WPL Retentions: ಲಾರಾ ವೊಲ್ವಾರ್ಡ್ಟ್, ದೀಪ್ತಿ ಶರ್ಮಾ ಬಿಡುಗಡೆ
ಯುಪಿ ವಾರಿಯರ್ಸ್ ತಂಡದ ಬಳಿ ಅತ್ಯಧಿಕ ಹಣ ಉಳಿತಾಯವಿದೆ. ಫ್ರಾಂಚೈಸಿ ಬಳಿ 14.5 ಕೋಟಿ ಮೊತ್ತವಿದೆ. ಆ ಬಳಿಕ ಗುಜರಾತ್ ಜೈಂಟ್ಸ್ ಬಳಿ 9 ಕೋಟಿ, ಆರ್‌ಸಿಬಿ ಬಳಿ 6 ಕೋಟಿ ಮೊತ್ತವಿದೆ. 5 ಆಟಗಾರ್ತಿಯನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಿ ಅತಿ ಕಡಿಮೆ ಮೊತ್ತ ಉಳಿದಿದೆ. ಅಲ್ಲದೆ ಈ ತಂಡಕ್ಕೆ ರೈಟ್ ಟು ಮ್ಯಾಚ್ (RTM) ಆಯ್ಕೆ ಲಭ್ಯವಿರುದಿಲ್ಲ.
ಆರ್‌ಸಿಬಿಯಲ್ಲೇ ಉಳಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ -
ಮುಂಬಯಿ: 2026ರ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಹರಾಜಿಗೂ(WPL 2026) ಮುನ್ನ ಆಟಗಾರ್ತಿಯರ ರಿಟೇನ್ಷನ್(WPL Retentions) ಪಟ್ಟಿ ಪ್ರಕಟಗೊಂಡಿದೆ. ಎಲ್ಲ ಐದು ಫ್ರಾಂಚೈಸಿಗಳು ಗುರುವಾರ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಆಲ್‌ರೌಂಡರ್ ದೀಪ್ತಿ ಶರ್ಮ(Deepti Sharma), ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್(Laura Wolvaardt) ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಏಕದಿನ ವಿಶ್ವಕಪ್ ಗೆದ್ದರೂ ನಾಯಕಿ ಹರ್ಮನ್‌ಪ್ರೀತ್‌ಗಿಂತ ಹೆಚ್ಚಿನ ಬೆಲೆಗೆ ನ್ಯಾಟ್-ಸ್ಕಿವರ್ ಬ್ರಂಟ್ ಅವರನ್ನು ಮುಂಬೈ ಉಳಿಸಿಕೊಂಡಿದೆ.
ನಿಯಮಗಳ ಪ್ರಕಾರ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿತ್ತು ಹೀಗಾಗಿ ಗುಜರಾತ್ ಜೈಂಟ್ಸ್ ತಂಡವು ಆಸ್ಟ್ರೇಲಿಯಾದ ಜೋಡಿ ಬೆತ್ ಮೂನಿ ಮತ್ತು ಆಶ್ಲೀ ಗಾರ್ಡ್ನರ್ ಅವರನ್ನು ಆಯ್ಕೆ ಮಾಡಿ ವೋಲ್ವಾರ್ಡ್ ಅವರನ್ನು ಕೈಬಿಟಿತು. ವೋಲ್ವಾರ್ಡ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಆಟಗಾರ್ತಿಯಾಗಿದ್ದರು. ಹರಾಜಿನಲ್ಲಿ ಅವರು ದೊಡ್ಡ ಮೊತ್ತ ಪಡೆಯುವ ನಿರೀಕ್ಷೆಯಿದೆ.
ಭಾರತದ ಪ್ರಮುಖ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ ಉಳಿಸಿಕೊಳ್ಳದ್ದು ಅಚ್ಚರಿಗೆ ಕಾರಣವಾಗಿದೆ. ವಿಶ್ವಕಪ್ ವಿಜೇತ ಆಟಗಾರ್ತಿ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ರಿಚಾ ಘೋಷ್ ಮತ್ತು ಜೆಮಿಮಾ ರೊಡ್ರಿಗಸ್‌ರಂತಹ ಇತರ ಭಾರತೀಯ ತಾರೆಗಳನ್ನು ಆಯಾ ತಂಡಗಳು ಉಳಿಸಿಕೊಂಡಿವೆ.
ಆರ್‌ಸಿಬಿಯಲ್ಲೇ ಉಳಿದ ಶ್ರೇಯಾಂಕ
ಗಾಯದಿಂದಾಗಿ ಕಳೆದ ಆವೃತ್ತಿಯಿಂದ ಹೊರಗುಳಿದಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ ಆರ್‌ಸಿಬಿ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅವರನ್ನು 60 ಲಕ್ಷ ರೂ.ಗೆ ರೀಟೇನ್ ಮಾಡಿಕೊಳ್ಳಲಾಗಿದೆ. ವಿದೇಶಿ ಆಟಗಾರ್ತಿಯಾಗಿ ಎಲ್ಲಿಸ್ ಪೆರ್ರಿ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ರೇಣುಕಾ ಸಿಂಗ್ ಠಾಕೂರ್‌ರನ್ನು ಕೈಬಿಡಲಾಗಿದೆ. ಮೊದಲ ಆಯ್ಕೆಯ ಆಟಗಾರ್ತಿಯಾಗಿ ಸ್ಮೃತಿ ಮಂಧಾನ, ಎರಡನೇ ಆಟಗಾರ್ತಿಯಾಗಿ ರಿಚಾ ಘೋಷ್ ಅವರನ್ನು ರಿಟೇನ್ ಮಾಡಲಾಗಿದೆ.
ಯುಪಿ ವಾರಿಯರ್ಸ್ ತಂಡದ ಬಳಿ ಅತ್ಯಧಿಕ ಹಣ ಉಳಿತಾಯವಿದೆ. ಫ್ರಾಂಚೈಸಿ ಬಳಿ 14.5 ಕೋಟಿ ಮೊತ್ತವಿದೆ. ಆ ಬಳಿಕ ಗುಜರಾತ್ ಜೈಂಟ್ಸ್ ಬಳಿ 9 ಕೋಟಿ, ಆರ್‌ಸಿಬಿ ಬಳಿ 6 ಕೋಟಿ ಮೊತ್ತವಿದೆ. 5 ಆಟಗಾರ್ತಿಯನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಿ ಅತಿ ಕಡಿಮೆ ಮೊತ್ತ ಉಳಿದಿದೆ. ಅಲ್ಲದೆ ಈ ತಂಡಕ್ಕೆ ರೈಟ್ ಟು ಮ್ಯಾಚ್ (RTM) ಆಯ್ಕೆ ಲಭ್ಯವಿರುದಿಲ್ಲ.
ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿ
ಮುಂಬೈ ಇಂಡಿಯನ್ಸ್: ನಾಟ್-ಸ್ಕಿವರ್ ಬ್ರಂಟ್ (3.5 ಕೋಟಿ), ಹರ್ಮನ್‌ಪ್ರೀತ್ ಕೌರ್ (2.5 ಕೋಟಿ), ಹೇಲಿ ಮ್ಯಾಥ್ಯೂಸ್ (1.75 ಕೋಟಿ), ಅಮನ್‌ಜೋತ್ ಕೌರ್ (1 ಕೋಟಿ), ಜಿ ಕಮಲಿನಿ (50 ಲಕ್ಷ)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (3.5 ಕೋಟಿ), ರಿಚಾ ಘೋಷ್ (2.75 ಕೋಟಿ), ಎಲ್ಲಿಸ್ ಪೆರ್ರಿ (2 ಕೋಟಿ), ಶ್ರೇಯಾಂಕ ಪಾಟೀಲ್ (60 ಲಕ್ಷ).
ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್ನರ್ (3.5 ಕೋಟಿ), ಬೆತ್ ಮೂನಿ (2.5 ಕೋಟಿ).
ಯುಪಿ ವಾರಿಯರ್ಜ್: ಶ್ವೇತಾ ಸೆಹ್ರಾವತ್ (50 ಲಕ್ಷ).
ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗಸ್ (2.2 ಕೋಟಿ), ಶಫಾಲಿ ವರ್ಮಾ (2.2 ಕೋಟಿ), ಅನ್ನಾಬೆಲ್ ಸದರ್ಲ್ಯಾಂಡ್ (2.2 ಕೋಟಿ), ಮರಿಜಾನ್ನೆ ಕಪ್ (2.2 ಕೋಟಿ), ನಿಕಿ ಪ್ರಸಾದ್ (50 ಲಕ್ಷ).
ಇದನ್ನೂ ಓದಿ IND vs AUS 4th T20: ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಆಸ್ಟ್ರೇಲಿಯಾ; 4ನೇ ಟಿ20 ಗೆದ್ದ ಭಾರತ
ಯಾವ ತಂಡದಲ್ಲಿ ಎಷ್ಟು ಹಣವಿದೆ?
ಯುಪಿ ವಾರಿಯರ್ಜ್-14.5 ಕೋಟಿ
ಗುಜರಾತ್ ಜೈಂಟ್ಸ್-9 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು-6.15 ಕೋಟಿ
ಮುಂಬೈ ಇಂಡಿಯನ್ಸ್-5.75 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್-5.7 ಕೋಟಿ