ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jitesh Sharma: ಧೋನಿಯ ದಾಖಲೆ ಮುರಿದ ಆರ್‌ಸಿಬಿಯ ಜಿತೇಶ್‌ ಶರ್ಮ

RCB vs LSG: ಜಿತೇಶ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ಮುರಿಯದ ಐದನೇ ವಿಕೆಟ್‌ಗೆ 107* ರನ್‌ಗಳ ಜತೆಯಾಟ ನಡೆಸುವ ಮೂಲಕ ಆರ್‌ಸಿಬಿ ಪರ 5ನೇ ವಿಕೆಟ್ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಅತ್ಯಧಿಕ ಮೊತ್ತದ ಜತೆಯಾಟ ನಡೆಸಿದ ಜೋಡಿ ಎನಿಸಿಕೊಂಡಿತು.

ಧೋನಿಯ ದಾಖಲೆ ಮುರಿದ ಆರ್‌ಸಿಬಿಯ ಜಿತೇಶ್‌ ಶರ್ಮ

Abhilash BC Abhilash BC May 28, 2025 7:47 AM

ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌(RCB vs LSG) ವಿರುದ್ಧದ ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿ ಆರ್‌ಸಿಬಿಗೆ ಅಸಾಮಾನ್ಯ ಗೆಲುವು ತಂದುಕೊಟ್ಟ ಹಂಗಾಮಿ ನಾಯಕ ಜಿತೇಶ್‌ ಶರ್ಮ(Jitesh Sharma) ಅವರು ತಮ್ಮ ಈ ಇನಿಂಗ್ಸ್‌ ಮೂಲಕ ಮಹೇಂದ್ರ ಸಿಂಗ್‌ ಧೋನಿಯ(MS Dhoni) 7 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ.

ಚೇಸಿಂಗ್‌ ವೇಳೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಜಿತೇಶ್‌ ಶರ್ಮ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಒಟ್ಟು 33 ಎಸೆತ ಎದುರಿಸಿದ ಅವರು ಬರೋಬ್ಬರಿ 8 ಬೌಂಡರಿ ಮತ್ತು 6 ಸಿಕ್ಸರ್‌ ಸಿಡಿಸಿ ಅಜೇಯ 85 ರನ್‌ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಯಶಸ್ವಿ ರನ್-ಚೇಸಿಂಗ್‌ ವೇಳೆ 6ನೇ ಸ್ಥಾನ ಅಥವಾ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿ ಬ್ಯಾಟಿಂಗ್‌ ನಡೆಸಿ ಅತ್ಯಧಿಕ ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ತಂಡದ ಎಂ.ಎಸ್‌ ಧೋನಿ ಹೆಸರಿನಲ್ಲಿತ್ತು. ಧೋನಿ 2018 ರಲ್ಲಿ ಆರ್‌ಸಿಬಿ ವಿರುದ್ಧ ಅಜೇಯ 70 ರನ್‌ ಬಾರಿಸಿದ್ದರು.



ಜತೆಯಾಟದಲ್ಲೂ ದಾಖಲೆ

ಜಿತೇಶ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ಮುರಿಯದ ಐದನೇ ವಿಕೆಟ್‌ಗೆ 107* ರನ್‌ಗಳ ಜತೆಯಾಟ ನಡೆಸುವ ಮೂಲಕ ಆರ್‌ಸಿಬಿ ಪರ 5ನೇ ವಿಕೆಟ್ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಅತ್ಯಧಿಕ ಮೊತ್ತದ ಜತೆಯಾಟ ನಡೆಸಿದ ಜೋಡಿ ಎನಿಸಿಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಎಬಿ ಡಿವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ(91* ರನ್‌) ಜೋಡಿ ಹೆಸರಿನಲ್ಲಿತ್ತು. ಈ ಜೋಡಿ 2016 ರ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಈ ಜತೆಯಾಟ ನಡೆಸಿದ್ದರು.

ಇದನ್ನೂ ಓದಿ IPL 2025: ಇನ್‌ಸ್ಟಾಗ್ರಾಮ್‌ನಲ್ಲಿಯೂ ಎಲ್ಲಾ ತಂಡಗಳನ್ನು ಹಿಂದಿಕ್ಕಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 3 ವಿಕೆಟಿಗೆ 227 ರನ್‌ ಪೇರಿಸಿದರೆ, ಆರ್‌ಸಿಬಿ ತಂಡವು ಈ ಬೃಹತ್‌ ಮೊತ್ತವನ್ನು 18.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ ನಷ್ಟಕ್ಕೆ 230 ರನ್‌ ಬಾರಿಸಿ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಗೆಲುವಿನ ರುವಾರಿ ಜಿತೇಶ್‌ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.