ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿ20ಯಲ್ಲಿ ಇತಿಹಾಸ ನಿರ್ಮಿಸಿದ ಮಿಚೆಲ್ ಮಾರ್ಷ್; ಈ ಸಾಧನೆ ಮಾಡಿದ ಮೊದಲ ಆಸ್ಟ್ರೇಲಿಯಾ ಕ್ರಿಕೆಟಿಗ

Mitchell Marsh: ಹಂಡ್ರೆಡ್ ಲೀಗ್‌ನಲ್ಲಿ ನಾಲ್ಕು ಅರ್ಧಶತಕಗಳನ್ನು ಗಳಿಸಿರುವ ಮಾರ್ಷ್‌, ಉಳಿದ ಪಂದ್ಯಾವಳಿಯಲ್ಲಿ ಕನಿಷ್ಠ 51 ರನ್ ಗಳಿಸಿದರೆ, ಸ್ಪರ್ಧೆಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯಲಿದ್ದಾರೆ. ಪ್ರಸ್ತುತ ದಾಖಲೆ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೇಮ್ಸ್ ವಿನ್ಸ್ ಹೆಸರಿನಲ್ಲಿದೆ.

ಟಿ20ಯಲ್ಲಿ ವಿಶೇಷ ದಾಖಲೆ ನಿರ್ಮಿಸಿದ ಮಿಚೆಲ್ ಮಾರ್ಷ್

Mitchell Marsh -

Abhilash BC
Abhilash BC Aug 11, 2026 11:27 AM

ಸಿಡ್ನಿ, ಆ.11: ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಮಿಚೆಲ್ ಮಾರ್ಷ್‌ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ 1,500 ಟಿ20 ರನ್ ಪೂರ್ತಿಗೊಳಿಸಿದ ಆಸ್ಟ್ರೇಲಿಯಾದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ವೆಲ್ಷ್ ಫೈರ್ ವಿರುದ್ಧದ 'ದಿ ಹಂಡ್ರೆಡ್ʼ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಲೀಡ್ಸ್ ಪರ ಆಡುವಾಗ ಈ ಸಾಧನೆ ಮಾಡಿದರು.

ವೆಲ್ಷ್ ಫೈರ್ ವಿರುದ್ಧ 34 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಮಾರ್ಷ್ 2026 ರಲ್ಲಿ 35 ಪಂದ್ಯಗಳಲ್ಲಿ 1,502 ರನ್ ಗಳಿಸಿದರು. ಇದುವರೆಗೆ ಆಸೀಸ್‌ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಟಿ20 ರನ್ ಗಳಿಸಿದ ದಾಖಲೆ ಟಿಮ್ ಡೆವಿಡ್ ಹೆಸರಿನಲ್ಲಿತ್ತು. ಅವರು 2022 ರಲ್ಲಿ ಏಳು ವಿಭಿನ್ನ ತಂಡಗಳಿಗಾಗಿ 73 T20 ಪಂದ್ಯಗಳಲ್ಲಿ 1,462 ರನ್ ಗಳಿಸಿದ್ದರು.

2026 ರಲ್ಲಿ, ಮಾರ್ಷ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್, ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಟಿ೨೦ಐಗಳಲ್ಲಿ ಆಸ್ಟ್ರೇಲಿಯಾ ಮತ್ತು ಪುರುಷರ ಹಂಡ್ರೆಡ್ ಲೀಗ್‌ ಪಂದ್ಯಗಳಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆಲ್‌ರೌಂಡರ್ ಆಸ್ಟ್ರೇಲಿಯಾದ ಏಳು T20I ಗಳಲ್ಲಿ 230 ರನ್ ಗಳಿಸಿದ್ದಾರೆ ಮತ್ತು 13 ಪಂದ್ಯಗಳಲ್ಲಿ 563 ರನ್‌ಗಳೊಂದಿಗೆ 2026 IPL ಋತುವನ್ನು ಪೂರ್ಣಗೊಳಿಸಿದ್ದಾರೆ. ಎಂಟು ಬಿಬಿಎಲ್‌ ಪಂದ್ಯಗಳಲ್ಲಿ 335 ರನ್‌ಗಳನ್ನು ಕಲೆಹಾಕಿದ್ದಾರೆ. ಪ್ರಸ್ತುತ ಪುರುಷರ ಹಂಡ್ರೆಡ್ ಲೀಗ್‌ನಲ್ಲಿ ಏಳು ಪಂದ್ಯಗಳಿಂದ 374 ರನ್‌ಗಳೊಂದಿಗೆ ಅತ್ಯಧಿಕ ರನ್‌ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮತ್ತೊಂದು ದಾಖಲೆ ಕಣ್ಣಿಟ್ಟ ಮಾರ್ಷ್‌

ಹಂಡ್ರೆಡ್ ಲೀಗ್‌ನಲ್ಲಿ ನಾಲ್ಕು ಅರ್ಧಶತಕಗಳನ್ನು ಗಳಿಸಿರುವ ಮಾರ್ಷ್‌, ಉಳಿದ ಪಂದ್ಯಾವಳಿಯಲ್ಲಿ ಕನಿಷ್ಠ 51 ರನ್ ಗಳಿಸಿದರೆ, ಸ್ಪರ್ಧೆಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯಲಿದ್ದಾರೆ. ಪ್ರಸ್ತುತ ದಾಖಲೆ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೇಮ್ಸ್ ವಿನ್ಸ್ ಹೆಸರಿನಲ್ಲಿದೆ. 2024ರ ಆವೃತ್ತಿಯಲ್ಲಿ ಅವರು ಸದರ್ನ್ ಬ್ರೇವ್ ಪರ 10 ಪಂದ್ಯಗಳಲ್ಲಿ 424 ರನ್ ಗಳಿಸಿದ್ದರು.

18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಲಂಕಾದಲ್ಲಿ ಅಗ್ನಿಪರೀಕ್ಷೆ!

ಮಾರ್ಷ್ ಆಸ್ಟ್ರೇಲಿಯಾ ಪರ ಇತಿಹಾಸ ನಿರ್ಮಿಸಿದ್ದರೂ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದ ಒಟ್ಟಾರೆ ದಾಖಲೆಯನ್ನು ಮುರಿಯಲು ಅವರು ಇನ್ನೂ ಬಹಳ ದೂರ ಸಾಗಬೇಕಾಗಿದೆ. ಆ ದಾಖಲೆ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ನಿಕೋಲಸ್ ಪೂರನ್ ಅವರ ಹೆಸರಿನಲ್ಲಿದೆ. ಅವರು 2024 ರಲ್ಲಿ 76 ಟಿ20 ಪಂದ್ಯಗಳಲ್ಲಿ 2,331 ರನ್ ಗಳಿಸಿದ್ದರು.

ಈ ವರ್ಷ ಮಾರ್ಷ್ ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. 2026 ರಲ್ಲಿ ಟಿ 20 ಕ್ರಿಕೆಟ್‌ನಲ್ಲಿ 93 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ಮತ್ತು ಕ್ಯಾಲೆಂಡರ್ ವರ್ಷದಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಆಸ್ಟ್ರೇಲಿಯನ್ ಆಟಗಾರನಾಗಲು ಅವರಿಗೆ ಕೇವಲ ಏಳು ಸಿಕ್ಸರ್‌ಗಳು ಬೇಕಾಗಿದೆ.