ಜೈಸ್ವಾಲ್, ರಾಹುಲ್ ದಿಟ್ಟ ಹೋರಾಟ; ಸುಸ್ಥಿತಿಯಲ್ಲಿ ಟೀಮ್ ಇಂಡಿಯಾ
New Zealand vs India 1st Test: ದಿನದಾಟ ಮುಕ್ತಾಯಕ್ಕೆ ಇನ್ನೇನು ಕೆಲವೇ ಓವರ್ಗಳು ಬಾಕಿ ಇರುವಾಗ ಉತ್ತಮ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನುಗ್ಗುತ್ತಿದ್ದ ಯಶಸ್ವಿ ಜೈಸ್ವಾಲ್ ಮ್ಯಾಟ್ ಹೆನ್ರಿ ಎಸೆತವನ್ನು ಡಿಫೆನ್ಸ್ ಮಾಡುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಚೆಂಡು ಬ್ಯಾಟ್ಗೆ ಸವರಿ ಕೀಪರ್ ಟಾಮ್ ಬ್ಲಂಡೆಲ್ ಕೈಸೇರಿತು. ಅವರು 85 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
Yashasvi Jaiswal and KL Rahul -
ವೆಲ್ಲಿಂಗ್ಟನ್, ನ.20: ಕೆ.ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ದಿಟ್ಟ ಜತೆಯಾಟದ ಬಲದಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ನ್ಯೂಜಿಲೆಂಡ್ ಗುರಿ ಹಿಂದಿಕ್ಕಿಲು ಇನ್ನು 209 ರನ್ ಬೇಕಿದೆ.
5 ವಿಕೆಟ್ನಷ್ಟಕ್ಕೆ 243 ರನ್ ಗಳಿಸಿದಲ್ಲಿಂದ ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ 368 ರನ್ ಗಳಿಸಿ ಆಲೌಟ್ ಆಯಿತು. ಮೊದಲ ದಿನದಂತೆ ಗ್ಲೆನ್ ಫಿಲಿಪ್ಸ್ ಮತ್ತು ಹೆನ್ರಿ ನಿಕೋಲ್ಸ್ ಎರಡನೇ ದಿನವೂ ಕಿವೀಸ್ ತಂಡಕ್ಕೆ ಆಸರೆಯಾದರು.
94 ರನ್ ಗಳಿಸಿದ್ದ ಗ್ಲೆನ್ ಫಿಲಿಪ್ಸ್ ಶತಕ ಬಾರಿಸಿ ಮಿಂಚಿದರು. 216 ಎಸೆತ ಎದುರಿಸಿದ ಅವರು 14 ಬೌಂಡರಿ ಸಿಡಿಸಿ 118 ರನ್ ಗಳಿಸಿ ಆಕಾಶ್ದೀಪ್ ಅವರ ಎಸೆತಕ್ಕೆ ಬೌಲ್ಡ್ ಆದರು. ಆದರೆ ಮತ್ತೊಂದು ತುದಿಯಲ್ಲಿ ಭಾರತೀಯ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದ ನಿಕೋಲ್ಸ್ 175 ರನ್ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 21 ಬೌಂಡರಿಗಳು ದಾಖಲಾಯಿತು. ಮೊದಲ ದಿನ ಮೂರು ವಿಕೆಟ್ ಪಡೆದಿದ್ದ ಅನುಭವಿ ಜಸ್ಪ್ರೀತ್ ಬುಮ್ರಾ ಶುಕ್ರವಾರ ತಮ್ಮ ಖಾತೆಗೆ ಒಂದು ವಿಕೆಟ್ ಸೇರಿಸಿದರು. ಆಕಾಶ್ದೀಪ್ ಮೂರು ವಿಕೆಟ್ ಪಡೆದರು. ತಂಡದ ಏಕೈಕ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆಯಲು ವಿಫಲರಾದರು.
A solid Day 2 for #TeamIndia 🇮🇳 159/1 at Stumps in Wellington, with KL Rahul (52*) and Devdutt Padikkal (16*) unbeaten in the middle 👏 Scorecard ▶️ https://t.co/SaMcNXtAVG #NZvIND https://t.co/9YuidOXC6D
— BCCI (@BCCI) November 20, 2026
ಫಿಲಿಪ್ಸ್ ಈ ಶತಕದೊಂದಿಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತದ ವಿರುದ್ಧ ಅಂತರರಾಷ್ಟ್ರೀಯ ಟಿ20, ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೆನ್ರಿ ನಿಕೋಲ್ಸ್, ಭಾರತ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಮೂರನೇ ಕ್ರಮಾಂಕದ ಬ್ಯಾಟರ್ವೊಬ್ಬರು ಗಳಿಸಿದ ಗರಿಷ್ಠ ರನ್ಗಳ ದಾಖಲೆಯನ್ನು ಮುರಿದರು. ಹಿಂದಿನ ದಾಖಲೆ ಆಂಡ್ರ್ಯೂ ಜೋನ್ಸ್(170*) ಅವರ ಹೆಸರಿನಲ್ಲಿತ್ತು.
ರಾಹುಲ್-ಜೈಸ್ವಾಲ್ ದಿಟ್ಟ ಹೋರಾಟ
ನ್ಯೂಜಿಲೆಂಡ್ನ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ತಾಳ್ಮೆಯುತ ಮತ್ತು ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ನೆರವಾದರು. ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಮತ್ತು ಕೈಲ್ ಜೇಮಿಸನ್ ಅವರ ಬೌಲಿಂಗ್ ಎದುರು, ವಿಶೇಷವಾಗಿ ಹೊಸ ಚೆಂಡು ಚೆನ್ನಾಗಿ ಸ್ವಿಂಗ್, ಬೌನ್ಸರ್ ಆಗುತ್ತಿದ್ದರೂ ದಿಟ್ಟವಾಗಿ ನಿಂತು 130 ರನ್ಗಳ ಜೊತೆಯಾಟವನ್ನು ನೀಡಿದರು.
Yashasvi Bhava ✨ A fluent half-century brought up with a gorgeous straight drive. Watch the HERO VIDA India Tour of New Zealand, 1st Test Day 2, LIVE NOW on Sony Sports Network TV channels & Sony LIV. #SonySportsNetwork #SonyLIV #NZvIND https://t.co/Vk05rOU7Ni
— Sony Sports Network (@SonySportsNetwk) November 20, 2026
ಈ ಪ್ರದರ್ಶನವು ಭಾರತವನ್ನು ಮತ್ತೆ ಪಂದ್ಯಕ್ಕೆ ಮರಳುವಂತೆ ಮಾಡಿದ್ದಲ್ಲದೆ, ನ್ಯೂಜಿಲೆಂಡ್ನಲ್ಲಿ ನಡೆಯುವ ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಆರಂಭಿಕ ಜೋಡಿಯೊಂದು ಶತಕದ ಜೊತೆಯಾಟವನ್ನು ದಾಖಲಿಸಲು ಇದ್ದ 32 ವರ್ಷಗಳ ಸುದೀರ್ಘ ಕಾಯುವಿಕೆಗೂ ತೆರೆ ಎಳೆಯಿತು.
ಭಾರತದ ವಿರುದ್ಧ ಇತಿಹಾಸ ಸೃಷ್ಟಿಸಿದ ಹೆನ್ರಿ ನಿಕೋಲ್ಸ್
ದಿನದಾಟ ಮುಕ್ತಾಯಕ್ಕೆ ಇನ್ನೇನು ಕೆಲವೇ ಓವರ್ಗಳು ಬಾಕಿ ಇರುವಾಗ ಉತ್ತಮ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನುಗ್ಗುತ್ತಿದ್ದ ಯಶಸ್ವಿ ಜೈಸ್ವಾಲ್ ಮ್ಯಾಟ್ ಹೆನ್ರಿ ಎಸೆತವನ್ನು ಡಿಫೆನ್ಸ್ ಮಾಡುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಚೆಂಡು ಬ್ಯಾಟ್ಗೆ ಸವರಿ ಕೀಪರ್ ಟಾಮ್ ಬ್ಲಂಡೆಲ್ ಕೈಸೇರಿತು. ಅವರು 85 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಸದ್ಯ ರಾಹುಲ್(52) ಅರ್ಧಶತಕ ಮತ್ತೊಂದು ತುದಿಯಲ್ಲಿ ದೇವದತ್ತ ಪಡಿಕ್ಕಲ್ (16) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.