Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ
Most wickets For Asia Cup: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಏಷ್ಯಾಕಪ್ ಟೂರ್ನಿಯ ಅತ್ಯಧಿಕ ವಿಕೆಟ್ ಕಿತ್ತ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಜಡೇಜಾ 20 ಪಂದ್ಯಗಳಿಂದ 25 ವಿಕೆಟ್ ಕಡೆವಿದ್ದಾರೆ. ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕಾರಣ ಅವರು ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ.


ಬೆಂಗಳೂರು: ಈ ಬಾರಿಯ ಏಷ್ಯಾ ಕಪ್(Asia Cup 2025) ಕ್ರಿಕೆಟ್ ಟೂರ್ನಿ 17ನೇ ಆವೃತ್ತಿಯಾಗಿದೆ. ಈ ಹಿಂದಿನ 16 ಆವೃತ್ತಿಯ ಟೂರ್ನಿಯಲ್ಲಿ ಹಲವು ಆಟಗಾರರು ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ(Most wickets For Asia Cup) ಕುರಿತ ಮಾಹಿತಿಯೊಂದನ್ನು ನೋಡೊಣ. ಅಗ್ರ ಮೂರು ಸ್ಥಾನದಲ್ಲಿ ಶ್ರೀಲಂಕಾದ ಬೌಲರ್‌ಗಳೇ ಕಾಣಿಸಿಕೊಂಡಿದ್ದಾರೆ.
ಮುತ್ತಯ್ಯ ಮುರಳೀಧರನ್
ಇದುವರೆಗಿನ ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತಿರುವ ದಾಖಲೆ ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 1995-2010ರ ತನಕ 24 ಪಂದ್ಯಗಳನ್ನಾಡಿ 30 ವಿಕೆಟ್ ಉರುಳಿಸಿದ್ದಾರೆ. ಇದರಲ್ಲಿ 31 ಕ್ಕೆ 5 ಅತ್ಯುತ್ತಮ ದಾಖಲೆಯಾಗಿದೆ.
ಲಸಿತ್ ಮಾಲಿಂಗ
ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅವರು ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದಾರೆ. ಅವರು ಒಟ್ಟು 14 ಪಂದ್ಯಗಳಿಂದ 29 ವಿಕೆಟ್ ಕಿತ್ತಿದ್ದಾರೆ. 2018ರ ಆವೃತ್ತಿಯಲ್ಲಿ ಅವರು ಕೊನೆಯ ಬಾರಿಗೆ ಏಷ್ಯಾ ಕಪ್ ಆಡಿದ್ದರು.
ಅಜಂತಾ ಮೆಂಡೀಸ್
ಮಾಜಿ ಸ್ಪಿನ್ನರ್, ಅಜಂತಾ ಮೆಂಡೀಸ್ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಮೂರನೇ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎಂಬ ದಾಖಲೆ ಹೊಂದಿದ್ದಾರೆ. ಅವರು 2008-2014 ರ ತನಕ ಒಟ್ಟು ಕೇವಲ 8 ಪಂದ್ಯಗಳಿಂದ 26 ವಿಕೆಟ್ ಉರುಳಿಸಿದ್ದಾರೆ. 13 ರನ್‌ಗೆ 6 ವಿಕೆಟ್ ಕಿತ್ತದ್ದು ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.
ಸಯೀದ್ ಅಜ್ಮಲ್
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ 12 ಪಂದ್ಯಗಳಿಂದ 25 ವಿಕೆಟ್ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ರವೀಂದ್ರ ಜಡೇಜಾ
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಏಷ್ಯಾಕಪ್ ಟೂರ್ನಿಯ ಅತ್ಯಧಿಕ ವಿಕೆಟ್ ಕಿತ್ತ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಜಡೇಜಾ 20 ಪಂದ್ಯಗಳಿಂದ 25 ವಿಕೆಟ್ ಕಡೆವಿದ್ದಾರೆ. ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕಾರಣ ಅವರು ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು