ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು ದಾಖಲೆ ಬರೆದ ಬುಮ್ರಾ; ಈ ಸಾಧನೆಗೈದ ಮೊದಲ ಭಾರತೀಯ

Jasprit Bumrah: ಡಕೆಟ್ ಅವರ ವಿಕೆಟ್ ಕೀಳುವ ಮೂಲಕ ಬುಮ್ರಾ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಮಂಗಳವಾರ (ಜುಲೈ 14) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ಪರ ಡಕೆಟ್ 45 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಸಂಕಷ್ಟ ಎದುರಿಸಿದರು.

ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು ದಾಖಲೆ ಬರೆದ ಬುಮ್ರಾ

Jasprit Bumrah -

Abhilash BC
Abhilash BC Jul 17, 2026 1:02 PM

ಕಾರ್ಡಿಫ್‌, ಜು. 17: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಗುರುವಾರ (ಜುಲೈ 16) ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ, 32 ವರ್ಷದ ಬಲಗೈ ವೇಗಿ ಇನ್ನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಬೆನ್ ಡಕೆಟ್ ಅವರ ವಿಕೆಟ್ ಪಡೆಯವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಡಕೆಟ್ ಅವರ ವಿಕೆಟ್ ಕೀಳುವ ಮೂಲಕ ಬುಮ್ರಾ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಮಂಗಳವಾರ (ಜುಲೈ 14) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ಪರ ಡಕೆಟ್ 45 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಸಂಕಷ್ಟ ಎದುರಿಸಿದರು.

ಎರಡನೇ ಏಕದಿನ ಪಂದ್ಯದಲ್ಲಿ ಬುಮ್ರಾ ಬೌಲಿಂಗ್‌ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಪ್ರಭಾವ ಬೀರಿದರು. 13 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿದವು.



ಶ್ರೇಯಸ್ ಅಯ್ಯರ್ (66) ಅವರೊಂದಿಗೆ ಒಂಬತ್ತನೇ ವಿಕೆಟ್‌ಗೆ 19 ಎಸೆತಗಳಲ್ಲಿ 23 ರನ್ ಸೇರಿಸಿದ ಬುಮ್ರಾ, ಭಾರತದ ಇನ್ನಿಂಗ್ಸ್‌ನ 43 ನೇ ಓವರ್‌ನಲ್ಲಿ ಇಂಗ್ಲೆಂಡ್ ವೇಗಿ ಸಾಕಿಬ್ ಮಹಮೂದ್‌ಗೆ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ತಂಡವನ್ನು 230 ರನ್‌ಗಳ ಗಡಿ ದಾಟಿಸಿದರು.

ಪಂದ್ಯ ಸೋತ ಭಾರತ

ಪಂದ್ಯದ ಫಲಿತಾಂಶದ ಬಗ್ಗೆ ನೋಡುವುದಾದರೆ, ಭಾರತ 4 ವಿಕೆಟ್‌ ಅಂತರದ ಸೋಲಿಗೆ ತುತ್ತಾಯಿತು. ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ, ಉತ್ತಮ ಆರಂಭ ಪಡೆದರೂ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 44 ಓವರ್‌ಗಳಲ್ಲಿ 233 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವಿರಾಟ್ (65) ಮತ್ತು ಶ್ರೇಯಸ್ ಅಯ್ಯರ್ (66) ಅವರು ಆಸರೆಯಾದರು.

ದಿಗ್ಗಜ ಸಂಗಕ್ಕಾರ ವಿಶ್ವ ದಾಖಲೆ ಮುರಿದ ಕಿಂಗ್‌ ಕೊಹ್ಲಿ

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಜೋ ರೂಟ್‌ ಅವರ ಅಜೇಯ 99 ರನ್‌ ಏಕಾಂಗಿ ಹೋರಾಟದ ನೆರವಿನಿಂದ ತಂಡವು 6 ವಿಕೆಟ್‌ಗೆ 235 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಕೆಲ ಕ್ರಮಾಂಕದಲ್ಲಿ ವಿಲ್‌ ಜಾಕ್ಸ್‌ 30 ರನ್‌ ಗಳಿಸಿದರೆ, ವೇಗಿ ಗಸ್ ಅಟ್ಕಿನ್ಸನ್ ಅಜೇಯ 23 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.