿ ತಂಡದ ಬೌಲರ್‌ಗಳ ಮೇಲೆ ಸಾಕಷ್ಟು ಒತ್ತಡವನ್ನು ಹಾಕಿದ್ದರು. ಈ ವೇಳೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌, ತಮ್ಮ ತಂಡದ ಬೌಲರ್‌ಗಳ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಬುದ್ದಿವಂತಿಕೆಯಿಂದ ಬೌಲ್‌ ಮಾಡಿದ ಜೋಫ್ರಾ ಆರ್ಚರ್‌ ಅವರು ಮಿಚೆಲ್‌ ಸ್ಟಾರ್ಕ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು.

IPL 2026 Auction: ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಟಾಪ್‌ 10 ಸ್ಟಾರ್‌ ಆಟಗಾರರು!

ಮಿಚೆಲ್‌ ಸ್ಟಾರ್ಕ್‌ ಔಟ್‌ ಆದ ಬಳಿಕ ಜೋಫ್ರಾ ಆರ್ಚರ್‌ ಅವರ ಜೊತೆ ಸಂಭ್ರಮಿಸಲು ಬಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರು ವರ್ತನೆಯಲ್ಲಿ ಅಸಮಾಧಾನ ಕಾಣುತ್ತಿತ್ತು. ಅಲ್ಲದೆ, ಜೋಫ್ರಾ ಆರ್ಚರ್‌ಗೆ ಬೇಸರದೊಂದಿಗೆ ಕೆಲವೊಂದು ಪದಗಳನ್ನು ಹೇಳುತ್ತಿದ್ದರು. ಈ ವೇಳೆ ಜೋಫ್ರಾ ಆರ್ಚರ್‌ ಹಾಗೂ ಬೆನ್‌ ಸ್ಟೋಕ್ಸ್‌ ನಡುವೆ ಮಾತಿಗೆ ಮಾತು ನಡೆಯುತ್ತಿರುವಂತೆ ವಿಡಿಯೊದಲ್ಲಿ ಕಾಣುತ್ತಿದೆ. ಈ ವೇಳೆ ಸ್ಟೋಕ್ಸ್‌, ಫೀಲ್ಡ್‌ ಸೆಟ್‌ ಅಪ್‌ಗೆ ತಕ್ಕಂತೆ ಬೌಲ್‌ ಮಾಡಿ ಎಂದು ವಾದ ಮಾಡುತ್ತಿದ್ದರು. ಈ ವೇಳೆ ಆರ್ಚರ್‌ ಕೂಡ ಬೇಸರ ವ್ಯಕ್ತಪಡಿಸಿದ್ದರು.



5 ವಿಕೆಟ್‌ ಸಾಧನೆ ಮಾಡಿದ ಜೋಫ್ರಾ ಆರ್ಚರ್‌

ನಂತರ ಆಸ್ಟ್ರೇಲಿಯಾ ತಂಡದ ಇನಿಂಗ್ಸ್‌ನ ಕೊನೆಯ ವಿಕೆಟ್‌ ಅನ್ನು ಕೂಡ ಜೋಫ್ರಾ ಆರ್ಚರ್‌ ಕಿತ್ತರು. ಆ ಮೂಲಕ ಐದು ವಿಕೆಟ್‌ ಸಾಧನೆ ಮಾಡಿದರು. ಇದು ಅವರ ಟೆಸ್ಟ್‌ ವೃತ್ತಿ ಜೀವನದ ನಾಲ್ಕನೇ 5 ವಿಕೆಟ್‌ ಸಾಧನೆ ಇದಾಗಿದೆ. ಈ ಇನಿಂಗ್ಸ್‌ನಲ್ಲಿ 20.3 ಓವರ್‌ಗಳನ್ನು ಬೌಲ್‌ ಮಾಡಿದ ಜೋಫ್ರಾ ಆರ್ಚರ್‌ 53 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 371 ರನ್‌ಗಳಿಗೆ ಆಲ್‌ಔಟ್‌ ಆಯಿತು.



ಫಾಲೋ ಆನ್‌ ತಪ್ಪಿಸಿದ ಸ್ಟೋಕ್ಸ್‌-ಆರ್ಚರ್‌

ಬೌಲಿಂಗ್‌ ವೇಳೆ ಮಾತಿನ ಚಕಮಕಿ ನಡೆಸಿದ್ದ ಬೆನ್‌ ಸ್ಟೋಕ್ಸ್‌ ಹಾಗೂ ಜೋಫ್ರಾ ಆರ್ಚರ್‌ ಜೋಡಿ ಬ್ಯಾಟಿಂಗ್‌ನಲ್ಲಿ 9ನೇ ವಿಕೆಟ್‌ಗೆ 45 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿತ್ತು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಫಾಲೋ ಆನ್‌ನಿಂದ ತಪ್ಪಿಸಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ 68 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 213 ರನ್‌ಗಳನ್ನು ಕಲೆ ಹಾಕಿತ್ತು ಹಾಗೂ ಇನ್ನೂ 158 ರನ್‌ಗಳ ಹಿನ್ನಡೆಲಯಲ್ಲಿದೆ. ಅದ್ಭುತವಾಗಿ ಬ್ಯಾಟ್‌ ಮಾಡಿದ ಬೆನ್‌ ಸ್ಟೋಕ್ಸ್‌ ಅಜೇಯ 45 ರನ್‌ ಗಳಿಸಿದರೆ, ಜೋಫ್ರಾ ಆರ್ಚರ್‌ ಅಜೇಯ 30 ರನ್‌ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.